ಮೈಸೂರು: ಜೆಎಸ್ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ ತಂಡವು ಬ್ಯಾಸ್ಕೆಟ್ಬಾಲ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತು.

ಇಲ್ಲಿನ ಜಯಚಾಮರಾಜೇಂದ್ರ ಎಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಸ್ಮರಣಾರ್ಥ ಶುಕ್ರವಾರ ನಡೆದ ಟೂರ್ನಿಯ ಫೈನಲ್ನಲ್ಲಿ ಆತಿಥೇಯ ತಂಡವು 54–46 ಪಾಯಿಂಟ್ ಅಂತರದಲ್ಲಿ ಎನ್ಐಇ ಕಾಲೇಜು ತಂಡವನ್ನು ಮಣಿಸಿತು.

ಇದಕ್ಕೂ ಮುನ್ನ ನಡೆದ ಸೆಮಿಫೈನಲ್ನಲ್ಲಿ ಎನ್ಐಇ ಕಾಲೇಜು ತಂಡ 38–23 ಅಂತರದಲ್ಲಿ ಜೆಎಸ್ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ ತಂಡದ ವಿರುದ್ಧ ರೋಚಕ ಜಯ ಸಾಧಿಸಿ, ಅಂತಿಮ ಘಟ್ಟಕ್ಕೆ ಪ್ರವೇಶಿಸಿತ್ತು. ಜೆಎಸ್ಎಸ್ ಎಸ್ಟಿಯು ತಂಡದವರು 50–36ರಿಂದ ಸೇಂಟ್ ಜೋಸೆಫ್ ಪ್ರಥಮ ದರ್ಜೆ ಕಾಲೇಜು ತಂಡದವರನ್ನು ಮಣಿಸಿ ಫೈನಲ್ ತಲುಪಿದ್ದರು.

ಮಹಿಳಾ ಥ್ರೋಬಾಲ್ ಸ್ಪರ್ಧೆಯಲ್ಲಿ ಮಹಾರಾಣಿ ವಾಣಿಜ್ಯ ನಿರ್ವಹಣಾ ಕಾಲೇಜು ತಂಡದವರು 25–22, 25–23ರಿಂದ ಸರಸ್ವತಿಪುರಂ ಜೆಎಸ್ಎಸ್ ಮಹಿಳಾ ಕಾಲೇಜು ತಂಡದವರನ್ನು ಸೋಲಿಸಿದರು.

ಸೆಮಿಫೈನಲ್ನಲ್ಲಿ ಮಹಾರಾಣಿ ವಾಣಿಜ್ಯ ನಿರ್ವಹಣಾ ಕಾಲೇಜು ತಂಡ 25–10, 25–13ರಿಂದ ಜೆಎಸ್ಎಸ್ ಎಸ್ಟಿಯು ತಂಡವನ್ನು ಸೋಲಿಸಿದರೆ, ಜೆಎಸ್ಎಸ್ ಮಹಿಳಾ ಕಾಲೇಜು ತಂಡದವರು 25–18, 25–13ರಿಂದ ಜಿಎಸ್ಎಸ್ಎಸ್ ತಂಡದವರನ್ನು ಸೋಲಿಸಿ ಅಂತಿಮ ಘಟ್ಟ ಪ್ರವೇಶಿಸಿದ್ದರು.

ಟೂರ್ನಿಗೆ ಜೆಎಸ್ಎಸ್ ಮಹಾವಿದ್ಯಾಪೀಠದ ನಿರ್ದೇಶಕ ಕೆ.ಆರ್.ಸಂತಾನಂ ಚಾಲನೆ ನೀಡಿದರು.

ಕುಲಪತಿ ಎ.ಎನ್.ಸಂತೋಷ್ ಕುಮಾರ್, ಕುಲಸಚಿವ ಎಸ್.ಎ.ಧನರಾಜ್, ಪ್ರಾಂಶುಪಾಲ ಸಿ.ನಟರಾಜು, ಪಿ.ಮಲ್ಲು, ದೈಹಿಕ ಶಿಕ್ಷಣ ನಿರ್ದೇಶಕ ಸಿ.ರೇವಣ್ಣ, ಎಂ.ಎನ್.ನಾಗೇಂದ್ರ ಪ್ರಸಾದ್, ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಪ್ರೊ.ಎಂ.ಎಸ್.ಸುನೀಲ್ ಕುಮಾರ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.