ರಾಯಚೂರು: ‘ಜಿಲ್ಲೆಯ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ಸರ್ವಾಂಗೀಣ ಅಭಿವೃದ್ಧಿಯ ಚಿಂತನೆಯೊಂದಿಗೆ ಕುಲಪತಿಯಾಗಿ ಅಧಿಕಾರ ಸ್ವೀಕರಿಸಿದ್ದು, ಈ ವಿಶ್ವವಿದ್ಯಾಲಯವನ್ನು ದೊಡ್ಡಮಟ್ಟದಲ್ಲಿ ಬೆಳೆಸಬೇಕೆಂಬ ಮಹತ್ತರ ಕಾರ್ಯಕ್ಕೆ ಪ್ರತಿಯೊಬ್ಬರೂ ಸಹಕಾರ ನೀಡಬೇಕು’ ಎಂದು ವಿವಿಯ ನೂತನ ಕುಲಪತಿ ಪ್ರೊ.ಶಿವಾನಂದ ಕೆಳಗಿನಮನಿ ಹೇಳಿದರು.

‘ವಿಶ್ವವಿದ್ಯಾಲಯಕ್ಕೆ ಬರುವ ಹೆಚ್ಚಿನ ಪ್ರಮಾಣದ ವಿದ್ಯಾರ್ಥಿಗಳು ಗ್ರಾಮೀಣ ಹಿನ್ನೆಲೆಯ ಮತ್ತು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಸೇರಿದವರಿದ್ದು, ಈ ಪ್ರದೇಶದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವುದು ವಿಶ್ವವಿದ್ಯಾಲಯದ ಗುರಿಯಾಗಿದೆ’ ಎಂದು ಮಂಗಳವಾರ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.

‘ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯ ವಿಷಯ ಮತ್ತು ಸಂವಹನ ಕೌಶಲ ಸುಧಾರಿಸಲು ವಿಶ್ವವಿದ್ಯಾಲಯದಲ್ಲಿ ನಿಯಮಿತವಾಗಿ ವಿವಿಧ ವಿಷಯಗಳ ಕುರಿತು ವಿಚಾರ ಸಂಕಿರಣಗಳು, ಕಾರ್ಯಾಗಾರಗಳು ಮತ್ತು ವಿಶೇಷ ಉಪನ್ಯಾಸಗಳನ್ನು ನಡೆಸಲಾಗುತ್ತದೆ’ ಎಂದರು.

‘ರಾಜ್ಯ ಸರ್ಕಾರ ವಿಶ್ವವಿದ್ಯಾಲಯಕ್ಕೆ 31 ಬೋಧಕ ಹುದ್ದೆಗಳನ್ನು ಮಂಜೂರು ಮಾಡಿದೆ. ಮೌಲ್ಯಮಾಪನ ವ್ಯವಸ್ಥೆಯಲ್ಲಿ ಪಾರದರ್ಶಕ ಮತ್ತು ವಿವಿ ಮೇಲಿನ ಆರ್ಥಿಕ ಹೊರೆ ಕಡಿಮೆ ಮಾಡಲು ಡಿಜಿಟಲ್ ಮೌಲ್ಯಮಾಪನ ಪ್ರಾರಂಭಿಸಿದೆ. ಮೂಲಸೌಕರ್ಯ ಮತ್ತು ಪ್ರಯೋಗಾಲಯ ಅಭಿವೃದ್ಧಿಗಾಗಿ ಸರ್ಕಾರವು ₹15 ಕೋಟಿ ಮಂಜೂರು ಮಾಡಿದೆ. ಆವರಣದಲ್ಲಿರುವ ಮಾನವ ಜೀನೋಮ್ ಕೇಂದ್ರಕ್ಕೆ ಕೆಕೆಆರ್ಡಿಬಿ ನಿಧಿಯಡಿಯಲ್ಲಿ ಸರ್ಕಾರವು ₹47 ಕೋಟಿ ಮಂಜೂರು ಮಾಡಿದೆ. ಮೂಲಸೌಕರ್ಯ ಮತ್ತು ಪ್ರಯೋಗಾಲಯ ಅಭಿವೃದ್ಧಿಗಾಗಿ ಕೆಕೆಆರ್ಡಿಬಿ ನಿಧಿಯಡಿಯಲ್ಲಿ ಸರ್ಕಾರ ₹34 ಕೋಟಿ ಮಂಜೂರು ಮಾಡಿದೆ’ ಎಂದು ತಿಳಿಸಿದರು.

‘ಪ್ರಸ್ತುತ ವಿಶ್ವವಿದ್ಯಾಲಯ ಒಂದೇ ಕಟ್ಟಡದಲ್ಲಿ ಎರಡು ಅವಧಿಗಳಲ್ಲಿ 20 ಸ್ನಾತಕೋತ್ತರ ಕೋರ್ಸ್ಗಳನ್ನು ನಡೆಸುತ್ತಿದೆ. ಆದ್ದರಿಂದ, ವಿಶ್ವವಿದ್ಯಾಲಯದ ದಕ್ಷ ಕಾರ್ಯನಿರ್ವಹಣೆಗಾಗಿ ಕನ್ನಡ, ಇಂಗ್ಲಿಷ್ ಮತ್ತು ಉರ್ದು ವಿಭಾಗಗಳಿಗೆ ಕಲಾ ವಿಭಾಗದ ಕಟ್ಟಡ ನಿರ್ಮಾಣವಾಗಬೇಕು. ಇತಿಹಾಸ, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ, ಅರ್ಥಶಾಸ್ತ್ರ, ಸಮಾಜ ಕಾರ್ಯ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗಗಳಿಗೆ ಸಮಾಜ ವಿಜ್ಞಾನ ವಿಭಾಗದ ಕಟ್ಟಡ ನಿರ್ಮಾಣವಾಗಬೇಕು. ಸಂವಹನ, ಮಹಿಳಾ ಅಧ್ಯಯನ, ಗ್ರಂಥಾಲಯ ಮಾಹಿತಿ ವಿಜ್ಞಾನ, ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ, ಕಂಪ್ಯೂಟರ್ ವಿಜ್ಞಾನ, ಎಲೆಕ್ಟ್ರಾನಿಕ್ಸ್ ಮತ್ತು ವಾದ್ಯಸಂಗೀತ ಇತ್ಯಾದಿ ವಿಭಾಗಗಳಿಗೆ ಭೌತ ವಿಜ್ಞಾನ ವಿಭಾಗದ ಕಟ್ಟಡ ನಿರ್ಮಾಣವಾಗಬೇಕು’ ಎಂದರು.

‘ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ, ಸೂಕ್ಷ್ಮ ಜೀವವಿಜ್ಞಾನ ವಿಭಾಗಕ್ಕೆ ಜೀವ ವಿಜ್ಞಾನ ವಿಭಾಗ ಕಟ್ಟಡ ನಿರ್ಮಾಣವಾಗಬೇಕು. ಜೊತೆಗೆ ಫ್ಯಾಕಲ್ಟಿ ಆಫ್ ಕಾಮರ್ಸ್ ಕಟ್ಟಡ, ಪರೀಕ್ಷಾ ವಿಭಾಗದ ಕಟ್ಟಡ, ಕ್ಯಾಂಟೀನ್ ಕಟ್ಟಡ, ಅತಿಥಿ ಗೃಹ ಕಟ್ಟಡಗಳು ನಿರ್ಮಾಣವಾಗಬೇಕಿದೆ. ಅಸ್ತಿತ್ವದಲ್ಲಿರುವ ಗ್ರಂಥಾಲಯ ಕಟ್ಟಡದ ವಿಸ್ತರಣೆಯಾಗಬೇಕು. ಇಡೀ ಕ್ಯಾಂಪಸ್ಗೆ ಟಾರ್ ರಸ್ತೆಗಳು ನಿರ್ಮಾಣವಾಗಬೇಕು. 400 ಮೀಟರ್ ಟ್ರ್ಯಾಕ್ ಹೊಂದಿರುವ ಆಟದ ಮೈದಾನಗಳು ನಿರ್ಮಾಣವಾಗಬೇಕಿದೆ. ಇಡೀ ವಿಶ್ವವಿದ್ಯಾಲಯ ಕ್ಯಾಂಪಸ್ಗೆ ಹೈ ಸ್ಪೀಡ್ ಇಂಟರ್ನೆಟ್ ಸಂಪರ್ಕ ಬೇಕಿರುತ್ತದೆ. ಎಲ್ಲಾ ವಿಜ್ಞಾನ ವಿಭಾಗಗಳಿಗೆ ಸಂಶೋಧನಾ ಉಪಕರಣಗಳು ಬೇಕಿದೆ. ಹಂತಹಂತವಾಗಿ ಈ ಎಲ್ಲಾ ಸೌಕರ್ಯ ಕಲ್ಪಿಸಲು ಸರ್ಕಾರಕ್ಕೆ ಪತ್ರ ಬರೆದು ಕ್ರಮವಹಿಸಲಾಗುತ್ತದೆ’ ಎಂದು ಹೇಳಿದರು.

‘ವಿಶ್ವವಿದ್ಯಾಲಯ 250 ಎಕರೆ ಪ್ರದೇಶದಲ್ಲಿದೆ. 20 ಸರ್ಕಾರಿ ಕಾಲೇಜುಗಳು, 6 ಅನುದಾನಿತ ಕಾಲೇಜುಗಳು, 8 ಬಿ.ಇಡಿ ಕಾಲೇಜುಗಳು, 2 ಬಿಪಿಇಡಿ ಮತ್ತು 148 ಖಾಸಗಿ ಕಾಲೇಜುಗಳು ಸೇರಿ ಒಟ್ಟು 184 ಸಂಯೋಜಿತ ಕಾಲೇಜುಗಳು ವ್ಯಾಪ್ತಿಗೆ ಬರುತ್ತವೆ. ಮುಖ್ಯ ಕ್ಯಾಂಪಸ್ನಲ್ಲಿ ಒಟ್ಟು 873 ವಿದ್ಯಾರ್ಥಿಗಳ ಪ್ರವೇಶವಿದೆ’ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕುಲಸಚಿವ ಚನ್ನಪ್ಪ ಎ., ಮೌಲ್ಯಮಾಪನ ಕುಲಸಚಿವ ಜ್ಯೋತಿ ಧಮ್ಮ ಪ್ರಕಾಶ, ಆಡಳಿತ ಅಧಿಕಾರಿ ಕೆ.ವೆಂಕಟೇಶ, ಸಹ ಪ್ರಾಧ್ಯಾಪಕ ಸುಯಮೀಂದ್ರ ಕುಲಕರ್ಣಿ, ಕಾಲೇಜು ಅಭಿವೃದ್ಧಿ ಪರಿಷತ್ತಿನ ನಿರ್ದೇಶಕ ರಾಘವೇಂದ್ರ ಪತ್ತೇಪೂರ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.