ಮೈಸೂರು: ‘ಬಸವಣ್ಣ ಜಗತ್ತು ಕಂಡ ದಾರ್ಶನಿಕ. ಅವರ ತತ್ವ, ಆದರ್ಶ ಸಿದ್ಧಾಂತಗಳನ್ನು ಈಗಿನ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ’ ಎಂದು ಮಾಜಿ ಶಾಸಕ ಜಿ.ಎನ್.ನಂಜುಂಡಸ್ವಾಮಿ ಹೇಳಿದರು.

ಕರ್ನಾಟಕ ಸೇನಾ ಪಡೆ ಸಂಘಟನೆಯು ಜೆಎಲ್ಬಿ ರಸ್ತೆಯ ರೋಟರಿ ಶಾಲೆ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಬಸವ ಜಯಂತಿ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಬಸವಣ್ಣ 12ನೇ ಶತಮಾನದಲ್ಲಿಯೇ ಸಮಾನತೆ ವಿಚಾರವಾಗಿ ಹೋರಾಡಿದವರು. ಅನುಭವ ಮಂಟಪ ತೆರೆದು ಎಲ್ಲ ಸಮುದಾಯಗಳನ್ನು ಸೇರಿಸಿದವರು. ಅಂಬೇಡ್ಕರ್ ವಿಶ್ವಜ್ಞಾನಿ. ಅವರು ರಚಿಸಿದ ಸಂವಿಧಾನ ವಿಶ್ವಕ್ಕೆ ಮಾದರಿ ಎಂದರು.

ವಿವಿಧ ಕ್ಷೇತ್ರಗಳ ಸಾಧಕರಾದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಜಂಟಿ ನಿರ್ದೇಶಕಿ ಲಕ್ಷಮ್ಮ, ಮೈಸೂರು- ಚಾಮರಾಜನಗರ ಸಹಕಾರ ಬ್ಯಾಂಕ್ ನಿರ್ದೇಶಕ ಎಂ.ಬಿ.ಮಂಜೇಗೌಡ, ಕೆಎಸ್ಆರ್ಟಿಸಿ ಜಾಗೃತಿ ಮತ್ತು ಭದ್ರತಾ ಅಧಿಕಾರಿ ಎನ್.ಎಸ್.ಶಿವರಾಜೇಗೌಡ, ಸರ್.ಎಂ.ವಿಶ್ವೇಶ್ವರಯ್ಯ ಗೃಹ ನಿರ್ಮಾಣ ಕ್ಷೇತ್ರದ ಅಧ್ಯಕ್ಷ ಜಿ.ಎಸ್.ಅಶೋಕ್ ಕುಮಾರ್, ವಿಷನ್ ಟೀಂ ಮೈಸೂರು ಅಧ್ಯಕ್ಷ ಬಿ.ಆರ್.ನಂದೀಶ್ ಕುಮಾರ್, ಜೀವಧಾರ ರಕ್ತನಿಧಿ ಕೇಂದ್ರದ ವ್ಯವಸ್ಥಾಪಕ ನಿರ್ದೇಶಕ ಎಸ್.ಇ.ಗಿರೀಶ್, ಪಾಂಡವಪುರ ಪ್ರೌಢಶಾಲೆ ಶಿಕ್ಷಕ ಲೋಕೇಶ್ ಕುಲ್ಕುಂದ, ಹೋರಾಟಗಾರ ಗೋವಿಂದರಾಜು ಮುತ್ತಿಗೆ ಅವರಿಗೆ ‘ಶ್ರೀ ಬಸವೇಶ್ವರ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಕಾಯಕ ರತ್ನ ಪ್ರಶಸ್ತಿ’ ನೀಡಲಾಯಿತು.

ಸಮಾಜ ಸೇವಕ ರಘುರಾಂ ವಾಜಪೇಯಿ ಪ್ರಶಸ್ತಿ ಪ್ರದಾನ ಮಾಡಿದರು. ಎಸ್ಎಂಪಿ ಡೆವಲಪರ್ಸ್ ಸಂಸ್ಥೆಯ ಎಸ್.ಎಂ.ಶಿವಪ್ರಕಾಶ್ ಮಹಾರಾಣಿ ಕಲಾ ಕಾಲೇಜಿನ ಪ್ರತಿಭಾನ್ವಿತ ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ನೀಡಿದರು.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಶೈಕ್ಷಣಿಕ ಡೀನ್ ಪ್ರೊ.ಎನ್.ಲಕ್ಷ್ಮಿ, ಕಾವೇರಿ ಕ್ರಿಯಾ ಸಮಿತಿ ಅಧ್ಯಕ್ಷ ಎಸ್.ಜಯಪ್ರಕಾಶ್, ಕರ್ನಾಟಕ ಸೇನಾಪಡೆಯ ಅಧ್ಯಕ್ಷ ಶ್ರೀನಿವಾಸ್ ಗೌಡ, ಜಿಲ್ಲಾ ಅಧ್ಯಕ್ಷ ತೇಜೇಶ್ ಲೋಕೇಶ್ ಗೌಡ, ಮೂಗೂರು ನಂಜುಂಡಸ್ವಾಮಿ, ಪ್ರಭುಶಂಕರ್, ಗೋಲ್ಡ್ ಸುರೇಶ್, ಕೃಷ್ಣಪ್ಪ, ನೇಹಾ, ಸಿಂಧುವಳ್ಳಿ ಶಿವಕುಮಾರ್, ವರಕೋಡು ಕೃಷ್ಣೇಗೌಡ, ನಾಗರಾಜು, ಬೋಗಾದಿ ಸಿದ್ದೇಗೌಡ, ಲಕ್ಷಿ, ಭಾಗ್ಯಮ್ಮ ಪ್ರಭಾಕರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.