ತಮ್ಮನ ಸಾವಿನ ಬಳಿಕ ತಾಯಿ ಮಾನಸಿಕವಾಗಿ ಕುಗ್ಗಿದ್ದಾರೆ. ಈಗ ಮನೆಗಾಗಿ ಸರ್ಕಾರಿ ಕಚೇರಿ ಅಲೆದಾಡುತ್ತಿರುವುದನ್ನು ಕಂಡು ಮತ್ತಷ್ಟು ಕಂಗಾಲಾಗಿದ್ದಾರೆ
ರವಿ ಮೃತ ಕನಕರಾಜು ಸಹೋದರ
ಮನೆ ನಿರ್ಮಾಣಕ್ಕೆ ಸೂಚನೆ
‘ಕನಕರಾಜು ಅವರ ಸಹೋದರ ರವಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಬೇಡ ಎಂದ ಕಾರಣ ಕೆಲಸ ಕೊಡಿಸಲು ವಿಳಂಬವಾಗಿದೆ. ಈಚೆಗೆ ಭೇಟಿಯಾಗಿ ಹೊರಗುತ್ತಿಗೆ ಕೆಲಸಕ್ಕೆ ಒಪ್ಪಿಕೊಂಡಿದ್ದು ಹದಿನೈದು ದಿನದ ಒಳಗಾಗಿ ಕೆಲಸ ಕೊಡಿಸುತ್ತೇನೆ. ಮನೆ ನಿರ್ಮಾಣದ ವಿಚಾರ ನನಗೆ ತಿಳಿಸಿರಲಿಲ್ಲ. ತಕ್ಷಣವೇ ಆಶ್ರಯ ಯೋಜನೆಯಡಿ ಮನೆ ನಿರ್ಮಾಣಕ್ಕೆ ಅವಕಾಶ ಮಾಡಲು ಪಟ್ಟಣ ಪಂಚಾಯಿತಿಗೆ ಸೂಚನೆ ನೀಡುತ್ತೇನೆ’ ಎಂದು ಜಿಲ್ಲಾಧಿಕಾರಿ ಸಿ.ಲಕ್ಷ್ಮಿಕಾಂತ ರೆಡ್ಡಿ ತಿಳಿಸಿದರು.