ರಾಯಚೂರು: ‘ಉದ್ಯಮಗಳ ಬೆಳವಣಿಗೆge ಹಾಗೂ ನವೋದ್ಯಮಿಗಳಿಗೆ ಸರ್ಕಾರ ಹಲವು ರೀತಿಯಲ್ಲಿ ಪ್ರೋತ್ಸಾಹ ನೀಡುತ್ತಿದೆ. ಉದ್ಯಮಿಗಳು ಅದರ ಲಾಭ ಪಡೆದುಕೊಳ್ಳಬೇಕು’ ಎಂದು ಬೆಂಗಳೂರಿನ ಫಿವೋ ಉಪ ನಿರ್ದೇಶಕ ಧನೀಶಾ ಮೀನು ಹೇಳಿದರು.

ಜಿಲ್ಲೆಯ ಸಣ್ಣ, ಸೂಕ್ಷ್ಮ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಉತ್ತೇಜನ ನೀಡುವ ಹಾಗೂ ಹೊಸ ಉದ್ಯಮಶೀಲರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ರಾಯಚೂರಿನ ಜಿಲ್ಲಾ ಕೈಗಾರಿಕಾ ಕೇಂದ್ರ ಮತ್ತು ಬೆಂಗಳೂರಿನ ಭಾರತೀಯ ರಫ್ತು ಉತ್ತೇಜನ ಸಂಸ್ಥೆಯ ಆಶ್ರಯದಲ್ಲಿ ಇಲ್ಲಿಯ ಜಿಲ್ಲಾ ಕೈಗಾರಿಕಾ ಕೇಂದ್ರದಲ್ಲಿ ಜಿಲ್ಲೆಯ ಕೈಗಾರಿಕೋದ್ಯಮಿಗಳಿಗೆ ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಸಣ್ಣ, ಸೂಕ್ಷ್ಮ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಉತ್ತೇಜನ ನೀಡುವ ಹಾಗೂ ಹೊಸ ಉದ್ಯಮಶೀಲರನ್ನು ಪ್ರೋತ್ಸಾಹಿಸುವ ವಿಷಯಗಳ ಮತ್ತು ರಫ್ತು ವ್ಯಾಪಾರದ ಟ್ರೇಡ್ ಪಾಲಿಸಿ-2023ರ ಕುರಿತು ಸವಿಸ್ತಾರವಾದ ಮಾಹಿತಿ ಒದಗಿಸಿದರು.

ಬೆಂಗಳೂರಿನ ಕಸ್ಟಮ್ಸ್ ಹೌಸ್ ಏಜೆಂಟ್ಸ್ ಅಸೋಸಿಯೇಶನ್ ಕಾರ್ಯದರ್ಶಿ ಗಿರೀಶ ನಾರಾಯಣ ರಫ್ತು ವ್ಯಾಪಾರದ ಕುರಿತು ಅಗತ್ಯ ದಾಖಲಾತಿಗಳನ್ನು ಹೇಗೆ ತಯಾರಿಸುವುದು ಹಾಗೂ ಅಂತರರಾಷ್ಟ್ರೀಯ ವ್ಯಾಪಾರ, ತೆರಿಗೆ ಕುರಿತು ಮಾಹಿತಿ ನೀಡಿದರು.

ಹೈದರಾಬಾದ್ನ ಇಸಿಜಿಸಿಯ ಸಹಾಯಕ ವ್ಯವಸ್ಥಾಪಕ ಭರತ್ ಗುಂಟೂರು ಮಾತನಾಡಿ, ‘ಇನ್ವಾಯಿಸ್, ಪ್ಯಾಕಿಂಗ್ ಲಿಸ್ಟ್, ಕಸ್ಟಮ್ಸ್ ಕ್ಲೀಯರೆನ್ಸ್, ರಫ್ತು ವಿಮೆ ಮೂಲಕ ಸಿಗುವ ರಕ್ಷಣೆಗಳ ಮಾಹಿತಿ ಅರಿತುಕೊಳ್ಳ ಬೇಕು. ಲಾಜಿಸ್ಟಿಕ್ಸ್ ಮತ್ತು ಶಿಪ್ಪಿಂಗ್ ಸರಕುಗಳನ್ನು ಸುರಕ್ಷಿತವಾಗಿ ವಿದೇಶಕ್ಕೆ ಕಳುಹಿಸುವ ವಿಧಾನಗಳು ಹಾಗೂ ಡಿಜಿಟಲ್ ಮಾರ್ಕೇಟಿಂಗ್, ಆನ್ಲೈನ್ ಮೂಲಕ ವಿದೇಶಿ ಗ್ರಾಹಕರನ್ನು ತಲುಪುವ ಕಲೆ ಕರಗತ ಮಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಬೆಂಗಳೂರಿನ ಎಫ್.ಕೆ.ಸಿ.ಸಿ.ಐ ನಿರ್ದೇಶಕ ತ್ರಿವಿಕ್ರಮ ಜೋಶಿ ಮಾತನಾಡಿದರು.

ಜಿಲ್ಲಾ ಕೈಗಾರಿಕಾ ಕೇಂದ್ರದ ಉಪ ನಿರ್ದೇಶಕ ರಾಜಕುಮಾರ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು.

ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಬಿ.ಸತೀಶಕುಮಾರ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಅಕ್ಕಿ ಗಿರಣಿ ಮಾಲೀಕರ ಸಂಘದ ಅಧ್ಯಕ್ಷೆ ಸಾವಿತ್ರಿ ಪುರುಷೋತ್ತಮ, ಕಾಟನ್ ಮಿಲ್ಲರ್ಸ್ ಸಂಘದ ಅಧ್ಯಕ್ಷ ವಿ.ಲಕ್ಷ್ಮೀರೆಡ್ಡಿ, ಕಾರ್ಯದರ್ಶಿ ಜಂಬಣ್ಣ ಯಕ್ಲಾಸಪುರ ಉಪಸ್ಥಿತರಿದ್ದರು. ಲಕ್ಷ್ಮೀಕಾಂತ ಕುಲಕರ್ಣಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.