ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂತ್ರಾಲಯ: 26 ದಿನಗಳಲ್ಲಿ ₹ 2.95 ಕೋಟಿ ದೇಣಿಗೆ ಸಂಗ್ರಹ

ಶ್ರೀ ಮೂಲ ರಾಮದೇವರ ಪೂಜೆಗೆ ಬೆಳ್ಳಿ ಸಮಯ ದೇಣಿಗೆ
Published 27 ಡಿಸೆಂಬರ್ 2023, 14:49 IST
Last Updated 27 ಡಿಸೆಂಬರ್ 2023, 14:49 IST
ಅಕ್ಷರ ಗಾತ್ರ

ರಾಯಚೂರು: ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಡಿಸೆಂಬರ್‌ ತಿಂಗಳ 26 ದಿನಗಳ ಅವಧಿಯಲ್ಲಿ ಸಂಗ್ರಹವಾದ ದೇಣಿಗೆ ಎಣಿಕೆ ಮಾಡಲಾಗಿದ್ದು, ₹2.95 ಕೋಟಿ ಹಣ ಹಾಗೂ ಚಿನ್ನಾಭರಣ ಸಂಗ್ರಹವಾಗಿದೆ.

₹2,89,63,504 ನಗದು, ₹6,10,500 ಮೊತ್ತದ ನಾಣ್ಯಗಳು ಸೇರಿ ಒಟ್ಟು ₹ 2,95,74,004 ಹಾಗೂ 71 ಗ್ರಾಂ ಚಿನ್ನ, 439 ಗ್ರಾಂ ಬೆಳ್ಳಿ ದೇಣಿಗೆ ರೂಪದಲ್ಲಿ ಬಂದಿದೆ. ಭಕ್ತರಾದ ಚಂದ್ರಿಕಾ ಗೋಕುಲ್ ದಂಪತಿ ಮೂಲ ರಾಮ ದೇವರ ಪೂಜೆಗೆ ಬೆಳ್ಳಿಯ ಎರಡು ದೊಡ್ಡ ಸಮಯಗಳನ್ನು (ದೀಪಮಾಲೆಯ ಕಂಬ) ದೇಣಿಗೆ ನೀಡಿದ್ದಾರೆ. ಮಂತ್ರಾಲಯದ ಸುಬುಧೇಂದ್ರ ತೀರ್ಥ ಸ್ವಾಮೀಜಿ ಅವರು ಎರಡು ಸಮಯ ಸ್ವೀಕರಿಸಿ ದೀಪ ಬೆಳಗಿಸಿ ಪೂಜೆ ಸಲ್ಲಿಸಿದರು.

ಮಂತ್ರಾಲಯದಲ್ಲಿ ಮಠದ ಸಿಬ್ಬಂದಿ ಹುಂಡಿಯಲ್ಲಿ ಸಂಗ್ರಹವಾದ ಕಾಣಿಕೆ ಹಣವನ್ನು ಎಣಿಕೆ ಮಾಡಿದರು
ಮಂತ್ರಾಲಯದಲ್ಲಿ ಮಠದ ಸಿಬ್ಬಂದಿ ಹುಂಡಿಯಲ್ಲಿ ಸಂಗ್ರಹವಾದ ಕಾಣಿಕೆ ಹಣವನ್ನು ಎಣಿಕೆ ಮಾಡಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT