ಮೈಸೂರು: ನಗರದ ಗೋಕುಲಂನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಸ್ಥಾಪನೆಯ 100ನೇ ವರ್ಷಾಚರಣೆ ಅಂಗವಾಗಿ ಭಾನುವಾರ ಸದಸ್ಯರಿಂದ ಪಥ ಸಂಚಲನ ನಡೆಯಿತು.

ಸಂಘದ ಸ್ಥಾಪಕರಾದ ಕೆ.ಬಿ.ಹೆಡಗೇವಾರ್, ಎಂ.ಎಸ್.ಗೋಳ್ವಾಲ್ಕರ್ ಅವರ ಭಾವಚಿತ್ರದ ಮೆರವಣಿಗೆ ನಡೆಸಿದ ಸದಸ್ಯರು, ಭಗವಾಧ್ವಜಕ್ಕೆ ಗೌರವ ಸಲ್ಲಿಸಿದರು.

ಸಹಕಾರ್ಯವಾಹ ಲತೇಶ್ ನೇತೃತ್ವದಲ್ಲಿ 1,200 ಸದಸ್ಯರು ಸೇರಿದ್ದರು. ಗೋಕುಲಂ 3ನೇ ಹಂತದ ಮೈಸೂರು ಒನ್ ನಾಗರಿಕ ಸೇವಾ ಕೇಂದ್ರದ ಮೈದಾನದಿಂದ 1ನೇ ತಂಡವು ನಂದಗೋಕುಲ 6 ನೇ ಮುಖ್ಯ ರಸ್ತೆ, ಕಾಂಟೂರ್ ರಸ್ತೆ, ಮಹದೇಶ್ವರ ಶಾಲೆ ರಸ್ತೆ, ಕುಂಬಾರಕೊಪ್ಪಲು 1ನೇ ಮುಖ್ಯ ರಸ್ತೆ, ತ್ರಿನೇತ್ರ ಸರ್ಕಲ್ ಮೂಲಕ ಮತ್ತೆ ಮೈದಾನಕ್ಕೆ ಮರಳಿತು.

ಮತ್ತೊಂದು ಪಥ ಸಂಚಲನವು ಗೋಕುಲಂ 9 ನೇ ಕ್ರಾಸ್ ಮೂಲಕ ಸಾಗಿ, ಪಿ.ಕೆ.ಕಾಲೊನಿ ಮುಖ್ಯ ರಸ್ತೆ, ಬಸವೇಶ್ವರ ಉದ್ಯಾನ, ಕಾಂಟೂರ್ ರಸ್ತೆ, ಗಣಪತಿ ದೇವಸ್ಥಾನದ ಮೂಲಕ ಮೈದಾನಕ್ಕೆ ವಾಪಸಾಯಿತು.

‘ಎಲ್ಲ ಭೇದ ಮರೆತು ಬನ್ನಿರಿ ನಾವು ಸಮಾನ...’, ‘ದೇವರಿಗಿಲ್ಲ ಜಾತಿ ಭೇದ.. ಭಕುತರಿಗಂತೂ ಇಲ್ಲ...’ ಹಾಗೂ ಕೊನೆಯಲ್ಲಿ ಆರ್ಎಸ್ಎಸ್ ಗೀತೆ ‘ನಮಸ್ತೇ ಸದಾ ವತ್ಸಲೆ’ ಅನ್ನು ಸದಸ್ಯರು ಹಾಡಿದರು.

ವಾಮನ್ ಬಾಪಟ್, ಶಾಸಕ ಟಿ.ಎಸ್.ಶ್ರೀವತ್ಸ, ಮುಖಂಡರಾದ ಪ್ರತಾಪ್ ಸಿಂಹ, ವಾಸುದೇವ ಭಟ್, ರವಿಶಂಕರ್, ಆನಂದ್, ಗಿರಿಧರ್, ತಿಲಕ್, ಮಾ.ವೆಂಕಟ್ ರಾಮ್ ಪಾಲ್ಗೊಂಡಿದ್ದರು.

ನಿರ್ಣಯಗಳು

ನವೆಂಬರ್ 16ರಿಂದ 23ರವರೆಗೆ ಯುವ ಉತ್ಸವ ಆಯೋಜನೆ, ಡಿ.7ರಿಂದ 28ರವರೆಗೆ ಮನೆ ಮನೆ ಸಂಪರ್ಕ ಮಾಡುವುದು. 2026ರ ಜ.18ರಿಂದ ಫೆ.1ರೊಳಗೆ ಹಿಂದೂ ಸಮ್ಮೇಳನ, ಏಪ್ರಿಲ್ ಮತ್ತು ಮೇನಲ್ಲಿ ಸಾಮಾಜಿಕ ಸದ್ಭಾವನ ಸಭೆಗಳ ಆಯೋಜನೆ, ಜೂನ್, ಜುಲೈನಲ್ಲಿ ನಾಗರಿಕರ ಗೋಷ್ಠಿಗಳು ಹಾಗೂ ಸೆ.20ರಿಂದ 27ರವರೆಗೆ ಶಾಖಾ ವಿಸ್ತಾರ ಸಪ್ತಾಹ ಆಯೋಜಿಸಲು ಸಭೆಯಲ್ಲಿ ನಿರ್ಣಯಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.