ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಸೂರು | ವಯನಾಡ್‌ ದುರಂತ: ಸಿಎಫ್‌ಟಿಆರ್‌ಐನಿಂದ ಆಹಾರ ಸರಬರಾಜು

Published 8 ಆಗಸ್ಟ್ 2024, 4:25 IST
Last Updated 8 ಆಗಸ್ಟ್ 2024, 4:25 IST
ಅಕ್ಷರ ಗಾತ್ರ

ಮೈಸೂರು: ವಯನಾಡ್‌ ದುರಂತದಲ್ಲಿ ಬದುಕುಳಿದವರು ಹಾಗೂ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವವರಿಗಾಗಿ ನಗರದ ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾಲಯದಿಂದ (ಸಿಎಫ್‌ಟಿಆರ್‌ಐ) ಮೂರು ಹಂತದಲ್ಲಿ ಪೌಷ್ಟಿಕ ಆಹಾರವನ್ನು ಕಳುಹಿಸಲಾಯಿತು. ಮೊದಲಿಗೆ ಆ.2 ಹಾಗೂ 7ರಂದು ಆಹಾರ ಸರಬರಾಜು ಮಾಡಿದ್ದು, ಬುಧವಾರ ಮತ್ತಷ್ಟು ಆಹಾರವನ್ನು ಕಳುಹಿಸಲಾಯಿತು.

‘ಕೇರಳದ ಬೇಡಿಕೆಯಂತೆ ಅಧಿಕ ದಿನ ಉಪಯೋಗಿಸಲು ಸಾಧ್ಯವಾಗುವ ಹಾಗೂ ಪೌಷ್ಟಿಕಾಂಶವುಳ್ಳ ಆಹಾರ ಒದಗಿಸಲಾಗುತ್ತಿದೆ. ಚಿಕ್ಕಿ (ನ್ಯೂಟ್ರಾ ಸ್ಪಿರ್‍ಯೂಲಿನಾ), ಮ್ಯಾಂಗೋ ಬಾರ್, ಮಕ್ಕಳಲ್ಲಿ ಶಕ್ತಿ ಹಾಗೂ ಪೌಷ್ಟಿಕಾಂಶ ಹೆಚ್ಚಿಸುವ ಬರ್ಫಿ, ರಾಗಿ ಬಿಸ್ಕತ್ತು, ರಾಗಿ ಮಿಶ್ರಿತ ಪಾನೀಯ, ಕೋಕಮ್ ಫ್ರೂಟ್ ಬಾರ್, ಆಮ್ಲಾ ಕ್ಯಾಂಡಿ, ಹುಣಸೆ ಮಿಠಾಯಿ, ಪ್ರೋಟೀನ್ ರಸ್ಕ್‌ಗಳು, ಸಾಂಬಾರ್ ಮಿಕ್ಸ್, ಸಾಂಬಾರ್ ಹುಡಿ, 6ರಿಂದ 10 ತಿಂಗಳ ವಯಸ್ಸಿನ ಶಿಶುಗಳ ಆಹಾರ ಕಳುಹಿಸಿಕೊಡಲಾಗಿದೆ’ ಎಂದು ಸಂಸ್ಥೆಯ ನಿರ್ದೇಶಕಿ ಡಾ.ಶ್ರೀದೇವಿ ಸಿಂಗ್‌ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT