ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಶ್ವತ್ಥನಾರಾಯಣ ಹೇಳಿಕೆ ಸರಿಯೇ? ಬೊಮ್ಮಾಯಿ, ಬಿಎಸ್‌ವೈ ಉತ್ತರಿಸಲಿ: ಡಿಕೆಶಿ

Last Updated 16 ಫೆಬ್ರುವರಿ 2023, 10:38 IST
ಅಕ್ಷರ ಗಾತ್ರ

ಮೈಸೂರು: ‘ಟಿಪ್ಪುವನ್ನು ಮೇಲಕ್ಕೆ ಕಳುಹಿಸಿದಂತೆ ಸಿದ್ದರಾಮಯ್ಯ ಅವರನ್ನೂ ಕಳುಹಿಸಬೇಕು’ ಎಂಬ ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ಹೇಳಿಕೆಗೆ ಡಿ.ಕೆ.ಶಿವಕುಮಾರ್‌ ವಾಗ್ದಾಳಿ ನಡೆಸಿದರು.

ನಗರದ ಕಾಂಗ್ರೆಸ್‌ ಭವನದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಬಸವರಾಜ ಬೊಮ್ಮಾಯಿ ಹಾಗೂ ಬಿ.ಎಸ್‌.ಯಡಿಯೂರ‍ಪ್ಪ ಈ ಕುರಿತು ಉತ್ತರ ಕೊಡಲಿ. ಆ ವ್ಯಕ್ತಿ ಹೆಸರು ಹೇಳುವುದಿಲ್ಲ. ಆ ಬಚ್ಚಲು ಬಗ್ಗೆ ಮಾತನಾಡಲು ಇಷ್ಟವಿಲ್ಲ’ ಎಂದು ಹೇಳಿದರು.

‘ಟಗರಿನ ತಲೆಯೇ ತೆಗೆಯೋಕೆ. ಟಿಪ್ಪು ಸುಲ್ತಾನರ ತಲೆಯನ್ನು ತೆಗೆದ ಉರಿಗೌಡ– ನಂಜಗೌಡ ಇತಿಹಾಸ ನನಗಂತೂ ಗೊತ್ತಿಲ್ಲ. ಬರೀ ನಾಟಕ. ಟಿಪ್ಪು ಸಾಧನೆಯನ್ನು ರಾಷ್ಟ್ರಪತಿಗಳೇ ಸದನದಲ್ಲಿ ಮಾತನಾಡಿದ್ದಾರೆ. ಆಗ ಬೊಮ್ಮಾಯಿ, ಯಡಿಯೂರಪ್ಪ ಎಲ್ಲ ಇದ್ದರು’ ಎಂದರು.

‘ಸುದೀಪ್ ನನ್ನ ಸ್ನೇಹಿತ. ಸಿನಿಮಾ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ರಾಜಕಾರಣದ ಕುರಿತು ಚರ್ಚೆ ಮಾಡಿದ್ದೇವೆ. ನನ್ನ 35 ವರ್ಷದ ಅನುಭವ ಹೇಳಿದ್ದೇನೆ. ಪಕ್ಷಕ್ಕೆ ಕರೆತರುವ ಬಗ್ಗೆ ನಾನೇನೂ ಮಾತನಾಡಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT