ಮೈಸೂರು: ನಗರದ ದಸರಾ ವಸ್ತುಪ್ರದರ್ಶನ ಆವರಣದಲ್ಲಿ ದೋಣಿವಿಹಾರಕ್ಕಾಗಿ ಅಭಿವೃದ್ಧಿಪಡಿಸಲಿರುವ ‘ದುಬೈ ಮಾದರಿ ಬೋಟಿಂಗ್ ವ್ಯವಸ್ಥೆ’ ಪ್ರವಾಸಿಗರನ್ನು ಆಕರ್ಷಿಸಲಿದೆ.

ಪ್ರಾಧಿಕಾರದ ಆವರಣದ ಕಾಳಿಂಗರಾವ್ ರಂಗಮಂಟಪದ ಬಳಿ ಲೇಸರ್ ಲೈಟಿಂಗ್ ಸಹಿತ ‘ಬೋಟಿಂಗ್ ಪಾಯಿಂಟ್’ (ಫ್ಲೋಟಿಂಗ್ ಡ್ರ್ಯಾಗನ್ ಬೋಟಿಂಗ್ ಕೊಳ) ಅಭಿವೃದ್ಧಿಪಡಿಸಲು ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರ (ಕೆಇಎ)ದಿಂದ ಕ್ರಿಯಾಯೋಜನೆ ರೂಪಿಸಲಾಗಿದೆ. ಇದಕ್ಕಾಗಿ ಸರ್ಕಾರದಿಂದ ₹ 3.59 ಕೋಟಿ ಅನುದಾನವೂ ದೊರೆತಿದೆ. ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಹಾರಾಜ ಕಾಲೇಜು ಮೈದಾನದಲ್ಲಿ ಶನಿವಾರ ಶಂಕುಸ್ಥಾಪನೆ ನೆರವೇರಿಸಿದ್ದು, ತ್ವರಿತವಾಗಿ ಪೂರ್ಣಗೊಳಿಸಲು ಯೋಜಿಸಲಾಗಿದೆ. ಪೂರ್ಣಗೊಂಡ ನಂತರ ಇದು, ವಸ್ತುಪ್ರದರ್ಶನ ಆವರಣದಲ್ಲಿನ ಹೊಸ ಆಕರ್ಷಣೆಯಾಗಲಿದೆ.

ನಾಡಹಬ್ಬ ಮೈಸೂರು ದಸರಾ ಸಂದರ್ಭದಲ್ಲಿ ಮೂರು ತಿಂಗಳವರೆಗೆ ನಡೆಯುವ ದೊಡ್ಡ ಕಾರ್ಯಕ್ರಮವೆಂದರೆ ದಸರಾ ವಸ್ತುಪ್ರದರ್ಶನ. ಇದನ್ನು ದೊಡ್ಡಕೆರೆ ಮೈದಾನದಲ್ಲಿ ಪ್ರಾಧಿಕಾರದಿಂದ ಆಯೋಜಿಸಲಾಗುತ್ತದೆ. ನಾಡಹಬ್ಬದೊಂದಿಗೇ ಉದ್ಘಾಟನೆಗೊಳ್ಳುವ ಈ ಪ್ರದರ್ಶನವು ಸರ್ಕಾರದ ಸಾಧನೆಗಳ ಅನಾವರಣವನ್ನೂ ಮಾಡುತ್ತದೆ. ಜೊತೆಗೆ, ಮನರಂಜನೆ ನೀಡುವ ಆಟಿಕೆಗಳನ್ನು ಒಳಗೊಂಡಿರುತ್ತದೆ. ವಾಣಿಜ್ಯ ಮಳಿಗೆಗಳೂ ಇಲ್ಲಿರುತ್ತವೆ. ಲಕ್ಷಾಂತರ ಮಂದಿ ಬರುತ್ತಾರೆ.

ವರ್ಷವಿಡೀ ಬರಲೆಂದು:

ಈ ಅವಧಿಯಲ್ಲಿ ಮಾತ್ರವಲ್ಲದೆ ಇಡೀ ವರ್ಷವೂ ಇಲ್ಲಿಗೆ ಜನರು ಬರುವಂತಾಗಲು ಪ್ರಾಧಿಕಾರವು ನಡೆಸುತ್ತಿರುವ ಪ್ರಯತ್ನದ ಭಾಗವಾಗಿ ಬೋಟಿಂಗ್ಗಾಗಿಯೇ ಕೊಳವನ್ನು ನಿರ್ಮಿಸಲು ಕ್ರಮ ಕೈಗೊಂಡಿದೆ. ಮಕ್ಕಳನ್ನು ಹೆಚ್ಚಿನ ಪ್ರಮಾಣದಲ್ಲಿ ಆಕರ್ಷಿಸುವ ಉದ್ದೇಶದಿಂದ ಡ್ರ್ಯಾಗನ್ ಬೋಟ್ಗಳನ್ನು ಇಲ್ಲಿ ಬಳಸಲು ಯೋಜಿಸಲಾಗಿದೆ. ಸೆಲ್ಫಿ ತೆಗೆದುಕೊಳ್ಳಲು ‘ಮೈಸೂರನ್ನು ಪ್ರೀತಿಸುತ್ತೇನೆ’ ಎಂಬ ಫಲಕದ ಪಾಯಿಂಟ್ ಕೂಡ ಇರಲಿದೆ.

‘ದಸರಾ ವಸ್ತುಪ್ರದರ್ಶನದಲ್ಲಿರುವ ಮುಕ್ಕಾಲು ಎಕರೆ ಜಾಗದಲ್ಲಿ ಕೊಳವನ್ನು ನಿರ್ಮಿಸಲಾಗುವುದು. ಪ್ರವಾಸಿಗರನ್ನು ಆಕರ್ಷಿಸುವ ಭಾಗವಾಗಿ ಈ ಯೋಜನೆ ಹಾಕಿಕೊಳ್ಳಲಾಗಿದೆ. ನಗರಕ್ಕೆ ಬರುವ ಪ್ರವಾಸಿಗರು ಇಲ್ಲಿಗೂ ಭೇಟಿ ಕೊಡುವಂತಾಗಬೇಕು ಎನ್ನುವುದು ನಮ್ಮ ಉದ್ದೇಶವಾಗಿದೆ. ಕೊಳ ನಿರ್ಮಾಣದ ಬಗ್ಗೆ ಪ್ರಸ್ತಾಪಿಸಿದಾಗ ಒಪ್ಪಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನುದಾನವನ್ನು ಒದಗಿಸಿದ್ದಾರೆ’ ಎಂದು ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ಖಾನ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ದಸರಾ ವಸ್ತುಪ್ರದರ್ಶನದ ಅವಧಿಯಲ್ಲಷ್ಟೇ ಆವರಣವು ಚಟುವಟಿಕೆಯಿಂದ ಕೂಡಿರುತ್ತದೆ. ವರ್ಷದ ಇತರ ತಿಂಗಳುಗಳಲ್ಲಿ ಕಾರ್ಯಕ್ರಮಗಳು ನಡೆಯುವುದು ಅಪರೂಪ. ಹೀಗಾಗಿ, ವರ್ಷವಿಡೀ ‘ಜೀವಂತ’ವಾಗಿ ಇಡುವಂತೆ ಮಾಡುವುದು ನಮ್ಮ ಉದ್ದೇಶವಾಗಿದೆ. ಅಂಬಾವಿಲಾಸ ಅರಮನೆ, ಮೃಗಾಲಯ, ಚಾಮುಂಡಿಬೆಟ್ಟ ಮೊದಲಾದ ಕಡೆಗಳಿಗೆ ಬರುವವರನ್ನು ಪ್ರಾಧಿಕಾರದತ್ತಲೂ ಸೆಳೆಯಬೇಕಾಗಿದೆ. ಈ ನಿಟ್ಟಿನಲ್ಲಿ ಕೊಳ ನೆರವಾಗಲಿದೆ. ಅತ್ಯಾಧುನಿಕವಾಗಿ ನಿರ್ಮಿಸಲಿದ್ದು, ಸಂಜೆಯ ವೇಳೆ ಪ್ರವಾಸಿಗರು ಬಂದು ಆಸ್ವಾದಿಸಬೇಕು ಎನ್ನುವುದು ನಮ್ಮ ಆಶಯವಾಗಿದೆ’ ಎನ್ನುತ್ತಾರೆ ಅವರು.

ಹಳೇಬೀಡಿನಂತೆ...

ವಸ್ತುಪ್ರದರ್ಶನ ಆವರಣದ ಸಂಗೀತ ಕಾರಂಜಿ (ಫೌಂಟೇನ್)ಯನ್ನು ಮೇಲ್ದರ್ಜೆಗೇರಿಸಲು ಹಾಗೂ ‘ಎ ಬ್ಲಾಕ್’ ವಾಣಿಜ್ಯ ಮಳಿಗೆಗಳ ಪ್ರದೇಶವನ್ನು ‘ಹಳೇಬೀಡು’ ಶೈಲಿಯಲ್ಲಿ ನವೀಕರಿಸಲು ತಲಾ ₹ 9.50 ಕೋಟಿಯನ್ನು ಸರ್ಕಾರ ನೀಡಿದೆ. ‘ವಸ್ತುಪ್ರದರ್ಶನದ ಆವರಣವನ್ನು ಪ್ರವಾಸೋದ್ಯಮಕ್ಕೆ ಪೂರಕವಾಗಿ ಸುಧಾರಿಸುವುದು ನಮ್ಮ ಗುರಿಯಾಗಿದೆ. ಪ್ರಾಧಿಕಾರದ ಆವರಣವು 83 ಎಕರೆಯಲ್ಲಿ ಹರಡಿದೆ. ಅದರಲ್ಲಿರುವ ‘ಎ ಬ್ಲಾಕ್’ನಲ್ಲಿ ಒಟ್ಟು 154 ವಾಣಿಜ್ಯ ಮಳಿಗೆಗಳಿದ್ದು ಇವು 20 ವರ್ಷ ಹಳೆಯ ಮಾದರಿಯಲ್ಲಿವೆ. ಅಲ್ಲದೇ ದಸರಾ ಸಮಯದಲ್ಲಿ 3 ತಿಂಗಳು ಮಾತ್ರ ಬಳಕೆ ಆಗುತ್ತಿವೆ. ಅವುಗಳನ್ನು ವರ್ಷವಿಡೀ ಉಪಯೋಗ ಆಗುವಂತೆ ಮಾಡಲೆಂದು ಅತ್ಯಾಧುನಿಕ ಸ್ಪರ್ಶ ಕೊಡಲಾಗುವುದು. ಮೂಲಸೌಕರ್ಯಗಳ ಅಭಿವೃದ್ಧಿಗೂ ₹ 1 ಕೋಟಿ ದೊರೆತಿದೆ’ ಎಂದು ಅಯೂಬ್ಖಾನ್ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.