ಮೊಟ್ಟೆ ನೀಡಿಲ್ಲ: ಕ್ರಮಕ್ಕೆ ವರದಿ
‘ಹನಗೋಡು ಹೋಬಳಿ ಕೇಂದ್ರದ ಸರ್ಕಾರಿ ಪ್ರೌಢಶಾಲೆಯ 222 ವಿದ್ಯಾರ್ಥಿಗಳಿಗೆ 1 ತಿಂಗಳು ಮೊಟ್ಟೆ ವಿತರಿಸದೆ ಅನುದಾನ ದುರ್ಬಳಕೆಯಾಗಿದೆ ಎಂದು ಸಾರ್ವಜನಿಕರಿಂದ ಶಿಕ್ಷಣ ಇಲಾಖೆಗೆ ದೂರು ಬಂದಿದೆ. ತನಿಖೆ ನಡೆಸಿ ಶಾಲೆಯ ಉಪ ಪ್ರಾಂಶುಪಾಲರಿಗೆ ನೋಟಿಸ್ ಜಾರಿಗೊಳಿಸಿ ಜಿ.ಪಂ. ಕಾರ್ಯನಿರ್ವಾಹಣಾಧಿಕಾರಿ ಮತ್ತು ಡಿಡಿಪಿಐ ಗೆ ವರದಿ ನೀಡಿದೆ’ ಎಂದು ಸಭೆಗೆ ಬಿಇಒ ಮಾಹಿತಿ ನೀಡಿದರು.