ಜಾಲಹಳ್ಳಿ: ಪಟ್ಟಣದಲ್ಲಿ ಹಾದು ಹೋಗಿರುವ ತಿಂಥಣಿ ಬ್ರಿಜ್-ಕಲ್ಮಲಾ ರಾಜ್ಯ ಹೆದ್ದಾರಿಯಲ್ಲಿ ಇರುವ ಅಂಬೇಡ್ಕರ್ ವೃತ್ತದ ಬಳಿ ನಿತ್ಯ ಸಂಜೆಯಾದರೆ ಸಾಕು ಬಿಡಾಡಿ ದನಗಳು ಠಿಕಾಣಿ ಹಾಕುವುದರಿಂದ ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿದೆ.

ಈ ಸಮಸ್ಯೆ ಕಳೆದ 6 ತಿಂಗಳಿಂದ ನಿರಂತರವಾಗಿ ಇದ್ದು, ಈ ಬಗ್ಗೆ ದನಗಳ ಮಾಲೀಕರಿಗೆ ಹಾಗೂ ಪಟ್ಟಣದಲ್ಲಿ ಆಟೋದಲ್ಲಿ ಹಿಡಿದು ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ದನಗಳನ್ನು ಬೀದಿಗೆ ಬಿಡದೇ ಮನೆಯಲ್ಲಿ ಕಟ್ಟಿಹಾಕಿಕೊಳ್ಳಬೇಕೆಂದು ಜಾಗೃತಿ ಮೂಡಿಸಿದರು ಪ್ರಯೋಜವಾಗುತ್ತಿಲ್ಲ.

ವಾಹನ ಚಾಲಕರು ದನಗಳನ್ನು ರಕ್ಷಿಸಲು ಹೋಗಿ ಮನುಷ್ಯರನ್ನು ಬಲಿ ಪಡೆದುಕೊಂಡಿರುವ ಉದಾರಣೆಗಳು ಇವೆ. ಸಣ್ಣ ಪುಟ್ಟ ಗಾಯಗಳು ಸಂಭವಿಸಿದರು ಸಾವಿರಾರೂ ಹಣ ದಂಡ ಕಟ್ಟಿರುವ ಘಟನೆ ಕೂಡ ಜರುಗಿವೆ.
ದನಗಳನ್ನು ಸಾಕಿರುವ ಮಾಲೀಕರಿಗೆ ಕನಿಷ್ಟ ಜ್ಞಾನವು ಇಲ್ಲವಾಗಿದೆ. ತಮ್ಮ ಜಾನುವಾರುಗಳು ರಸ್ತೆಗೆ ಬಿಡದೇ ಕಟ್ಟಿಕೊಳ್ಳಬೇಕು. ಒಂದು ವೇಳೆ ಬೀದಿಯಲ್ಲಿ ದನಗಳಿಂದ ಜನತೆ ತೊಂದರೆ ಉಂಟಾದರೆ ಯಾರು ಹೊಣೆ ಎನ್ನುವುದು ಎಂದು ಸಾರ್ವಜನಿಕ ಪ್ರಶ್ನಿದ್ದಾರೆ.

ಇನ್ನೂ ಮುಂದೆ ರಸ್ತೆಯ ಮೇಲೆ ಬಿಡಾಡಿ ದನಗಳಿಂದ ಯಾವುದೇ ಅಪಘಾತ ಉಂಟಾದರೆ ಬೀದಿಗೆ ಬಿಟ್ಟಿರುವ ಮಾಲೀಕನ ಮೇಲೆ ಪೊಲೀಸ್ ಪ್ರಕರಣ ದಾಖಲಿಸಿಕೊಳ್ಳಬೇಕೆಂದು ಸ್ಥಳೀಯ ನಾಗರೀಕರು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.