ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುಗುಂಟಾ: ಕೃಷಿ ಚಟುವಟಿಕೆ ಚುರುಕು

Last Updated 3 ಜುಲೈ 2021, 11:12 IST
ಅಕ್ಷರ ಗಾತ್ರ

ಹಟ್ಟಿ ಚಿನ್ನದಗಣಿ: ಗುರುಗುಂಟಾ ಹೋಬಳಿ ಸುತ್ತ ಮುತ್ತ ಸಾಧಾರಣ ಮಳೆಯಾಗಿದ್ದು ರೈತರು ಬಿತ್ತನೆ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.

ಕಳೆದ ಬಾರಿ ಮುಂಗಾರು ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಆಗಿರಲಿಲ್ಲ. ಈ ಬಾರಿ ಸಾಧಾರಣ ಮಳೆಯಾಗಿದ್ದು ನೆಲ ಹಸಿಯಾಗಿದೆ. ರೈತರು ಬಿತ್ತನೆ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಜೋಳ, ತೊಗರಿ, ಹೆಸರು, ಹುರಳಿ, ಎಳ್ಳು, ಶೇಂಗಾ, ಸೂರ್ಯಕಾಂತಿ ಇತರೆ ಬೀಜಗಳನ್ನು ಬಿತ್ತನೆಗೆ ರೈತರು ಮುಂದಾಗಿದ್ದಾರೆ.

ಗುರುಗುಂಟಾ ಹೋಬಳಿಯ ಕೃಷಿ ಇಲಾಖೆ ವ್ಯಾಪ್ತಿಯಲ್ಲಿ ಈ ಭಾರಿ ತೊಗರಿ ಬಿತ್ತನೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. 1800 ಹೆಕ್ಟೇರ್‌ ಭತ್ತ, 7400 ಹೆಕ್ಟೇರ್‌ ಸಜ್ಜೆ. ತೊಗರಿ 2600 ಹೆಕ್ಟೇರ್‌, ಹೆಸರು 150 ಹೆಕ್ಟೇರ್‌. ಸೂರ್ಯಕಾಂತಿ 2027 ಹೆಕ್ಟೇರ್‌, ಎಳ್ಳು 30 ಹೆಕ್ಟೇರ್‌, ಗುರೆಳ್ಳು 20 ಹೆಕ್ಟೇರ್‌. ಹತ್ತಿ 1290ಹೆಕ್ಟೇರ್‌ ಸೇರಿದಂತೆ ಒಟ್ಟು 35 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ.

‘ಶೇ 50ರಷ್ಟು ಮಾತ್ರ ರೈತರು ಬಿತ್ತನೆ ಮಾಡಿದ್ದಾರೆ. ಮಳೆ ಅಭಾವಿದಿಂದ ಬಿತ್ತನೆ ಕಾರ್ಯ ತ್ವರಿತ ಗತಿಯಲ್ಲಿ ನಡೆಯುತ್ತಿಲ್ಲ. ರೈತರು ಬೀಜಗಳನ್ನು ಖರೀದಿಸಿದ್ದಾರೆ. ಬಿತ್ತನೆ ಮಾಡುತ್ತಿಲ್ಲ. ಮಳೆರಾಯನ ಮುನಿಸಿ ರೈತರಿಗೆ ಸಂಕಷ್ಟಕ್ಕೆ ತಂದಿದೆ‘ ಎನ್ನುತ್ತಾರೆ ರೈತ ಸಮೂಹ.

‘ಬಿತ್ತನೆ ಮಾಡುವಷ್ಟು ಮಳೆಯಾಗಿಲ್ಲ. ಇನ್ನೂ 2ರಿಂದ 3 ಮಳೆ ಬಂದರೆ ರೈತರಿಗೆ ಅನುಕೂಲವಾಗಲಿದೆ. ರೈತರಿಗೆ ಬೇಕಾದ ಗೊಬ್ಬರ ಬೀಜಗಳು ಒದಗಿಸಲಾಗಿದೆ‘ ಎನ್ನುತ್ತಾರೆ ಹೋಬಳಿಯ ಕೃಷಿ ಅಧಿಕಾರಿಶಿವರಾಜ ಗುರುಗುಂಟಾ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT