ಎಚ್.ಡಿ.ಕೋಟೆ: ನಾಗರಹೊಳೆ ಅಭಯಾರಣ್ಯದಲ್ಲಿ ಸಫಾರಿ ಸ್ಥಗಿತ ವಿರೋಧಿಸಿ ಸುಮಾರು 12 ರೆಸಾರ್ಟ್ಗಳ ಕಾರ್ಮಿಕರು ಪಟ್ಟಣದ ತಾಲ್ಲೂಕು ಕಚೇರಿ ಮುಂಭಾಗ ಮಂಗಳವಾರ ಪ್ರತಿಭಟನೆ ನಡೆಸಿ, ತಹಶೀಲ್ದಾರ್ ಶ್ರೀನಿವಾಸ ಅವರಿಗೆ ಮನವಿ ಸಲ್ಲಿಸಿದರು.

ತಾಲ್ಲೂಕಿನ ತೆರಾ ವೈಲ್ಡ್ಲೈಫ್ ರೆಸಾರ್ಟ್ನ ಹೊಸಮಾಳ ಸ್ವಾಮಿ ಮಾತನಾಡಿ, ‘ನಾಗರಹೊಳೆ ಅಭಯಾರಣ್ಯದಲ್ಲಿ ಸಫಾರಿ ಬಂದ್ ಮಾಡಿರುವುದರಿಂದ ಪ್ರವಾಸಿಗರು ರೆಸಾರ್ಟ್ಗಳಿಗೆ ಬಾರದ ಹಿನ್ನೆಲೆಯಲ್ಲಿ ಸುಮಾರು 2 ಸಾವಿರ ನೌಕರರಿಗೆ ತೊಂದರೆ ಉಂಟಾಗಿದೆ’ ಎಂದರು.

‘ತಾಲ್ಲೂಕು ಪ್ರಾಣಿ, ವನ್ಯ ಮತ್ತು ಜಲ ಸಂಪತ್ತಿನಿಂದ ಕೂಡಿರುವುದರಿಂದ ಹಲವು ರೆಸಾರ್ಟ್ಗಳು ತಲೆ ಎತ್ತಿವೆ. ಸುಮಾರು 2 ಸಾವಿರ ಜನರಿಗೆ ಉದ್ಯೋಗ ಸಹ ದೊರೆತಿದೆ. ಖಾಸಗಿ ಉದ್ಯೋಗ ಮಾಡುವ ಯುವಕರಿಗೆ ಯಾವುದೇ ಕಾರ್ಖಾನೆಗಳಿಲ್ಲ, ರೆಸಾರ್ಟ್ಗಳೇ ಇಲ್ಲಿನ ಜನರಿಗೆ ಉದ್ಯೋಗ ನೀಡಿವೆ. ಏಕಾಏಕಿ ಸಫಾರಿ ನಿಲ್ಲಿಸಿರುವುದರಿಂದ ನಮ್ಮ ಉದ್ಯೋಗಕ್ಕೆ ಕುತ್ತು ಬಂದಿದೆ’ ಎಂದು ಅಳಲು ತೋಡಿಕೊಂಡರು.

ಸಂದೇಶ್ ವಾಟರ್ ಎಡ್ಜ್ ಸಿಬ್ಬಂದಿ ದೇವಯ್ಯ ಮಾತನಾಡಿ, ‘ತಾಲ್ಲೂಕಿನಲ್ಲಿರುವ ಅಧಿಕೃತ ರೆಸಾರ್ಟ್ಗಳು ಸ್ಥಳೀಯರಿಗೆ ಆಸರೆಯಾಗಿವೆ. ಆದರೀಗ ರೆಸಾರ್ಟ್ಗಳಲ್ಲಿ ಕಾರ್ಯನಿರ್ವಹಿಸುವ ಉದ್ಯೋಗಿಗಳಿಗೆ ಊದ್ಯೋಗವಿಲ್ಲದೆ, ಕುಟುಂಬಗಳು ಬೀದಿಪಾಲಾಗಲಿವೆ. ಇದಕ್ಕೆ ಸರ್ಕಾರವೇ ನೇರ ಕಾರಣ’ ಎಂದರು.

ವಾಟರ್ ವುಡ್ ಲಾಡ್ಜ್ ಅಂಡ್ ರೆಸಾರ್ಟ್ಸ್, ಸರಾಯ್ ರೆಸಾರ್ಟ್, ಸಂದೇಶ್ ವಾಟರ್ ಎಡ್ಜ್, ಕಾವ್ ರೆಸಾರ್ಟ್, ರೆಡ್ ಅರ್ಥ್, ಡಿಸ್ಕವರಿ ವಿಲೇಜ್, ವೈಲ್ಡ್ ಆರೆಂಜ್ ಕಬಿನಿ, ಕಬಿನಿ ಲೇಕ್ ವೀವ್, ಕಬಿನಿ ಸ್ಪ್ರಿಂಗ್ಸ್, ಫೈರ್ ಫೈಲ್ಸ್ ಸೇರಿದಂತೆ ವಿವಿಧ ರೆಸಾರ್ಟ್ಗಳ ಸಿಬ್ಬಂದಿ ಸಲೀಂ, ಷಣ್ಮುಗ, ಮಂಜು, ಶಿವಪ್ಪ, ಚಂದ್ರು, ಸ್ವಾಮಿ, ಮೂರ್ತಿ, ವಿನೋದ್, ಸ್ವಾಮಿ, ಪ್ರತಾಪ್ ಸಿಂಹ, ವಿಜಯಕುಮಾರ್, ದೇವೇಶ್, ಶಿವಪ್ಪ, ಯಶೋಧಮ್ಮ, ರವಿ, ರಾಕಿ, ಮಹೇಶ್, ಗುರುಸ್ವಾಮಿ, ಭೈರ, ನವೀನ್, ಸಿದ್ದು, ಕೃಷ್ಣ, ಚಿಕ್ಕಣ್ಣ, ಪ್ರತಾಪ್, ಅರುಣ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.