ತಿ.ನರಸೀಪುರ: ತಾಲ್ಲೂಕಿನ ಎಸ್.ದೊಡ್ಡಪುರದ ರಾಜೇಶ್ ಎಂಬುವವರ ಜಮೀನಿನ ಬಳಿ ಇಟ್ಟಿದ್ದ ಬೋನಿಗೆ ಎರಡೂವರೆ ವರ್ಷದ ಹೆಣ್ಣು ಚಿರತೆ ಶನಿವಾರ ಸೆರೆ ಸಿಕ್ಕಿದೆ.
ಹಲವು ದಿನಗಳಿಂದ ವಡ್ಗಲ್ ರಂಗನಾಥ ಸ್ವಾಮಿ ಬೆಟ್ಟ ಹಾಗೂ ಸುತ್ತಮುತ್ತಲ ಗ್ರಾಮದ ಆಸುಪಾಸು, ಸಿಗೋಡಿಪುರ ಸುತ್ತಮುತ್ತಲು ಗ್ರಾಮದಲ್ಲಿ ಚಿರತೆ ಕಾಣಿಸಿಕೊಳ್ಳುತ್ತಿದೆ ಎಂಬ ಮಾಹಿತಿ ಮೇರೆಗೆ ಎಸ್.ದೊಡ್ಡಪುರ ಬೆಟ್ಟದ ತಪ್ಪಲಿನ ರಾಜೇಶ್ ಎಂಬುವರ ಜಮೀನಿನ ಬಳಿ ಐದು ದಿನಗಳ ಹಿಂದೆ ಬೋನು ಇಡಲಾಗಿತ್ತು.
ಸ್ಥಳಕ್ಕೆ ವಲಯ ಅರಣ್ಯ ಅಧಿಕಾರಿ ಎಸ್.ಮಂಜುನಾಥ್, ಲೋಕೇಶ್ ಭೇಟಿ ನೀಡಿ ಸೆರೆಯಾದ ಚಿರತೆಯನ್ನು ಮೈಸೂರಿನ ಅರಣ್ಯ ಭವನಕ್ಕೆ ರವಾನಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.