ಪಿರಿಯಾಪಟ್ಟಣ: ಆಂಧ್ರಪ್ರದೇಶದ ತಂಬಾಕು ಬೆಳೆಗಾರರಿಗೆ 2025-26 ನೇ ಸಾಲಿಗೆ 142 ದಶಲಕ್ಷ ಕೆ.ಜಿ. ಗುರಿಯನ್ನು ನಿಗದಿ ಪಡಿಸಿ 25 ದಶಲಕ್ಷ ಕೆ.ಜಿ.ಕಡಿತಗೊಳಿಸಿರುವುದು ರಾಜ್ಯದ ತಂಬಾಕು ಬೆಳೆಗಾರರಿಗೆ ಅನುಕೂಲವಾಗಿದೆ ಎಂದು ತಂಬಾಕು ಮಂಡಳಿ ಸದಸ್ಯ ವಿಕ್ರಂರಾಜ್ ತಿಳಿಸಿದರು.

ಪಟ್ಟಣದಲ್ಲಿ ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತಂಬಾಕಿಗೆ ಬೇಡಿಕೆ ಕುಸಿದಿರುವುದು, ಆಂಧ್ರಪ್ರದೇಶದಲ್ಲಿ ನಿಗದಿಗಿಂತ 50 ದಶಲಕ್ಷ ಕೆ.ಜಿ. ತಂಬಾಕು ಹೆಚ್ಚು ಬೆಳೆದಿರುವ ಕಾರಣ ಇತ್ತೀಚೆಗೆ ಗುಂಟೂರಿನಲ್ಲಿ ನಡೆದ 165 ನೇ ತಂಬಾಕು ಮಂಡಳಿ ಸಭೆಯಲ್ಲಿ 142 ದಶಲಕ್ಷ ಕೆಜಿಗೆ ನಿಗದಿಗೊಳಿಸಲಾಗಿದೆ. ಇದರಿಂದ ಬೆಳೆಗಾರರಿಗೆ 100 ದಶಲಕ್ಷ ಕೆಜಿ ತಂಬಾಕಿಗೆ ಉತ್ತಮ ಮಾರುಕಟ್ಟೆ ಲಭಿಸುವ ಸಾಧ್ಯತೆ ಇದೆ ಎಂದರು.

ಪ್ರಸ್ತುತ ಸಾಲಿನಲ್ಲಿ ‘ಶೂನ್ಯ ಮಾರಾಟ ಮಾಡುವ ತಂಬಾಕು ಬೆಳೆಗಾರ’ರಿಗೆ ವಿಧಿಸುವ ದಂಡ ಶುಲ್ಕದಿಂದ ಪಾರಾಗಲು ತಂಬಾಕು ಮಂಡಳಿಗೆ ಅರ್ಜಿ ಸಲ್ಲಿಸಬೇಕು. ಮಂಡಳಿಯ ನೂತನ ನಿರ್ದೇಶಕರಾಗಿರುವ ಬಿ.ವಿಶ್ವಶ್ರೀ ಶೀಘ್ರದಲ್ಲೇ ಕಗ್ಗುಂಡಿ ತಂಬಾಕು ಹರಾಜು ಮಾರುಕಟ್ಟೆಗೆ ಭೇಟಿ ನೀಡಲಿದ್ದು , ತಂಬಾಕು ಬೆಳೆಗಾರರು ಸಮಸ್ಯೆಗಳನ್ನು ತಿಳಿಸಿ, ಪರಿಹಾರ ಕಂಡುಕೊಳ್ಳಬೇಕೆಂದು ತಿಳಿಸಿದರು.

ರೈತ ಮುಖಂಡರಾದ ಆರ್.ಟಿ. ಸತೀಶ್, ಕಾಳೇಗೌಡ, ಹರಿಲಾಪುರ ಹರೀಶ್, ಧ್ರುವರಾಜ್, ಕಗ್ಗುಂಡಿ ಸುರೇಶ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.