ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯ ಕೃಷಿ ಭೂಮಿಯಲ್ಲಿ ರಾಗಿ ಬೆಳೆದಿರುವ ರೈತರಿಗೆ ‘ಆನೆಕಾಡು’ ಉತ್ಪನ್ನದ ಕುರಿತು ತಿಳಿವಳಿಕೆ ನೀಡಿದ ಕೋಡಿಹಳ್ಳಿ ವನ್ಯಜೀವಿ ವಲಯದ ಡಿಆರ್‌ಎಫ್‌ಒ ನಾಗರಾಜು ಜಿ.ಎಂ
77 ಗ್ರಾಮ
16 ಹಾಡಿ ವ್ಯಾಪ್ತಿ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಆಸುಪಾಸು ಗರಿಷ್ಠ ಒಂದು ಕಿ.ಮೀ. ಪರಿಧಿಯ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯ(ಇಎಸ್‌ಝಡ್) ಎಂದು ಘೋಷಿಸಲಾಗಿದೆ. ಆನೇಕಲ್ ಹಾರೋಹಳ್ಳಿ ಕನಕಪುರ ತಾಲ್ಲೂಕಿನ ಅರಣ್ಯ ಪ್ರದೇಶಗಳು ಇದರ ವ್ಯಾಪ್ತಿಗೆ ಬರಲಿವೆ. ಇಲ್ಲಿ 77 ಗ್ರಾಮ 16 ಹಾಡಿಗಳಿವೆ. ಈ ಪ್ರದೇಶದಲ್ಲಿ ಕೃಷಿ ಹೊರತುಪಡಿಸಿ ಪರಿಸರಕ್ಕೆ ಮಾರಕವಾಗುವ ಯಾವುದೇ ಚಟುವಟಿಕೆ ನಡೆಸುವಂತಿಲ್ಲ. ಇಲ್ಲಿನ ಕೃಷಿ ಉತ್ಪನ್ನಗಳನ್ನು ‘ಆನೆಕಾಡು’ ಬ್ರ್ಯಾಂಡ್ ಹೆಸರಿನಲ್ಲಿ ಗ್ರಾಹಕರಿಗೆ ತಲುಪಿಸಲು ಯೋಜನೆ ರೂಪಿಸಲಾಗಿದೆ. ರೈತರು ಮತ್ತು ಗ್ರಾಹಕರ ಸ್ಪಂದನ ಆಧರಿಸಿ ಯೋಜನೆಯನ್ನು ಮತ್ತಷ್ಟು ವಿಸ್ತರಿಸುವ ಆಲೋಚನೆ ಇದೆ ಎಂದು ಉದ್ಯಾನವನದ ಕೋಡಿಹಳ್ಳಿ ವನ್ಯಜೀವಿ ವಲಯದ ಡಿಆರ್‌ಎಫ್‌ಒ ನಾಗರಾಜು ಜಿ.ಎಂ ‘ಪ್ರಜಾವಾಣಿ’ಗೆ ತಿಳಿಸಿದರು.

ಅರಣ್ಯದ ಅಂಚಿನ ಕೃಷಿ ಉತ್ಪನ್ನಗಳಿಗೆ ಬ್ರ್ಯಾಂಡ್ ಮೌಲ್ಯದ ಜೊತೆಗೆ ಉತ್ತಮ ಬೆಲೆ ಸಿಕ್ಕರೆ ರೈತರ ಬದುಕು ಹಸನಾಗಲಿದೆ.
–ಮರಿಗೌಡ, ಅಧ್ಯಕ್ಷ ಆನೆಕಾಡು ಫಾರ್ಮರ್ಸ್ ಗ್ರೂಪ್ಮರಿಗೌಡ ಅಧ್ಯಕ್ಷ ಆನೆಕಾಡು ಫಾರ್ಮರ್ಸ್ ಗ್ರೂಪ್

ಸದ್ಯ ಅಲಸಂದೆ ರಾಗಿ ಅವರೆಕಾಳು ಹುರುಳಿಕಾಳು ಎಳ್ಳು ಜೇನು ಬೆಟ್ಟದ ನಲ್ಲಿಕಾಯಿ ಉತ್ಪನ್ನಗಳನ್ನು ‘ಆನೆಕಾಡು’ ಬ್ರ್ಯಾಂಡ್ ಹೆಸರಿನಲ್ಲಿ ಪ್ಯಾಕ್ ಮಾಡಿ ಮಾರುಕಟ್ಟೆಗೆ ಪರಿಚಯಿಸಲಾಗುತ್ತಿದೆ.
– ಸುಜಯ್ ಕನಕಪುರ ಆರ್ಗ್ಯಾನಿಕ್ ಪೊಡ್ಯೂಸರ್ ಕಂಪನಿಸುಜಯ್ ಕನಕಪುರ ಆರ್ಗ್ಯಾನಿಕ್ ಪೊಡ್ಯೂಸರ್ ಕಂಪನಿ