ಮೈಸೂರು: ‘ಆಹಾರ ಸುರಕ್ಷತೆ, ಪೌಷ್ಟಿಕತೆ ಹೆಚ್ಚಿಸಲು ಹಾಗೂ ಆಹಾರ ತ್ಯಾಜ್ಯ ತಗ್ಗಿಸಲು ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ನೆರವು ಅಗತ್ಯವಾಗಿದೆ’ ಎಂದು ‘ಇಂಡಸ್ ಉದ್ಯಮಿಗಳ ಸಂಸ್ಥೆ’ಯ (ಟಿಐಇ) ಮೈಸೂರು ವಿಭಾಗದ ಮುಖ್ಯಸ್ಥ ಭಾಸ್ಕರ್ ಕಳಲೆ ಪ್ರತಿಪಾದಿಸಿದರು.

ನಗರದ ಕೇಂದ್ರೀಯ ಆಹಾರ ತಂತ್ರಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಮಂಗಳವಾರ ಆಯೋಜಿಸಿದ್ದ ‘ರಾಷ್ಟ್ರೀಯ ತಂತ್ರಜ್ಞಾನ ದಿನಾಚರಣೆ’ಯಲ್ಲಿ ಮಾತನಾಡಿ, ‘ಸಿಎಫ್ಟಿಆರ್ಐ ದತ್ತಾಂಶ ವಿಜ್ಞಾನಿಗಳ ನೆರವು ಪಡೆಯಬೇಕು. ಎಐ ಪ್ರಯೋಗಾಲಯವನ್ನೂ ಆರಂಭಿಸಬೇಕಿದೆ’ ಎಂದರು.

‘ಸುಸ್ಥಿರ ಆಹಾರ ಪ್ಯಾಕೇಜಿಂಗ್, ನ್ಯೂಟ್ರಿಜೆನೊಮಿಕ್ಸ್, ಪರ್ಯಾಯ ಕ್ರಮಗಳ ಬಗ್ಗೆ ಯೋಜಿಸಬೇಕಿದೆ. ಕೃಷಿ, ಕೃತಕ ಬುದ್ಧಿಮತ್ತೆ ಹಾಗೂ ಆರೋಗ್ಯ ವಿಜ್ಞಾನ ಸಂಸ್ಥೆಗಳ ನೆರವು ಪಡೆಯಬೇಕು. ಕೃಷಿ ತ್ಯಾಜ್ಯದಿಂದ ಜೈವಿಕ ಇಂಧನ ತಯಾರಿಸುವ ಬಗ್ಗೆಯೂ ಯೋಚಿಸಬೇಕಿದೆ’ ಎಂದು ಸಲಹೆ ನೀಡಿದರು.

‘ಹವಾಮಾನ ವೈಪರೀತ್ಯ, ಹೊಸ ರೋಗಗಳನ್ನು ತಾಳಿಕೊಳ್ಳುವ, ಕಡಿಮೆ ನೀರಿನಲ್ಲಿ ಹೆಚ್ಚು ಪೋಷಕಾಂಶ ಹಾಗೂ ಇಳುವರಿ ನೀಡುವ ಆಹಾರ ಬೆಳೆಗಳನ್ನು ಬೆಳೆಯುವ ವಿಧಾನದ ಬಗ್ಗೆ ಆವಿಷ್ಕಾರ ಅಗತ್ಯವಾಗಿದೆ. ಅದಕ್ಕೆ ಎಐ ನೆರವು ಅಗತ್ಯವಾಗಿದೆ’ ಎಂದು ಅಭಿಪ್ರಾಯಪಟ್ಟರು.

‘ಜೀವನಶೈಲಿ ಬದಲಾಗಿದೆ. ಅದರಿಂದ ದೇಶದ ಆಹಾರ ತಂತ್ರಜ್ಞಾನ ಉದ್ಯಮಗಳು ವೇಗವಾಗಿ ಬೆಳೆಯುತ್ತಿದ್ದು, ಸಿರಿಧಾನ್ಯ ತಿನಿಸುಗಳಿಗೆ ಭಾರಿ ಬೇಡಿಕೆ ಬಂದಿದೆ. ಕೃಷಿ ಹಾಗೂ ಆಹಾರ ಕ್ಷೇತ್ರ ಆಧಾರಿತ ಉದ್ಯಮಗಳಿಗೆ ಭವಿಷ್ಯವಿದ್ದು, ಗ್ರಾಮೀಣ ಆರ್ಥಿಕತೆ ಮೇಲೇಳಲಿದೆ’ ಎಂದರು.

ತಂತ್ರಜ್ಞಾನದ ಕಾಲಘಟ್ಟ: ‘ಭವಿಷ್ಯದ ಯುದ್ಧಗಳು ವ್ಯಕ್ತಿ ಕೇಂದ್ರಿತವಾಗಿರುವುದಿಲ್ಲ ಎಂಬುದು ಕೆಲ ದಿನಗಳ ಹಿಂದೆಯಷ್ಟೇ ನಡೆದ ಕದನದಲ್ಲಿ ನೋಡಿದ್ದೇವೆ. ಮಾನವ ರಹಿತ ಯುದ್ಧವಿಮಾನಗಳು, ಡ್ರೋನ್ಗಳು ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನ ಹೊಂದಿದ ಸಾಧನಗಳು ಯುದ್ಧವನ್ನು ನಿರ್ಧರಿಸುತ್ತಿರುವ ಕಾಲಘಟ್ಟದಲ್ಲಿದ್ದೇವೆ’ ಎಂದು ಭಾಸ್ಕರ್ ಹೇಳಿದರು.

‘ಸಿಎಫ್ಟಿಆರ್ಐ ಕಳೆದ 7 ದಶಕದಿಂದ ಆಹಾರ ಕ್ಷೇತ್ರದಲ್ಲಿ ದೇಶ ಸ್ವಾವಲಂಬನೆ ಸಾಧಿಸಲು ನೆರವಾಗಿದೆ. ಆಹಾರ ಭದ್ರತೆ ನೀಡಿದೆ. ಗ್ರಾಮೀಣ ಕೃಷಿ ಆರ್ಥಿಕತೆ ಸದೃಢಗೊಳಿಸಲು, ನವೋದ್ಯಮಿಗಳನ್ನು ರೂಪಿಸುವಲ್ಲಿ ಶ್ರಮಿಸಿದೆ’ ಎಂದು ಶ್ಲಾಘಿಸಿದರು.

‘ಏರುತ್ತಿರುವ ಜನಸಂಖ್ಯೆಗೆ ಆಹಾರ ಪೂರೈಸಲು ಕೃಷಿ ಉತ್ಪಾದನೆ ಹೆಚ್ಚಿಸಬೇಕಿದೆ. ಸುರಕ್ಷತೆ, ಸುಸ್ಥಿರತೆ ಹಾಗೂ ಬುದ್ಧಿವಂತಿಕೆಯಿಂದ ಆಹಾರ ಪೂರೈಕೆ ಮಾಡಲು ಸಂಸ್ಥೆಯ ನೆರವು ಅಗತ್ಯ’ ಎಂದರು.

ಸಂಸ್ಥೆಯ ನಿರ್ದೇಶಕಿ ಶ್ರೀದೇವಿ ಅನ್ನಪೂರ್ಣ ಸಿಂಗ್, ವಿಜ್ಞಾನಿ ಅಶುತೋಷ್ ಎ.ಇನಾಂದಾರ್ ಇದ್ದರು.

ಮೂರು ಕಂಪನಿಗಳೊಂದಿಗೆ ಒಪ್ಪಂದ

ಕೇರಳದ ವಯನಾಡ್ ಡೇರಿ ಕೇರಳ ಸರ್ಕಾರದ ಕುಡುಂಬಶ್ರೀ ಬೆಂಗಳೂರಿನ ತತ್ವ ನ್ಯೂಟ್ರಿ ಫುಡ್ಸ್ ಕಂಪನಿಗಳು ಸಿಎಫ್ಟಿಆರ್ಐನ ತಂತ್ರಜ್ಞಾನವನ್ನು ಬಳಕೆ ಮಾಡುವ ಒಪ್ಪಂದಕ್ಕೆ ಸಹಿ ಹಾಕಿದವು. ಆವಿಷ್ಕಾರ ಮಾಡಿದ ಸಂಸ್ಥೆಯ ವಿಜ್ಞಾನಿಗಳಾದ ಡಾ.ಬಿ.ಬಿ.ಬೋಸ್ ಡಾ.ಎಂವಿಆರ್ಕೆ ಶರ್ಮಾ ರಾಜೇಶ್ವರ ಎಸ್.ಮಾಟ್ಚೆ ಡಾ.ಬೇಬಿಲತಾ ಅವರಿಗೆ ಪ್ರಶಂಸನಾಪತ್ರ ನೀಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.