ರಾಯಚೂರು: ಕರ್ಕಶ ಶಬ್ದ ಮಾಡಿದ ವಾಹನಗಳ ಸೈಲನ್ಸರ್ಗಳ ನಾಶ

ರಾಯಚೂರು: ಜಿಲ್ಲೆಯಾದ್ಯಂತ ಕರ್ಕಶ ಶಬ್ದ ಮತ್ತು ಭಾರಿ ಹೊಗೆಬಿಡುವ ವಾಹನಗಳ ವಿರುದ್ಧ ಒಂದು ವಾರ ವಿಶೇಷ ಕಾರ್ಯಾಚರಣೆ ನಡೆಸಿದ್ದ ಪೊಲೀಸರು, ವಶಕ್ಕೆ ಪಡೆದಿದ್ದ ವಾಹನಗಳ ಹೊಗೆ ಕೊಳವೆಗಳನ್ನು ಜಿಲ್ಲಾ ಪೊಲೀಸ್ ಮೈದಾನದಲ್ಲಿ ಶುಕ್ರವಾರ ನಾಶಪಡಿಸಲಾಯಿತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ. ಸಮ್ಮುಖ ಹೊಗೆ ಕೊಳವೆಗಳ ಮೇಲೆ ರೊಲರ್ ಹರಿಸಿ ಕೊಳವೆಗಳನ್ನು ಪುಡಿಗೊಳಿಸಲಾಯಿತು. ಕಳೆದ ಜೂನ್ 2 ರಿಂದ ಒಂದು ವಾರ ಕಾರ್ಯಾಚರಣೆ ನಡೆಸಿ, ಭಾರತೀಯ ಮೋಟಾರು ವಾಹನ (ಐಎಂವಿ) ಕಾಯ್ದೆಯಡಿ ಒಟ್ಟು 197 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಬೈಕ್ ಮಾಲೀಕರಿಗೆ ₹1,500 ಮತ್ತು ಲಘು ವಾಹನಗಳಿಗೆ ₹3 ಸಾವಿರ ದಂಡ ವಿಧಿಸಲಾಗಿದ್ದು, ಒಟ್ಟು ₹2,95,500 ದಂಡ ಸಂಗ್ರಹವಾಗಿದೆ.
’ಶಬ್ದ ಮತ್ತು ವಾಯು ಮಾಲಿನ್ಯ ಉಂಟು ಮಾಡುತ್ತಿದ್ದ ದೋಷಪೂರಿತ ಸೈಲನ್ಸರ್ಗಳನ್ನು ನಿಯಮಾನುಸಾರ ನಾಶಗೊಳಿಸಲಾಗಿದೆ‘ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ. ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.