ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

'ಗ್ಯಾರಂಟಿ ಯೋಜನೆಗಳಿಂದ ಜನರ ಹಿತ ಕಾಪಾಡಿದ್ದೇವೆ'

ಸಚಿವ ಎನ್.ಎಸ್. ಬೋಸರಾಜು ಹೇಳಿಕೆ
Published 21 ಮಾರ್ಚ್ 2024, 16:30 IST
Last Updated 21 ಮಾರ್ಚ್ 2024, 16:30 IST
ಅಕ್ಷರ ಗಾತ್ರ

ರಾಯಚೂರು: ‘ಕಾಂಗ್ರೆಸ್‌ ಸರ್ಕಾರ ನುಡಿದಂತೆ ನಡೆದು ಗ್ಯಾರಂಟಿ ಯೋಜನೆಗಳ ಮೂಲಕ ಜನರ ಹಿತ ಕಾಪಾಡಿದೆ‘ ಎಂದು ಸಣ್ಣ ನೀರಾವರಿ‌ ಹಾಗೂ ವಿಜ್ಞಾನ ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜು ಹೇಳಿದರು.

ರಾಯಚೂರು ನಗರಸಭೆ ವ್ಯಾಪ್ತಿಯ 18 ವಾರ್ಡ್ ಗಳಲ್ಲಿ ಮುಖ್ಯಂತ್ರಿಗಳ‌ ವಿಶೇಷ ಹಾಗೂ ಅಲ್ಪಸಂಖ್ಯಾತ ಅನುದಾನ,   ಕೆಕೆಆರ್‌ಡಿಬಿ ಮ್ಯಾಕ್ರೋ ಯುಜಿಡಿ, ಕೆಕೆಆರ್ ಡಿಬಿ ಅದ್ಯಕ್ಷರ ವಿವೇಚನಾ ಅನುದಾನ ಸೇರಿ ವಿವಿಧ ಅನುದಾನಗಳಿಂದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶುಕ್ರವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ರಾಯಚೂರು‌ ನಗರದಲ್ಲಿ ₹38.43 ಕೋಟಿ ವೆಚ್ಚ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.

ನಗರಸಭೆ ಸದಸ್ಯ ಜಯಣ್ಣ, ಮುಖಂಡರಾದ ಮೊಹ್ಮದ್ ಶಾಲಂ, ಬಸವರಾಜ್ ರಡ್ಡಿ, ರುದ್ರಪ್ಪ ಅಂಗಡಿ, ಜಿ ಶಿವಮೂರ್ತಿ, ಬಿ ರಮೇಶ,  ರಮೇಶ್ ತಿಮ್ಮ ರೆಡ್ಡಿ ವಾಹಿದ್ ಬಸವರಾಜ್, ಪವನ್ ಕುಮಾರ, ಹಾಜಿ, ಸಾಜಿದ್ ಸಮೀರ್, ಮಾಡಗಿರಿ ನರಸಿಂಹಲು, ಜಿಂದಪ್ಪ, ಶ್ರೀನಿವಾಸ ರೆಡ್ಡಿ, ಅಲಿ, ಭೀಮರಾಯ್ ನರಸಾರಡ್ಡಿ , ತಿಮ್ಮಪ್ಪ ನಾಯಕ, ಹರಿಬಾಬು, ಗೋವಿಂದ ರಡ್ಡಿ,‌ ಬಸವರಾಜ ಪಾಟೀಲ, ರವಿ ರಾಂಪೂರ, ಟಿಸಿ‌ ಸಲ್ಮಾನ್, ಪ್ರಕಾಶ್, ಲೂಹಿಸ್, ಲೋಕಯ್ಯ, ರಾಜಶೇಖರ್, ಲಾಸರ್, ಹನುಮಂತ ಹೊಸೂರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT