ರಾಯಚೂರು: ನಗರದ ಸಂಚಾರ ಪೊಲೀಸ್ ಠಾಣೆಯ ಪೊಲೀಸರು ದಾಖಲೆಗಳನ್ನು ಹೊಂದಿರದ ಆಟೊರಿಕ್ಷಾಗಳ ಪರಿಶೀಲನೆ ಮುಂದುವರಿಸಿದ್ದಾರೆ. ಎರಡನೇ ದಿನ ಬುಧವಾರ 50 ಆಟೊಗಳನ್ನು ಪತ್ತೆ ಮಾಡಿ ಚಾಲಕರು ಹಾಗೂ ಮಾಲೀಕರಿಗೆ ₹ 50 ಸಾವಿರ ದಂಡ ವಿಧಿಸಿದ್ದಾರೆ.

ಹಿಂದೆ ಪೊಲೀಸರು ದಾಖಲೆಗಳನ್ನು ಪರಿಶೀಲಿಸದ ಕಾರಣ ಆಟೊಚಾಲಕರು ಹಾಗೂ ಮಾಲೀಕರು ಸಹ ಗಂಭೀರವಾಗಿರಲಿಲ್ಲ. ಸಂಚಾರ ಠಾಣೇ ಪೊಲೀಸರು ನಡೆಸುತ್ತಿರುವ ಕಾರ್ಯಾಚರಣೆಯಿಂದಾಗಿ ಬಿಸಿ ತಟ್ಟಿದೆ.

ಸಂಚಾರ ಠಾಣೆಯ ಪೊಲೀಸರು ನಗರದ ಹೊರ ವಲಯದಲ್ಲೂ ಕಾರ್ಯಾಚರಣೆ ನಡೆಸುತ್ತಿರುವುದರಿಂದ ಲೈಸನ್ಸ್ ಹಾಗೂ ಪರ್ಮಿಟ್ ಇಲ್ಲದೇ ಆಟೊ ಓಡಿಸುತ್ತಿರುವವರು ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬಂದಿದ್ದಾರೆ.

‘ರಾಯಚೂರು ನಗರದಲ್ಲಿ ಎರಡು ದಿನಗಳಲ್ಲಿ ಸರಿಯಾದ ದಾಖಲೆಗಳನ್ನು ಹೊಂದಿರದ 100 ಆಟೊಗಳನ್ನು ಪತ್ತೆ ಮಾಡಲಾಗಿದೆ. ಕಾರ್ಯಾಚರಣೆ ಒಂದು ತಿಂಗಳವರೆಗೂ ಮುಂದುವರಿಯಲಿದೆ‘ ಎಂದು ಸಂಚಾರ ಪೊಲೀಸ್ ಠಾಣೆಯ ಪಿಎಸ್ಐ ಸಣ್ಣ ಈರೇಶ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.