ಮೈಸೂರು: ನಂಜರಾಜ ಬಹದ್ದೂರ್ ಛತ್ರದಲ್ಲಿ ಶನಿವಾರ ಅವರೆಯ ಘಮಲು ಆವರಿಸಿತ್ತು. ನಾಟಿ ಸೊನೆ ಅವರೆಯ ಜೊತೆಗೆ ಅದರಿಂದ ಸಿದ್ಧಪಡಿಸಿದ ಬಗೆಬಗೆಯ ಖಾದ್ಯಗಳು, ತೊಗರಿ, ಅಲಸಂದೆ, ಕಡಲೆಕಾಯಿ ಮೊದಲಾದ ಚಳಿಗಾಲದ ಉತ್ಪನ್ನಗಳ ಮಾರಾಟ ಗ್ರಾಹಕರನ್ನು ಸೆಳೆಯಿತು.

ಸಹಜ ಸಮೃದ್ಧ ಹಾಗೂ ಸಹಜ ಸೀಡ್ಸ್ ಸಹಯೋಗದಲ್ಲಿ ಆರಂಭವಾದ ಎರಡು ದಿನಗಳ ‘ಮಾಗಿ ಸಂಭ್ರಮ’ದಲ್ಲಿ ಕಾಳುಗಳ ಜೊತೆಗೆ ಪರ್ಪಲ್ ಯಾಮ್, ಕೆಂಪು ಮುಸುಕಿನ ಜೋಳ, ಬಳ್ಳಿ ಆಲೂಗೆಡ್ಡೆ ಮೊದಲಾದ ಹೊಸದಾಗಿ ಕೊಯ್ಲಾದ ಬೆಳೆಗಳು ಸಹ ಮಾರಾಟ ಮತ್ತು ಪ್ರದರ್ಶನಕ್ಕೆ ಬಂದಿವೆ.

ಎಚ್.ಡಿ. ಕೋಟೆ, ಪಿರಿಯಾಪಟ್ಟಣ, ತುಮಕೂರು, ಧಾರವಾಡ, ಬೆಂಗಳೂರು ಜಿಲ್ಲೆಗಳಿಂದ ಚಿನುಗಲು, ದಬ್ಬೆ, ಕೆಂಪು, ಮಣಿ, ಹಿತ್ತಲ ಅವರೆ ಮಾರಾಟಕ್ಕೆ ಬಂದಿದೆ. ಹಿಚುಕಿದ ಅವರೆ ಖರೀದಿಗೆ ಸಿಗುತ್ತಿದೆ.

ಕೃಷಿ ಉತ್ಪನ್ನದ ಮಾರಾಟದ ಜೊತೆಗೆ ಅವರೆಕಾಳು ಉಪ್ಪಿಟ್ಟು, ಅವರೆಕಾಳು ದೋಸೆ, ಮುದ್ದೆ - ಹಿಚುಕಿದ ಅವರೆಕಾಳು ಸಾರು, ಅವರೆಕಾಳು ಬಾತ್, ಅವರೆಕಾಳಿನ ಜಾಮೂನು ಖಾದ್ಯಗಳು ಗ್ರಾಹಕರ ಗಮನ ಸೆಳೆದಿದೆ.

ಇದರೊಟ್ಟಿಗೆ ವಿವಿಧ ಬಗೆಯ ಅಕ್ಕಿ, ಸಿರಿಧಾನ್ಯ, ಗೆಡ್ಡೆ–ಗೆಣಸು, ವಿವಿಧ ಗೃಹಬಳಕೆ ಸಾಮಗ್ರಿಗಳ ಮಾರಾಟವೂ ಮೇಳದಲ್ಲಿದೆ. ವೈವಿಧ್ಯಮಯ ಸೋರೆ ಹಾಗೂ ಅವುಗಳಿಂದ ಮಾಡಿದ ಕಲಾಕೃತಿಗಳು ನೋಡುಗರನ್ನು ಆಕರ್ಷಿಸುತ್ತಿವೆ.

ಚಾಲನೆ

ಜೆಎಸ್ಎಸ್ ಆರ್ಯುವೇದ ವೈದ್ಯಕೀಯ ಕಾಲೇಜಿನ ಉಪ ಪ್ರಾಚಾರ್ಯ ಡಾ. ಶಿವಪ್ರಸಾದ್ ಹುಡೇದ್ ಮೇಳವನ್ನು ಉದ್ಘಾಟಿಸಿದರು. ‘ಚಳಿಗಾಲದಲ್ಲಿ ಆರೋಗ್ಯಕ್ಕೆ ಪೂರಕವಾದ, ದೇಹಕ್ಕೆ ಚೈತನ್ಯ ಕೊಡುವಂಥ ಕಾಳುಗಳ ಬಳಕೆ ಬಹುಮುಖ್ಯ. ಮಾಗಿ ಕಾಲದಲ್ಲಿ ಸಿಗುವ ಕಾಳು ಮತ್ತು ಗೆಡ್ಡೆ ಗೆಣಸುಗಳು ನಮ್ಮ ಅನ್ನದ ತಟ್ಟೆಗೆ ಬರಲಿ’ ಎಂದು ಆಶಿಸಿದರು.

ಪಿರಿಯಾಪಟ್ಟಣ ತಾಲ್ಲೂಕಿನ ಹಿಟ್ನೆಹೆಬ್ಬಾಗಿಲಿನ ಸಾವಯವ ಕೃಷಿಕ ಕಾಳಪ್ಪ, ಹೆಗ್ಗಡದೇವನಕೋಟೆಯ ನೂರಲಕುಪ್ಪೆಯ ನಾಗಮ್ಮ ಅತಿಥಿಯಾಗಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.