ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗಸುಗೂರು: ಉಚಿತ ನೇತ್ರ ತಪಾಸಣಾ ಶಿಬಿರ

Last Updated 8 ಅಕ್ಟೋಬರ್ 2022, 11:03 IST
ಅಕ್ಷರ ಗಾತ್ರ

ಲಿಂಗಸುಗೂರು: ‘ಉಚಿತ ನೇತ್ರ ಶಸ್ತ್ರ ಚಿಕಿತ್ಸಾ ಶಿಬಿರವು ತುಂಬಾ ಜನರಿಗೆ ಅನುಕೂಲವಾಗಿದೆ’ ಎಂದು ವಿವೇಕ ದೃಷ್ಠಿ ಸ್ವಾಮಿ ವಿವೇಕಾನಂದ ಸೇವಾಶ್ರಮ ಮುಖ್ಯಸ್ಥ ಸುಬ್ಬಾರಾವ್‍ ಹೇಳಿದರು.

ಶುಕ್ರವಾರ ಈಶ್ವರ ದೇವಸ್ಥಾನದಲ್ಲಿ ಆಯೋಜಿಸಿದ್ದ ಶಿಬಿರ ಉದ್ಘಾಟಿಸಿ ಮಾತನಾಡಿ, ‘ನಾಲ್ಕುವರೆ ದಶಕಗಳಿಂದ ಸೇವಾಶ್ರಮವು ಆರೋಗ್ಯ ತಪಾಸಣೆ ಶಿಬಿರಗಳ ಜೊತೆಗೆ ನೇತ್ರ ಶಸ್ತ್ರ ಚಿಕಿತ್ಸಾ ಶಿಬಿರ ಆಯೋಜಿಸುತ್ತ ಬಂದಿದ್ದೇವೆ. 60ಸಾವಿರ ಜನರಿಗೆ ನೇತ್ರ ಶಸ್ತ್ರ ಚಿಕಿತ್ಸೆ ನೀಡಿದ್ದು ಈ ಪೈಕಿ 18ಸಾವಿರ ಶಸ್ತ್ರ ಚಿಕಿತ್ಸೆ ಲಿಂಗಸುಗೂರು ತಾಲ್ಲೂಕಲ್ಲಿ ನೆರವೇರಿಸಿದ್ದೇವೆ’ ಎಂದು ಹೇಳಿದರು.

ದಿವ್ಯದೃಷ್ಠಿ ಪೌಂಡೇಷನ್‍ ಅಧ್ಯಕ್ಷ ಡಾ.ಶರಣಗೌಡ ಪಾಟೀಲ, ಸಾರ್ವಜನಿಕ ಆಸ್ಪತ್ರೆ ಮುಖ್ಯ ವೈದ್ಯ ಡಾ.ರುದ್ರಗೌಡ ಪಾಟೀಲ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಅಮರೇಶ ಪಾಟೀಲ, ಡಾ.ಗುರುರಾಜ ದೇಶಪಾಂಡೆ, ಲಯನ್ಸ್‌ ಕ್ಲಬ್‍ ಅಧ್ಯಕ್ಷ ಶರಣಬಸವ ಮೇಟಿ ಮಾತನಾಡಿ, ‘ತಾಲ್ಲೂಕಿನಲ್ಲಿ ದಿವ್ಯದೃಷ್ಠಿ ಫೌಂಡೇಷನ್‍ ಸಹಯೋಗದಲ್ಲಿ 1982ರಿಂದ ಸಾಕಷ್ಟು ಆರೋಗ್ಯ ತಪಾಸಣೆ ಮತ್ತು ಉಚಿತ ನೇತ್ರ ಶಸ್ತ್ರ ಚಿಕಿತ್ಸಾ ಶಿಬಿರಗಳನ್ನು ಆಯೋಜಿಸುತ್ತ ಬಂದಿದ್ದೇವೆ’ ಎಂದರು.

ಲಯನ್ಸ್ ಕ್ಲಬ್‍, ದಿವ್ಯ ದೃಷ್ಠಿ ಫೌಂಡೇಷನ್‍ ಮುದಗಲ್ಲ, ಸ್ವಾಮಿ ವಿವೇಕಾನಂದ ಸೇವಾಶ್ರಮ, ಜಿಲ್ಲಾ ಅಂಧತ್ವ ನಿವಾರಣಾ ಸಂಘ, ಹಾಗೂ ಆರೋಗ್ಯ ಇಲಾಖೆ ಸಹಯೋಗದಲ್ಲಿ ಶಿಬಿರವನ್ನು ಆಯೋಜಿಸಲಾಗಿತ್ತು.

ಲಯನ್ಸ್‌ ಕ್ಲಬ್‍ ಲಿಂಗಸುಗೂರಿನ ಪದಾಧಿಕಾರಿಗಳಾದ ವಿನಯಕುಮಾರ ಗಣಾಚಾರಿ, ನಾಗರಾಜ ಗಸ್ತಿ ಮಾತನಾಡಿದರು.

ಪದಾಧಿಕಾರಿಗಳಾದ ಮಲ್ಲಿಕಾರ್ಜುನ ಇತ್ಲಿ, ಡಾ.ಯಶೋಧ, ಅರುಣಕುಮಾರ, ಸಿದ್ರಾಮಪ್ಪ ಕಾಡಲೂರು, ಸಂಜೀವಕುಮಾರ, ರಮೇಶ ಕನಕಗಿರಿ, ಸುಧೀರ ಶ್ರೀವಾಸ್ತವ, ಗುರುರಾಜ ಜನಾದ್ರಿ, ಈರಣ್ಣ ಯಡಗಿಹಾಳ, ಶರಣಬಸವ ವಾರದ, ಲಕ್ಷ್ಮಿಪತಿ ಗುಂತಗೋಳ, ಕೆ.ನಾಗಭೂಷಣ, ಡಾ. ಚಂದ್ರಶೇಖರ ನಾಗಲೀಕರ, ಡಾ.ಸುಭಾಶ್ಚಂದ್ರ ಪಲ್ಲೇದ, ಶ್ರೀಧರ ಹಿರೇಮಠ, ಯಮನೂರು ತುಪ್ಪದ, ಶರಣಬಸವರಾಜ ನಾಡಗೌಡ್ರ, ಜಗದೀಶ ಹಿರೇಮಠ, ವಿರೇಶ ಜಗವತಿಮಠ, ಮುರಳಿಧರ ರಾಯಭಾಗಿ, ರಣಜಿತ್‍ಸಿಂಗ್‍, ಬಿ.ಬಸವರಾಜ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT