ಗುರುವಾರ, 28 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಗಡಿ | ಕಸದ ನಡುವೆ ಅಕ್ಷರದವ್ವ ಸಾವಿತ್ರಿಬಾಯಿ ಪುಲೆ ನಾಮಫಲಕ

Published 20 ಜುಲೈ 2023, 6:46 IST
Last Updated 20 ಜುಲೈ 2023, 6:46 IST
ಅಕ್ಷರ ಗಾತ್ರ

ಮಾಗಡಿ : ಪಟ್ಟಣದ ಜಿಜಿಎಂಎಸ್‌ ಶಾಲೆಯ ಮುಂದಿನ ಅಕ್ಷರದವ್ವ ಸಾವಿತ್ರಿಬಾಯಿ ಪುಲೆ ರಸ್ತೆ ಎಂಬ ನಾಮಫಲಕದ ಸುತ್ತಲೂ ಕಸವನ್ನು ತಂದು ಸುರಿಯಲಾಗಿದೆ. ಮಹಿಳೆಯರಿಗೆ ಮೊದಲು ಅಕ್ಷರ ಕಲಸಿದ ಸಾವಿತ್ರಿ ಬಾಯಿ ಪುಲೆ ನಾಮಫಲಕದ ಸುತ್ತಲೂ ವಿಕೃತ ಮನಸ್ಸುಗಳು ಕಸವನ್ನು ತಂದು ಸುರಿಯುತ್ತಿವೆ.

ಪುರಸಭೆ ಅಧಿಕಾರಿಗಳು ಕಂಡುಕಾಣದವರಂತೆ ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ. ಕಸವನ್ನು ತೆಗೆಸಿ, ಮುಂದೆಂದೂ ನಾಮಫಲಕದ ಬಳಿ ಕಸ ಸುರಿಯದಂತೆ ಎಚ್ಚರಿಕೆಯ ನಾಮಫಲಕ ಹಾಕಬೇಕು. ನಾಮಫಲಕ ರಕ್ಷಿಸಲು ಪುರಸಭೆ ಅಧಿಕಾರಿಗಳು ಮುಂದಾಗದಿದ್ದರೆ ಹೋರಾಟ ನಡೆಸಬೇಕಾಗುತ್ತದೆ ಎಂದು ಸ್ಥಳೀಯ ನಿವಾಸಿ ಗೋಪಾಲ ಕೃಷ್ಣ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT