ಎಚ್.ಡಿ.ಕೋಟೆ (ಮೈಸೂರು ಜಿಲ್ಲೆ): ಎಚ್.ಡಿ ಕೋಟೆ ತಾಲ್ಲೂಕಿನ ಮದ್ದೂರು ಪಟ್ಟಣದ ಬೆಟ್ಟಹಳ್ಳಿಯಲ್ಲಿ ಹನ್ಸ್ (ತಂಬಾಕು) ಕಂಪನಿಯ ನಕಲಿ ಮಾರಾಟ ಜಾಲವನ್ನು ಜಿಲ್ಲಾ ಪೊಲೀಸರ ತಂಡ ಪತ್ತೆಹಚ್ಚಿದ್ದು, ಲಕ್ಷಾಂತರ ಮೌಲ್ಯದ ಉತ್ಪನ್ನ ವಶಪಡಿಸಿಕೊಂಡಿದ್ದಾರೆ.

‘ತಂಡವೊಂದು ಹನ್ಸ್ ಕಂಪನಿ ಹೆಸರಿನಲ್ಲಿ ನಕಲಿ ತಂಬಾಕು ಉತ್ಪನ್ನಗಳ ತಯಾರಿಕಾ ಘಟಕವನ್ನು ತೆರೆದಿತ್ತು. ಅಲ್ಲಿ ಯಂತ್ರಗಳನ್ನು ಇರಿಸಿ, ನಕಲಿ ಉತ್ಪನ್ನಗಳನ್ನು ತಯಾರಿಸಿ ರಾತ್ರಿ ವೇಳೆ ಕೇರಳ ರಾಜ್ಯಕ್ಕೆ ಸಾಗಿಸುತ್ತಿತ್ತು. ದಾಳಿ ನಡೆಸುವಾಗ ಆರೋಪಿಗಳು ಪರಾರಿಯಾಗಿದ್ದು, ಜಮೀನಿನ ದಾಖಲೆ ಗಮನಿಸಿ ಶೈನ್ ಪ್ರಸಾದ್, ಪ್ರಭುಸ್ವಾಮಿ, ಅಶ್ವಿನಿ ಕೆ.ಶೈನ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದೇವೆ’ ಎಂದು ಪೊಲೀಸರು ತಿಳಿಸಿದರು.

‘ಎಎಸ್ಪಿ ನಾಗೇಶ್ ನೇತೃತ್ವದಲ್ಲಿ ದಾಳಿ ನಡೆಸಿದಾಗ ₹75 ಲಕ್ಷ ಮೌಲ್ಯದ 3 ಹನ್ಸ್ ಪ್ಯಾಕೆಟ್ ತಯಾರು ಮಾಡುವ ಯಂತ್ರ, ₹ 16 ಸಾವಿರ ಮೌಲ್ಯದ ಚೀಲ ಹೊಲಿಗೆ ಹಾಕುವ 2 ಯಂತ್ರ , ₹96 ಸಾವಿರದ 4 ಹನ್ಸ್ ಪ್ಯಾಕೆಟ್ ಚೀಲಗಳು, ₹17.57 ಸಾವಿರ ಮೌಲ್ಯದ ಹಳೆಯ ಹನ್ಸ್ ಪ್ಯಾಕೆಟ್ ಚೀಲಗಳು, ₹ 8.40 ಲಕ್ಷ ಮೌಲ್ಯದ 20 ಲೀಟರ್ ಅಳತೆಯ ಟಿಪಿಆರ್ ಕೆಮಿಕಲ್ ಕ್ಯಾನ್, ಲೇಬಲ್ ರೋಲ್, ₹2 ಲಕ್ಷ ಮೌಲ್ಯದ, ಕೆಂಪು ಬಣ್ಣದ ಹನ್ಸ್ ಪ್ಯಾಕೆಟ್ ಪೇಪರ್, ₹87 ಸಾವಿರ ಮೌಲ್ಯದ ನೀಲಿ ಬಣ್ಣದ ಹನ್ಸ್ ಪ್ಯಾಕೆಟ್ ತುಂಬುವ ಎರಡು ಪ್ಲಾಸ್ಟಿಕ್ ಚೀಲ ವಶಪಡಿಸಿಕೊಳ್ಳಲಾಗಿದೆ’ ಎಂದು ಮಾಹಿತಿ ನೀಡಿದರು.

ಎಚ್.ಡಿ.ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.