ಹಟ್ಟಿ ಚಿನ್ನದ ಗಣಿ: ‘ಯುವಕರು ಮಹರ್ಷಿ ವಾಲ್ಮೀಕಿ ಅವರ ಆದರ್ಶಗಳನ್ನು ಪಾಲನೆ ಮಾಡ ಬೇಕು’ ಎಂದು ಗಣಿ ಕಂಪನಿಯ ಉಪಪ್ರಧಾನ ವ್ಯವಸ್ಧಾಪಕ (ಮಾನವ ಸಂಪನ್ಮೂಲ) ಕೃಷ್ಣ ಶಾವಂತಗೇರಿ ಹೇಳಿದರು.

ಹಟ್ಟಿ ಪಟ್ಟಣದ ಕ್ಯಾಂಪ್ ಪ್ರದೇಶದಲ್ಲಿರುವ ಎಸ್.ಸಿ, ಎಸ್.ಟಿ ನೌಕರರ ಸಂಘದ ಕಚೇರಿಯಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

‘ಮಹರ್ಷಿ ವಾಲ್ಮೀಕಿ ಅವರು ರಚಿಸಿದ ಶ್ಲೋಕಗಳನ್ನು ಪಠಣ ಮಾಡುವುದರಿಂದ ಮಕ್ಕಳಲ್ಲಿ ಜ್ಞಾನ ವೃದ್ದಿಸುತ್ತದೆ. ಪಾಲಕರು ತಮ್ಮ ಮಕ್ಕಳಿಗೆ ಕಂಠ ಪಾಠ ಮಾಡಿಸಬೇಕು’ ಎಂದರು.

ಸಾಧಕರಾದ ಶ್ರೀದೇವಿ ನಾಯಕ ಹಾಗೂ ರೇಖಾ ನಾಯಕ ಅವರನ್ನು ಸನ್ಮಾನಿಸಲಾಯಿತು.

ಗಣಿ ಕಂಪನಿ ಅಧಿಕಾರಿಗಳಾದ ಸುರೇಶ, ರಮೇಶ, ವೈದ್ಯರಾದ ಡಾ.ಸಂತೋಷ ಕುಮಾರ, ಎಸ್.ಸಿ, ಎಸ್.ಟಿ ನೌಕರರ ಸಂಘದ ಅಧ್ಯಕ್ಷ ಜಮದಗ್ನಿ ಕೊಠಾ, ಉಪಾಧ್ಯಕ್ಷ ಯಂಕೋಬ ದಿನಸಂದ್ರ, ಆನಂದ ಕೋಠಾ, ನಿಂಗರಾಜ ದೊಡ್ಡಮನಿ, ಅಮರಗುಂಡ ಗೌಡೂರು, ನಾಗಪ್ಪ ಗೌಡೂರು, ಭರತ್ ನಾಯಕ, ರಮೇಶ ವೀರಾಪುರ, ಗಂಗಾಧರ, ಬಸವರಾಜ ನಾಯಕ ಗಲಗ, ರಮೇಶ ನಾಯಕ ಗಲಗ, ಹನುಮಂತ ಕಮಲದಿನ್ನಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.