ರಾಯಚೂರು: ‘ಪ್ರಪಂಚದಲ್ಲಿ ಚೀನಾ, ಅಮೆರಿಕ ಹಾಗೂ ರಷ್ಯಾ ದೇಶಗಳು ಅಗ್ರಸ್ಥಾನಕ್ಕಾಗಿ ಪೈಪೋಟಿ ಮಾಡುತ್ತಿದ್ದು, ಕೊರೊನಾ ವೈರಾಣು ಮಾನವ ನಿರ್ಮಿತ’ ಎಂದು ಚಲನಚಿತ್ರ ನಟ ಜಗ್ಗೇಶ್ ಹೇಳಿದರು.

ತಮ್ಮ 57ನೇ ಜನ್ಮದಿನದಂದು ಮಂಗಳವಾರ ಮಂತ್ರಾಲಯದಲ್ಲಿ ರಾಯರ ದರ್ಶನ ಪಡೆದು, ಆನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

’ಪ್ರಕೃತಿ ಕೂಡಾ ಆಗಾಗ ರೋಗಗಳ ಮೂಲಕ ಮಾನವನನ್ನು ಎಚ್ಚರಿಸುವ ಕೆಲಸ ಮಾಡುತ್ತದೆ. ಇದು ಬಯಾಲಾಜಿಕಲ್ ಯುದ್ಧವೂ ಎಂದು ಕರೆಯಬಹುದು. ಹಿಂದಿನ ಶತಮಾನದಲ್ಲಿ ಪ್ಲೇಗ್ ಎನ್ನುವ ಮಹಾಮಾರಿ ಇತ್ತು. ಈಗ ಕೊರೊನಾ ಬಂದಿದೆ. ರೋಗದ ಬಗ್ಗೆ ಭಯ ಬೇಕಾಗಿಲ್ಲ. ಜಾಗೃತಿ ವಹಿಸಿದರೆ ಸಾಕು’ ಎಂದರು.

’ಚಿತ್ರನಟ ಪುನೀತ್ ರಾಜಕುಮಾರ್ ಕೂಡಾ ಜನ್ಮದಿನ ಆಚರಿಸಿಕೊಳ್ಳುತ್ತಿದ್ದು, ರಾಯರು ಆರೋಗ್ಯಭಾಗ್ಯ ಕರುಣಿಸಲಿ’ ಎಂದು ಶುಭ ಹಾರೈಸಿದರು. ಪಾಟೀಲ ಪುಟ್ಟಪ್ಪ ಅವರು 102 ವರ್ಷ ನಾಡು, ನುಡಿಗಾಗಿ ಶ್ರಮಿಸಿದ ಮಹಾನ್ ಚೇತನ ಎಂದು ಸಂತಾಪ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.