ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣಾ ಅಕ್ರಮ ಕಂಡುಬಂದಲ್ಲಿ ಕ್ರಮ: ಸಹಾಯಕ ಚುನಾವಣಾಧಿಕಾರಿ

Published 10 ಏಪ್ರಿಲ್ 2024, 15:47 IST
Last Updated 10 ಏಪ್ರಿಲ್ 2024, 15:47 IST
ಅಕ್ಷರ ಗಾತ್ರ

ಪಿರಿಯಾಪಟ್ಟಣ: ‘ಅಂಗವಿಕಲರು ಮತ್ತು 85 ವರ್ಷ ಮೇಲ್ಪಟ್ಟ ವ್ಯಕ್ತಿಗಳಿಗೆ ಅವರು ವಾಸಿಸುತ್ತಿರುವ ಸ್ಥಳಕ್ಕೆ ತೆರಳಿ ಮತದಾನವನ್ನು ಮಾಡಿಸಲು ಮೂರು ದಿನ ನಿಗದಿಗೊಳಿಸಲಾಗಿದೆ’ ಎಂದು ಸಹಾಯಕ ಚುನಾವಣಾಧಿಕಾರಿ ಜಿ.ಡಿ.ಶೇಖರ್ ತಿಳಿಸಿದರು.

ತಾಲ್ಲೂಕು ಕಚೇರಿಯಲ್ಲಿ ಬುಧವಾರ ಮಾತನಾಡಿ, ‘ತಾಲ್ಲೂಕಿನಲ್ಲಿ 80 ವರ್ಷ ಮೇಲ್ಪಟ್ಟ 148 ಮತದಾರರು ಮತ್ತು 98 ಅಂಗವಿಕಲ ಮತದಾರರು ಮನೆಯಲ್ಲಿಯೇ ಮತದಾನ ಮಾಡಲು ಒಪ್ಪಿಗೆ ಸೂಚಿಸಿದ್ದಾರೆ. ಅವರಿಗೆ ಏ.14 ರಿಂದ 16 ವರೆಗೂ ಮತದಾನ ಮಾಡಿಸಲು 11 ತಂಡಗಳನ್ನು ರಚಿಸಿ 11 ಮಾರ್ಗಗಳನ್ನು ಗೊತ್ತು ಪಡಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ಚುನಾವಣಾ ಚೆಕ್‌ಪೋಸ್ಟ್ ತಪಾಸಣೆಯ ವೇಳೆ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ₹5.72 ಲಕ್ಷ ಜಪ್ತಿ ಮಾಡಲಾಗಿದೆ, ಬಾರ್ ಮತ್ತು ರೆಸ್ಟೋರೆಂಟ್‌ಗಳನ್ನು ತಪಾಸಣೆ ಮಾಡಲಾಗುತ್ತಿದೆ. ಅಬಕಾರಿ ಇಲಾಖೆಯಿಂದ 47 ಪ್ರಕರಣಗಳನ್ನು ದಾಖಲಿಸಿ  ₹31 ಸಾವಿರ ಮೌಲ್ಯದ 71 ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿದೆ. ವಿಷಲ್ ಆಪ್‌ಮೂಲಕ ಬಂದ 62 ದೂರುಗಳ ಪೈಕಿ 40 ದೂರು ಗಳನ್ನು ಇತ್ಯರ್ಥಪಡಿಸಲಾಗಿದೆ’ ಎಂದು ತಿಳಿಸಿದರು.

ಚುನಾವಣೆಯ ಸಂಬಂದ ಎಲ್ಲಾ ಪಕ್ಷಗಳ ಮುಖಂಡರೊಂದಿಗೆ ಸಭೆ ಚುನಾವಣೆಯ ಬಗ್ಗೆ ಸೂಚನೆ ನೀಡಲಾಗಿದ್ದು. ನೀತಿಸಂಹಿತೆ, ಮನೆಮನೆ ಮತದಾನ, ಭೂತ್‌ಗಳ ಮಾಹಿತಿ, ಸಭೆ ಸಮಾರಂಭಗಳಿಗೆ ಅನುಮತಿ ಪಡೆಯುವ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಯಿತು.

ತಹಶೀಲ್ದಾರ್ ಜಿ.ಸುರೇಂದ್ರಮೂರ್ತಿ, ಉಪ ತಹಶೀಲ್ದಾರ್ ದ್ರಾಕ್ಷಾಯಿಣಿ, ಶಿರಸ್ಥೇದಾರ್ ಶಕೀಲಾ ಭಾನು, ಉಪತಹಶೀಲ್ದಾರ್‌ ಗಳಾದ ವಿನೋದ್, ಶೋಭಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT