ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಟ್ಟಿ ಚಿನ್ನದ ಗಣಿ: ಕಾರ್ಮಿಕರ ವೇತನ ಶೇ 27 ರಷ್ಟು ಹೆಚ್ಚಳ

Published 1 ಜುಲೈ 2024, 14:43 IST
Last Updated 1 ಜುಲೈ 2024, 14:43 IST
ಅಕ್ಷರ ಗಾತ್ರ

ಹಟ್ಟಿ ಚಿನ್ನದ ಗಣಿ: ‘ಇಲ್ಲಿನ ಚಿನ್ನದಗಣಿ ಕಂಪನಿಯ ಕಾರ್ಮಿಕರಿಗೆ ಹೊಸ ವೇತನ ಒಪ್ಪಂದದ ಪ್ರಕಾರ ಶೇ 27ರಷ್ಟು ಹೆಚ್ಚಳವಾಗಲಿದ್ದು, ಶೀಘ್ರದಲ್ಲಿ ಜಾರಿಗೆ ಬರಲಿದೆ’ ಎಂದು ಸಿಬ್ಬಂದಿ ಹಾಗೂ ಕಾರ್ಮಿಕ ಸಂಘದ ಪ್ರಧಾನ ಕಾರ್ಯದರ್ಶಿ ವಿಜಯ ಭಾಸ್ಕರ್ ಹೇಳಿದರು.

ಹಟ್ಟಿ ಪಟ್ಟಣಸ ಕೋಠಾ ಕ್ರಾಸ್ ಬಳಿ ಇರುವ ಪೈ ಭವನದಲ್ಲಿ ಹಮ್ಮಿಕೊಂಡಿದ್ದ ಭಾನುವಾರ ವಿಶ್ವ ಕಾರ್ಮಿಕ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಕ್ರೀಡಾಕೂಟದ ಸಮಾರೋಪ ಹಾಗೂ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.

ಈಗಾಗಲೇ ಹೊಸ ವೇತನ ಒಪ್ಪಂದಗಳಿಗೆ ಗಣಿ ಆಡಳಿತ ಕಂಪನಿ ವೇತನ ಹೆಚ್ಚಳ ಮಾಡಲು ಭರವಸೆ ನೀಡಿದೆ.  ಹೊಸ ವೇತನ ಒಪ್ಪಂದಂತೆ ಆದಷ್ಟು ಬೇಗ  ಕಾರ್ಮಿಕರಿಗೆ ಸಿಗಬೇಕಾದ‌ ಎಲ್ಲ ಸೌಲಭ್ಯಗಳು ಸಿಗಲಿವೆ ಎಂದು ತಿಳಿಸಿದರು.

ಸಿಬ್ಬಂದಿ ಹಾಗೂ ಕಾರ್ಮಿಕ ಸಂಘದ ಅಧ್ಯಕ್ಷ ಎಂ ಶಫೀ ಮಾತನಾಡಿ, ಕಾರ್ಮಿಕರ ಬಹುದಿನದ ಬೇಡಿಕೆಯಾದ ಅನ್ ಫೀಟ್ ಯೋಜನೆ ಜಾರಿಯಾಗಿದ್ದು, ಕಾರ್ಮಿಕ ಮಕ್ಕಳಿಗೆ ಉದ್ಯೋಗ ದೊರೆಯಲಿದೆ. ಈ ಹಿಂದೆ ಇದ್ದ ಸಂಘಟನೆ ಅನ್ ಪೀಟ್ ಯೋಜನೆ ಜಾರಿ ಮಾಡುವಲ್ಲಿ ವಿಫಲವಾಗಿತ್ತು. ಚುನಾವಣೆಯಲ್ಲಿ ನೀಡದ ಭರವಸೆಯಂತೆ ಕಾರ್ಮಿಕ ಮಕ್ಕಳಿಗೆ ಉದ್ಯೋಗ ಸಿಗಲಿದೆ. ಇದು ಎಐಟಿಯುಸಿ ಸಂಘಟನೆ ಹೋರಾಟದ ಪ್ರತಿಫಲವಾಗಿದೆ ಎಂದರು.

ಡಿ.ಎಚ್. ಕಂಬಳಿ ಮಾತನಾಡಿ, ಕೇಂದ್ರ ಸರ್ಕಾರ ಕಾರ್ಮಿಕ ವಿರೋದಿ ನೀತಿಗಳನ್ನು ಜಾರಿಗೆ ತರುವ ಹುನ್ನಾರ ನಡೆಸುತ್ತಿತ್ತು. ದುಡಿಯುವ ವರ್ಗದ ಹೋರಾಟ ಜೋರಾದಾಗ ತಟಸ್ಧವಾಗಿವೆ. ದೇಶವನ್ನು ಖಾಸಗಿ ಕಂಪನಿಗೆ ನೀಡಿ ದಿವಾಳಿ ಮಾಡಲು ಹೊರಟಿದೆ ಎಂದು ಆರೋಪ‌ ಮಾಡಿದರು.

ಈ ವೇಳೆ ಎಐಟಿಯುಸಿ ರಾಜ್ಯ ಸಮಿತಿಯ ಪದಾಧಿಕಾರಿಗಳಾದ ಆದಿಮೂರ್ತಿ, ಜಿಲ್ಲಾಧ್ಯಕ್ಷ ಭಾಷುಮಿಯಾ, ಶ್ರೀಶೈಲ ರೆಡ್ಡಿ, ಚಂದ್ರಶೇಖರ್ ಕ್ಯಾತನಟ್ಟಿ, ಲಲಿತಮ್ಮ ಹನುಮಂತ ರೆಡ್ಡಿ, ಶಿವಕುಮಾರ, ಎಐಟಿಯುಸಿ ಸಂಘದ ಅಧ್ಯಕ್ಷ ಶಾಂತಪ್ಪ ಆನ್ವರಿ, ಚಂದ್ರಶೇಖರ, ಯಂಕೋಬ ಮಿಯ್ಯಾಪೂರ, ಮೈನುದ್ದಿನ್, ಪದಾಧಿಕಾರಿಗಳು  ಉಪಸ್ಧಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT