ಭಾನುವಾರ, 14 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುದಗಲ್: ನಿವೃತ್ತ ಯೋಧನಿಗೆ ಸ್ವಾಗತ

Published 26 ಫೆಬ್ರುವರಿ 2024, 14:13 IST
Last Updated 26 ಫೆಬ್ರುವರಿ 2024, 14:13 IST
ಅಕ್ಷರ ಗಾತ್ರ

ಮುದಗಲ್: ಸೇವಾ ನಿವೃತ್ತಿ ಹೊಂದಿ ಗ್ರಾಮಕ್ಕೆ ಮರಳಿದ ವೀರ ಯೋಧ ರಂಜಾನಸಾಬ್‌ ಬಡಿಗೇರ ಅವರನ್ನ ಅಡಿವಿಭಾವಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಸ್ವಾಗತಿಸಿ ಸನ್ಮಾನಿಸಿದರು.

ಇವರು 18 ವರ್ಷ ಭಾರತೀಯ ಸೇನೆಯಲ್ಲಿ ವಿವಿಧ ಸ್ಥಳಗಳಲ್ಲಿ ಕೆಲಸ ಮಾಡಿದ್ದಾರೆ.

ಅಡವಿಭಾವಿ ಗ್ರಾಮಸ್ಥರು ತೆರೆದ ವಾಹನದಲ್ಲಿ ಮುದಗಲ್ ಅಂಜನೇಯ ದೇವಸ್ಥಾನದಿಂದ ವಿವಿಧ ಬೀದಿಗಳಲ್ಲಿ ಮೆರವಣಿಗೆ ಮಾಡಿದರು.

ನಂತರ ರಂಜಾನಸಾಬ್ ಮಾತನಾಡಿ,‘18 ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿದ್ದೇನೆ. ದೇಹ ಮಾತ್ರ ಕೆಲಸದಿಂದ ನಿವೃತ್ತಿ ಪಡೆದಿದೆ. ಆದರೆ ರಕ್ತದ ಕಣ ಕಣದಲ್ಲೂ ದೇಶಭಕ್ತಿ ತುಂಬಿದೆ. ಮುದಗಲ್, ಅಡವಿಭಾವಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ನನ್ನನ್ನು ಸ್ವಾಗತಿಸಿರುವುದನ್ನು ನೋಡಿ ತುಂಬಾ ಸಂತಸವಾಗುತ್ತಿದೆ. ಯುವಕರು ಸೇನೆ ಸೇರಲು ಮುಂದೆ ಬರಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT