ತಿ.ನರಸೀಪುರ: ಧರ್ಮಸ್ಥಳದ ವಿರುದ್ಧ ನಡೆದಿರುವ ಷಡ್ಯಂತ್ರದ ಬಗ್ಗೆ ತನಿಖೆ ಮಾಡಿಸಿ, ಕಿಡಿಗೇಡಿಗಳ ವಿರುದ್ಧ ಸೂಕ್ತ ಕ್ರಮಕ್ಕೆ ಒತ್ತಾಯಿಸಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಭಕ್ತರು ‘ಧರ್ಮಸ್ಥಳದ ಧರ್ಮ ಯಾತ್ರೆ’ ಹೆಸರಿನಲ್ಲಿ ತಲಕಾಡು ಗ್ರಾಮದಲ್ಲಿ ಶನಿವಾರ ಸಾಂಕೇತಿಕ ಪ್ರತಿಭಟನೆ ನಡೆಸಿದರು.

ಗ್ರಾಮದ ಬಂಡರಸಮ್ಮ ದೇವಾಲಯದಿಂದ ನಾಡ ಕಚೇರಿಯವರೆಗೆ ಮೆರವಣಿಗೆ ನಡೆಸಿದ ಕಾರ್ಯಕರ್ತರು, ಧರ್ಮಸ್ಥಳಕ್ಕೆ ಕಳಂಕ ತರುತ್ತಿರುವವರ ನಡೆ ಖಂಡಿಸಿದರು. ಬಳಿಕ ನಾಡಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.

ಧರ್ಮಸ್ಥಳದ ಭಕ್ತೆ ಎಂ. ಜಯಲಕ್ಷ್ಮಮ್ಮ ಮಾತನಾಡಿ, ‘ಧರ್ಮಸ್ಥಳದ ವಿರುದ್ಧ ಸಲ್ಲದ ಆರೋಪಗಳನ್ನು ಮಾಡಿ ಅಪಪ್ರಚಾರ ನಡೆಸುತ್ತಿರುವುದು ಸರಿಯಲ್ಲ. ಕಿಡಿಗೇಡಿಗಳಿಗೆ ಈಗಾಗಲೇ ತಕ್ಕ ಶಾಸ್ತಿಯಾಗುತ್ತಿದ್ದು, ಷಡ್ಯಂತ್ರದ ಮೂಲ ಯಾರೆಂದು ಪತ್ತೆ ಹಚ್ಚಿ ಅವರಿಗೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು’ ಎಂದು ಅವರು ಒತ್ತಾಯಿಸಿದರು.

ಕಸಾಪ ಹೋಬಳಿ ಘಟಕದ ಅಧ್ಯಕ್ಷ ವೆಂಕಟೇಶ್ ವಿನಾಯಕ್ ಮಾತನಾಡಿ, ‘ಧಾರ್ಮಿಕ ಕ್ಷೇತ್ರ ಧರ್ಮಸ್ಥಳದ ಹೆಸರಿಗೆ ಕಳಂಕ ತಂದಿರುವ ಕಿಡಿಗೇಡಿಗಳ ವಿರುದ್ಧ ಸಮಗ್ರ ತನಿಖೆ ನಡೆಸಿ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದರು.

ಪ್ರತಿಭಟನೆಯಲ್ಲಿ ಕರ್ನಾಟಕ ಜನಪರ ವೇದಿಕೆ ಅಧ್ಯಕ್ಷ ಜಿ. ನಾಗರಾಜು, ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಶಾಂತರಾಜು, ಕಾರ್ಯದರ್ಶಿ ಶ್ರೀನಿವಾಸರಾವ್, ರೈತ ಸಂಘದ ಉಪಾಧ್ಯಕ್ಷ ದಿನೇಶ್, ಡೇರಿ ಅಧ್ಯಕ್ಷ ನರೇಂದ್ರ, ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಮಲ್ಲಿಕಾರ್ಜುನ, ಉಪಾಧ್ಯಕ್ಷ ಶಂಕರ್, ಹಸ್ತಿ ಕೇರಿ ನಾಗರಾಜು, ನಾಗೇಶ್, ಟಿ.ಜೆ. ಮಹದೇವ್, ರುದ್ರೇಶ್, ಶ್ರೀನಿವಾಸ್ ಗೌಡ, ಪ್ರಶಾಂತ್, ಕೃಷ್ಣ, ಪುಟ್ಟಸ್ವಾಮಿ, ಮಹಾದೇವ ಸೇರಿದಂತೆ ಮುಖಂಡರು, ಭಕ್ತರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.