ಲಿಂಗಸುಗೂರು (ರಾಯಚೂರು ಜಿಲ್ಲೆ): ತಾಲ್ಲೂಕಿನ ಯಳಗುಂದಿ ಗ್ರಾಮದ ಬಳಿಯ ಕರಕಲಗಡ್ಡಿಯಲ್ಲಿ 11 ವರ್ಷದ ಬಾಲಕಿ ಅನಿತಾ ಜ್ವರದಿಂದ ಬಳಲುತ್ತಿದ್ದು, ಉಕ್ಕಿ ಹರಿಯುತ್ತಿರುವ ಕೃಷ್ಣಾ ನದಿಯನ್ನು ದಾಟಲಾಗದೆ ಬಾಲಕಿಯ ಕುಟುಂಬಸ್ಥರು ಔಷಧಕ್ಕಾಗಿ ಪರದಾಡುತ್ತಿದ್ದಾರೆ.

ಬಸವಸಾಗರ ಜಲಾಶಯದಿಂದ ಸೋಮವಾರ 1.06 ಲಕ್ಷ ಕ್ಯೂಸೆಕ್ ನೀರನ್ನು ಕೃಷ್ಣಾ ನದಿಗೆ ಹರಿಸಲಾಗುತ್ತಿದೆ. ಇದರಿಂದಾಗಿ ಬಾಲಕಿಯ ಕುಟುಂಬದವರಿಗೆ ತೆಪ್ಪದಲ್ಲಿ ನದಿ ದಾಟಲು ಸಾಧ್ಯವಾಗುತ್ತಿಲ್ಲ. ಬಾಲಕಿಗೆ ಔಷಧ ವ್ಯವಸ್ಥೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಉಪವಿಭಾಗಾಧಿಕಾರಿ ಬಸವಣಪ್ಪ ಕಲಶೆಟ್ಟಿ ಭರವಸೆ ನೀಡಿದ್ದಾರೆ.

ಕರಕಲಗಡ್ಡಿಯಲ್ಲಿ ಏಳು ಜನ ಉಳಿದುಕೊಂಡಿದ್ದಾರೆ. 25 ದಿನಗಳ ಹಿಂದೆ ಲಿಂಗಸುಗೂರಿಗೆ ಬಂದು ದಿನಸಿ ಸಾಮಗ್ರಿಗಳನ್ನು ಖರೀದಿಸಿಕೊಂಡು ಹೋಗಿದ್ದಾರೆ. ಈಗ ದಿನಸಿಯೂ ಖಾಲಿಯಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.