ಮೈಸೂರು: ಇಲ್ಲಿನ ದೊಡ್ಡಕೆರೆ ಮೈದಾನದಲ್ಲಿ ನಡೆಯುವ ಈ ಬಾರಿಯ ನಾಡಹಬ್ಬ ದಸರಾ ವಸ್ತುಪ್ರದರ್ಶನದಲ್ಲಿ ‘ಮತ್ಸ್ಯಕನ್ಯೆ ಪ್ರದರ್ಶನ’ ಆಯೋಜಿಸಲು ತಯಾರಿ ಮಾಡಿಕೊಳ್ಳಲಾಗುತ್ತಿದೆ.

ಪ್ರತಿ ವರ್ಷವೂ ಒಂದಿಲ್ಲೊಂದು ಹೊಸ ಆಕರ್ಷಣೆಯನ್ನು ಜೋಡಿಸಲು, ಈ ಮೂಲಕ ಹೆಚ್ಚು ಹೆಚ್ಚು ಪ್ರವಾಸಿಗರನ್ನು ಸೆಳೆಯಲು ಕ್ರಮ ವಹಿಸುತ್ತಿರುವ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರ (ಕೆಇಎ)ವು ಈ ಬಾರಿಯೂ ಅಂಥಾದ್ದೇ ಪ್ರಯತ್ನವನ್ನು ಮಾಡುತ್ತಿದೆ.

ವಸ್ತುಪ್ರದರ್ಶನ ಆವರಣದ ಕೊಳದಲ್ಲಿ ಯುವತಿಯರು ಮತ್ಸ್ಯಕನ್ಯೆಯ ವೇಷ ಧರಿಸಿ, ಬಾಲವನ್ನು ಹೊಂದಿರುವಂತೆ ನಟಿಸಿ, ಈಜುವ ಅಥವಾ ಇತರೆ ಜಲಕ್ರೀಡೆ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಪ್ರದರ್ಶನವನ್ನು ನೀಡಿ ಗಮನಸೆಳೆಯಲಿದ್ದಾರೆ. ಇದನ್ನು ಕಲಾತ್ಮಕ ಮತ್ಸ್ಯಕನ್ಯೆ ಪ್ರದರ್ಶನ ಎಂದೂ ಕರೆಯಲಾಗುತ್ತದೆ. ಮತ್ಸ್ಯಕನ್ಯೆಯರು ಬಿಂಕ–ಬಿನ್ನಾಣ, ವಯ್ಯಾರದಿಂದ ಈಜುವುದು, ಡೈವಿಂಗ್ ಮಾಡುವುದು ಮೊದಲಾದವುಗಳ ಮೂಲಕ ಪ್ರೇಕ್ಷಕರನ್ನು ರಂಜಿಸಲಿದ್ದಾರೆ. ಸಂಗೀತ ಕಾರಂಜಿ ಸ್ಥಳದಲ್ಲಿ ಅಥವಾ ಸಮೀಪದ ಕೊಳದಲ್ಲಿ ಈ ಪ್ರದರ್ಶನ ನಡೆಸಲು ಯೋಜಿಸಲಾಗಿದೆ.

‘ಈ ಪ್ರದರ್ಶನಕ್ಕೆ ಕ್ರಿಯಾಯೋಜನೆ ರೂಪಿಸಿ ಸಲ್ಲಿಸುವಂತೆ ಸೂಚಿಸಲಾಗಿದೆ. ಇದು ಈ ಬಾರಿಯ ವಿಶೇಷ ಎನಿಸಲಿದೆ’ ಎಂದು ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್ ‘ಪ್ರಜಾವಾಣಿ’ಗೆ ತಿಳಿಸಿದರು.

ಮೊದಲ ದಿನದಿಂದಲೇ: ‘ಈ ಬಾರಿಯ ನಾಡಹಬ್ಬ ಸೆ.22ರಿಂದ ಅ.2ರವರೆಗೆ ನಡೆಯಲಿದೆ. ದಸರಾ ಉದ್ಘಾಟನೆಯ ದಿನದಿಂದಲೇ ವಸ್ತುಪ್ರದರ್ಶನಕ್ಕೂ ಚಾಲನೆ ನೀಡಲಾಗುವುದು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೆ.22ರಂದು ಸಂಜೆ ಉದ್ಘಾಟಿಸುವರು. ವಸ್ತುಪ್ರದರ್ಶನ ಆಯೋಜನೆ, ನಿರ್ವಹಣೆಗೆಂದು ಜಾಗತಿಕ ಟೆಂಡರ್ ಕರೆಯಲಾಗಿತ್ತು. ಇದರಲ್ಲಿ ಫನ್ವರ್ಲ್ಡ್ ಸಂಸ್ಥೆಯು ಹೆಚ್ಚು ಕೋಟ್ ಮಾಡಿ ಟೆಂಡರ್ ಪಡೆದುಕೊಂಡಿದೆ. ₹ 11.57 ಕೋಟಿ ಮೊತ್ತಕ್ಕೆ ಟೆಂಡರ್ ಆಗಿದೆ. ಸರ್ಕಾರದಿಂದ ಅನುಮೋದನೆ ಪಡೆದ ನಂತರ ಕಾರ್ಯಾದೇಶ ನೀಡಲಾಗುವುದು. ಹೋದ ವರ್ಷ ₹10.03 ಕೋಟಿಗೆ ಆಗಿತ್ತು. ಈ ಬಾರಿ ಟೆಂಡರ್ ಮೊತ್ತ ಹೆಚ್ಚಾಗಿದ್ದರಿಂದ ಪ್ರಾಧಿಕಾರಕ್ಕೆ ವರಮಾನವೂ ಜಾಸ್ತಿಯಾಗಿದೆ’ ಎಂದು ಮಾಹಿತಿ ನೀಡಿದರು.

‘90 ದಿನಗಳ ಈ ವಸ್ತುಪ್ರದರ್ಶನವನ್ನು ಮೊದಲ ದಿನದಿಂದಲೇ ಸಂಪೂರ್ಣ ಸಜ್ಜುಗೊಳಿಸಬೇಕು, ಸರ್ಕಾರದ ವಿವಿಧ ಇಲಾಖೆಗಳ ಎಲ್ಲ ಮಳಿಗೆಗಳೂ ಭರ್ತಿಯಾಗಿರಬೇಕು ಎಂದು ಮಾಡುವ ಉದ್ದೇಶವನ್ನು ಹೊಂದಲಾಗಿದೆ. ಪ್ರವಾಸಿಗರ ಸುರಕ್ಷತೆಗೆ ಒತ್ತು ನೀಡುವಂತೆ ಟೆಂಡರ್ ಪಡೆದಿರುವ ಕಂಪನಿಗೆ ಸೂಚಿಸಲಾಗುತ್ತದೆ. ಕುಡಿಯುವ ನೀರು, ಶೌಚಾಲಯ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಲಾಗುವುದು. ಸ್ವಚ್ಛತೆಗೆ ಆದ್ಯತೆ ಕೊಡಲಾಗುವುದು. ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕಲಾಗುವುದು’ ಎಂದು ಹೇಳಿದರು.

ಪ್ರವಾಸಿಗರಿಂದ ಪ್ರವೇಶ ಶುಲ್ಕ, ವಾಹನ ನಿಲುಗಡೆ ಶುಲ್ಕ, ‘ಎ’ ಬ್ಲಾಕ್ ವಾಣಿಜ್ಯ ಮಳಿಗೆಗಳು, ಅಮ್ಯೂಸ್ಮೆಂಟ್ ಪಾರ್ಕ್ ಹಾಗೂ ಆಹಾರ ಮಳಿಗೆಗಳಿಂದ ಬರುವ ಬಾಡಿಗೆಯನ್ನು ಟೆಂಡರ್ ತೆಗೆದುಕೊಂಡಿರುವ ಸಂಸ್ಥೆಯು ಪಡೆದುಕೊಳ್ಳುತ್ತದೆ. ದಸರಾ ಅಂಗವಾಗಿ ನಡೆಯುವ ಅತ್ಯಂತ ದೀರ್ಘವಾದ ಕಾರ್ಯಕ್ರಮ ಎನಿಸಿರುವ ಈ ವಸ್ತುಪ್ರದರ್ಶನಕ್ಕೆ 90 ದಿನಗಳವರೆಗೆ ಸಹಸ್ರಾರು ಮಂದಿ ಬರುತ್ತಾರೆ. ಹಿಂದಿನ ವರ್ಷಗಳಲ್ಲಿ 90 ದಿನಗಳ ನಂತರವೂ ವಿಸ್ತರಿಸಿದ ಉದಾಹರಣೆಗಳಿವೆ.

ದಸರಾ ವಸ್ತುಪ್ರದರ್ಶನ ಆವರಣದಲ್ಲಿ ಕೆಲವು ನವೀಕರಣ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದ್ದು ದಸರಾ ವೇಳೆಗೆ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗಿದೆ
ಅಯೂಬ್ಖಾನ್ ಅಧ್ಯಕ್ಷ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರ

ವಿವಿಧ ಅಭಿವೃದ್ಧಿ ಕಾಮಗಾರಿ

ವಸ್ತುಪ್ರದರ್ಶನ ಆವರಣದ ಸಂಗೀತ ಕಾರಂಜಿ(ಫೌಂಟೇನ್) ಮೇಲ್ದರ್ಜೆಗೇರಿಸುವ ಕಾಮಗಾರಿ ಪ್ರಗತಿಯಲ್ಲಿದೆ. ‘ಎ ಬ್ಲಾಕ್’ ವಾಣಿಜ್ಯ ಮಳಿಗೆಗಳ ಪ್ರದೇಶವನ್ನು ‘ಹಳೇಬೀಡು’ ಶೈಲಿಯಲ್ಲಿ ನವೀಕರಿಸಲು ತಲಾ ₹ 9.50 ಕೋಟಿಯನ್ನು ಸರ್ಕಾರ ನೀಡಿದೆ. ವಸ್ತುಪ್ರದರ್ಶನದ ಆವರಣವನ್ನು ಪ್ರವಾಸೋದ್ಯಮಕ್ಕೆ ಪೂರಕವಾಗಿ ಸುಧಾರಿಸುವುದು ನಮ್ಮ ಗುರಿಯಾಗಿದೆ. ಪ್ರಾಧಿಕಾರದ ಆವರಣವು 83 ಎಕರೆಯಲ್ಲಿ ಹರಡಿದೆ. ಅದರಲ್ಲಿರುವ ‘ಎ ಬ್ಲಾಕ್’ನಲ್ಲಿ ಒಟ್ಟು 154 ವಾಣಿಜ್ಯ ಮಳಿಗೆಗಳಿದ್ದು ಇವು 20 ವರ್ಷ ಹಳೆಯ ಮಾದರಿಯಲ್ಲಿವೆ. ಅಲ್ಲದೇ ದಸರಾ ಸಮಯದಲ್ಲಿ 3 ತಿಂಗಳು ಮಾತ್ರ ಬಳಕೆ ಆಗುತ್ತಿವೆ. ಅವುಗಳನ್ನು ವರ್ಷವಿಡೀ ಉಪಯೋಗ ಆಗುವಂತೆ ಮಾಡಲೆಂದು ಅತ್ಯಾಧುನಿಕ ಸ್ಪರ್ಶ ಕೊಡಲಾಗುವುದು. ಮೂಲಸೌಕರ್ಯಗಳ ಅಭಿವೃದ್ಧಿಗೂ ₹ 1 ಕೋಟಿ ದೊರೆತಿದೆ ಎಂದು ಅಯೂಬ್ಖಾನ್ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.