ಮೈಸೂರು: ಮೈಸೂರು ವಿಶ್ವವಿದ್ಯಾಲಯ ವ್ಯಾಪ್ತಿಯ ಪದವಿ ವಿಭಾಗದ ಸೆಮಿಸ್ಟರ್ ಪರೀಕ್ಷೆಗಳು ಸೋಮವಾರದಿಂದ (ನ. 24) ಆರಂಭವಾಗಲಿದ್ದು, ಹಿಂದಿನಂತೆಯೇ ವಿಶ್ವವಿದ್ಯಾಲಯವೇ ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆಪತ್ರಿಕೆಗಳನ್ನು ತಲುಪಿಸಲಿದೆ.

‘ನಗರ ವ್ಯಾಪ್ತಿಯ ಕಾಲೇಜುಗಳ ಮುಖ್ಯಸ್ಥರೇ ಪರೀಕ್ಷೆ ದಿನ ಮುಂಜಾನೆ ವಿ.ವಿ. ಕುಲಸಚಿವರ ಆಪ್ತ ಶಾಖೆಯಿಂದ ಪ್ರಶ್ನೆಪತ್ರಿಕೆ ಪಡೆದು, ಪರೀಕ್ಷೆ ಮುಕ್ತಾಯದ ಬಳಿಕ ಅಂದು ಸಂಜೆಯೇ ಉತ್ತರಪತ್ರಿಕೆಗಳನ್ನು ವಿಶ್ವವಿದ್ಯಾಲಯಕ್ಕೆ ತಲುಪಿಸಬೇಕು’ ಎಂದು ವಿ.ವಿಯು ಈಚೆಗೆ ಆದೇಶ ಹೊರಡಿಸಿತ್ತು. ‘ಇದರಿಂದಾಗಿ ಪರೀಕ್ಷೆಯ ಗೌಪ್ಯತೆಗೆ ಧಕ್ಕೆ ಆಗಲಿದ್ದು, ವಿದ್ಯಾರ್ಥಿಗಳಿಗೆ ತೊಂದರೆ ಆಗಲಿದೆ. ಹೀಗಾಗಿ ಹಳೇ ಪದ್ಧತಿಯನ್ನೇ ಮುಂದುವರಿಸಬೇಕು’ ಎಂದು ಕಾಲೇಜುಗಳ ಮುಖ್ಯಸ್ಥರು ಆಗ್ರಹಿಸಿದ್ದರು. ಈ ಕುರಿತು ‘ಪ್ರಜಾವಾಣಿ’ ನ. 23ರ ಸಂಚಿಕೆಯಲ್ಲಿ ವರದಿ ಪ್ರಕಟಿಸಿತ್ತು.

ವರದಿ ಬಳಿಕ ಎಚ್ಚೆತ್ತ ವಿ.ವಿಯು ಸುತ್ತೋಲೆ ಹಿಂಪಡೆದಿದ್ದು, ಹಳೇ ಪದ್ಧತಿಯನ್ನೇ ಮುಂದುವರಿಸುವುದಾಗಿ ಹೊಸ ಸುತ್ತೋಲೆ ಹೊರಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.