ತಿ.ನರಸೀಪುರ: ‘ ಜಿಲ್ಲಾ ಸಚಿವರ ಹೆಸರು ಹೇಳಿಕೊಂಡು ನೇರ ಸಾಲ, ಇನ್ನಿತರ ಸಾಲ, ಸಹಾಯ ಧನದ ಸಾಲ ಕೊಡಿಸುವುದಾಗಿ ನಂಬಿಸಿ ಮಹಿಳೆಯರಿಂದ ಹಣ ಪಡೆದು ವಂಚಿಸಿದ್ದಾರೆ’ ಎಂದು ತಾಲ್ಲೂಕಿನ ಕೊಳತೂರು ಗ್ರಾಮದ ಮಹಿಳೆಯೊಬ್ಬರ ವಿರುದ್ಧ ಅದೇ ಗ್ರಾಮದ ಮಹಿಳೆಯರು ತಲಕಾಡು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ವಂಚನೆಗೊಳಗಾದ ಮಹಿಳೆಯರು ತಲಕಾಡು ಠಾಣೆಯಲ್ಲಿ ಗ್ರಾಮದ ಜೋಕ್ಸ್ ಕುಳ್ಳಯ್ಯನ ರಮೇಶ್ ಎಂಬುವರ ಪತ್ನಿ ಜ್ಯೋತಿ ಎಂಬುವರ ವಿರುದ್ಧ ದೂರು ನೀಡಿದ್ದಾರೆ. ಜಿಲ್ಲಾ ಉಸ್ತುವಾರಿ, ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರಿಂದ ನೇರ ಸಾಲ, ಸಹಾಯ ಧನ ದಡಿ ಸಾಲ ಸೌಲಭ್ಯ ಮಂಜೂರು ಮಾಡಿಸಿ ಕೊಡುವ ಆಮಿಷವೊಡ್ಡಿ ಗ್ರಾಮ ನಿವಾಸಿಗರಿಂದ ಲಕ್ಷಾಂತರ ರೂಪಾಯಿ ಹಣ ವಸೂಲಿ ಮಾಡಿದ್ದಾರೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.

‘ 170 ರಿಂದ 180ಮಂದಿಯಿಂದ ತಲಾ ₹1,200 ರಂತೆ ಹಾಗೂ ಕೆಲ ಯುವಕರಿಂದ ಲೋನ್ ಕೊಡಿಸುವುದಾಗಿ ₹50 ಸಾವಿರದಂತೆ ವಸೂಲು ಮಾಡಿದ್ದಾರೆ’ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಮಹಿಳೆ ವಿರುದ್ಧ ಕಾನೂನು ಕ್ರಮ ಕೈಗೊಂಡು, ನ್ಯಾಯ ದೊರಕಿಸುವಂತೆ ಅವರು ಪೊಲೀಸರಲ್ಲಿ ಮೊರೆ ಹೋಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.