ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಣಾವರ ರಾಮಸ್ವಾಮಿ ಹೋರಾಟದ ಸ್ಮರಣೆ

Published 14 ಸೆಪ್ಟೆಂಬರ್ 2023, 5:45 IST
Last Updated 14 ಸೆಪ್ಟೆಂಬರ್ 2023, 5:45 IST
ಅಕ್ಷರ ಗಾತ್ರ

ಮೈಸೂರು: ಹೋರಾಟಗಾರ ಬಾಣಾವರ ರಾಮಸ್ವಾಮಿ ಅವರ ಕುರಿತ ಮಾಹಿತಿ ಫಲಕಗಳನ್ನು ಅಳವಡಿಸುವ ಜೊತೆಗೆ ಖಾಸಗಿ ಪ್ರಾಯೋಜಕತ್ವದಲ್ಲಿ ರಾಮಸ್ವಾಮಿ ವೃತ್ತವನ್ನು ಅಭಿವೃದ್ಧಿಗೊಳಿಸಲಾಗುವುದು ಎಂದು ಮೇಯರ್ ಶಿವಕುಮಾರ್ ತಿಳಿಸಿದರು.

ಯುವ ಭಾರತ್ ಸಂಘಟನೆಯಿಂದ ರಾಮಸ್ವಾಮಿ ವೃತ್ತದಲ್ಲಿ ಬುಧವಾರ ಆಯೋಜಿಸಿದ್ದ ರಾಮಸ್ವಾಮಿ ಅವರ 76ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಭಾರತಕ್ಕೆ‌ ಸ್ವಾತಂತ್ರ್ಯ ದೊರೆತ ನಂತರ ಮೈಸೂರು ರಾಜ್ಯಕ್ಕೆ ಪ್ರಜಾಪ್ರಭುತ್ವ ಸ್ವಾತಂತ್ರ್ಯ ನೀಡಬೇಕೆಂದು‌ ಆಗ್ರಹಿಸಿ‌ ನಡೆದ ವಿದ್ಯಾರ್ಥಿ ಚಳವಳಿಯಲ್ಲಿ 1947ರ ಸೆಪ್ಟೆಂಬರ್ 13ರಂದು ಭಾರತ ತ್ರಿವರ್ಣ ಧ್ವಜ ಹಾರಿಸಿ‌ ಮೈಸೂರು ರಾಜ್ಯದ ಕಮೀಷನರ್ ನಾಗರಾಜರಾಯರ ಗುಂಡೇಟಿಗೆ ರಾಮಸ್ವಾಮಿ ಬಲಿಯಾದರು. ಅವರ ಬಲಿದಾನ ಸ್ಮರಿಸುವುದು ನಮ್ಮ ಕರ್ತವ್ಯ ಎಂದರು.

ಬಿಜೆಪಿ ಮುಖಂಡ ಎಲ್. ನಾಗೇಂದ್ರ ಮಾತನಾಡಿ, ಮೈಸೂರು ರಾಜ್ಯ ಕರ್ನಾಟಕವಾಗಿ 50ರ ಸಂಭ್ರಮ ಸಮಾರಂಭದಲ್ಲಿ ರಾಮಸ್ವಾಮಿ ಸೇರಿದಂತೆ ಹೋರಾಟಗಾರರ ತ್ಯಾಗವನ್ನು ಸ್ಮರಿಸುವ ಕಾರ್ಯಕ್ರಮಗಳನ್ನು ಸರ್ಕಾರ ಆಯೋಜಿಸಬೇಕು ಎಂದು ಸಲಹೆ ನೀಡಿದರು.

ಜೀವಧಾರ ರಕ್ತನಿಧಿ ಕೇಂದ್ರದ ಗಿರೀಶ್, ಬಿಜೆಪಿ ಮುಖಂಡ ಭಾಸ್ಕರ್ ರಾವ್, ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ. ಪ್ರಕಾಶ್, ಪಾಲಿಕೆ‌ ಸದಸ್ಯೆ ಪ್ರಮೀಳಾ ಭರತ್, ಎಂಡಿ. ಪಾರ್ಥಸಾರಥಿ, ಜಗದೀಶ್, ಪುಷ್ಪಾ ಅಯ್ಯಂಗಾರ್, ಯುವ ಭಾರತ್ ಸಂಘಟನೆ ಸಂಚಾಲಕ ಅಜಯ್ ಶಾಸ್ತ್ರಿ, ಕೆಎಂಪಿಕೆ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್, ಚರಣ್, ಕೆ.ಆರ್. ಎಸ್ ವಿಜಯ್ ಕುಮಾರ್, ವಿಘ್ನೇಶ್ವರ ಭಟ್, ವೆಂಕಟರಾಮ್, ಪ್ರಹ್ಲಾದ ರಾವ್, ಸುಚೀಂದ್ರ, ಶರತ್ ಭಂಡಾರಿ, ಭೈರತಿ ಲಿಂಗರಾಜು, ಸೂರಜ್, ಸದಾಶಿವ, ಚಂದ್ರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT