ಕನಕಪುರ ತಾಲ್ಲೂಕಿನ ಸಿದ್ದೇಶ್ವರನದೊಡ್ಡಿ ಗ್ರಾಮದಲ್ಲಿ ಕಾಡಾನೆಯಿಂದ ಹಾನಿಗೊಂಡಿರುವ ಭತ್ತದ ಗದ್ದೆ
ಕಾಡಾನೆಗಳ ಉಪಟಳ ನಿಯಂತ್ರಣಕ್ಕೆ ಆಗ್ರಹಿಸಿ ರಾಮನಗರದ ಉಪ ಅರಣ್ಯ ಸಂರಕ್ಷಾಣಾಧಿಕಾರಿ ಕಚೇರಿ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ನಡೆಸಿದ್ದ ರೈತರು (ಸಂಗ್ರಹ ಚಿತ್ರ)
‘ಪರಿಹಾರದ ಮಾನದಂಡ ಬದಲಾಗಲಿ’ ‘ಬೆಳೆಹಾನಿಗೆ ಅರಣ್ಯ ಇಲಾಖೆ ಕೊಡುವ ಪರಿಹಾರ ಅವೈಜ್ಞಾನಿಕವಾಗಿದ್ದು ಮಾನದಂಡ ಬದಲಾಗಬೇಕಿದೆ. ಸರ್ಕಾರ ಇತರ ಅಭಿವೃದ್ಧಿ ಯೋಜನೆಗಳಿಗೆ ಭೂ ಸ್ವಾಧೀನ ಮಾಡುವಾಗ ನೀಡುವ ಪರಿಹಾರದ ಮಾನದಂಡವನ್ನೇ ಬೆಳೆಹಾನಿಗೂ ಅನುಸರಿಸಬೇಕು. ಬೆಳೆಗಳ ಜೀವಿತಾವಧಿ ಫಸಲು ಹಾಗೂ ಬೆಳೆಯ ಪ್ರಸಕ್ತ ಮಾರುಕಟ್ಟೆ ದರ ಅಂದಾಜಿಸಿ ಪರಿಹಾರ ಕೊಡಬೇಕು’
ಸಿ. ಪುಟ್ಟಸ್ವಾಮಿ ರೈತ ಮುಖಂಡ ಚನ್ನಪಟ್ಟಣ ತಾಲ್ಲೂಕು
‘ಪಾಳು ಬಿದ್ದ ಜಮೀನು ಗುತ್ತಿಗೆ ಪಡೆಯಲಿ’ ‘ಕಾಡಾನೆಗಳಿಂದಾಗಿ ಅರಣ್ಯದಂಚಿನಲ್ಲಿರುವ ರೈತರು ಜಮೀನಿನಲ್ಲಿ ಕೃಷಿ ಮತ್ತು ತೋಟಗಾರಿಕೆ ಬೆಳೆಗಳನ್ನು ಬೆಳೆಯಲಾಗದ ಸ್ಥಿತಿ ಇದೆ. ನಿರಂತರ ದಾಳಿಯಿಂದ ಬೇಸತ್ತ ರೈತರು ತಮ್ಮ ಜಮೀನು ಪಾಳು ಬಿಟ್ಟಿದ್ದಾರೆ. ಅರಣ್ಯ ಇಲಾಖೆಯವರು ಆನೆಬಾಧಿತ ಪ್ರದೇಶದ ರೈತರ ಜಮೀನನ್ನು ಗುತ್ತಿಗೆ ಪಡೆದು ವಾರ್ಷಿಕ ಇಂತಿಷ್ಟು ಮೊತ್ತ ಕೊಡಲಿ. ಇದರಿಂದ ರೈತರ ಬದುಕಿಗೂ ಆಸರೆಯಾಗುತ್ತದೆ’.
ಶ್ರೀನಿವಾಸ್ ನಲ್ಲಹಳ್ಳಿ ರೈತ ಮುಖಂಡ ಕನಕಪುರ ತಾಲ್ಲೂಕು
‘ಪ್ರತಿಭಟನೆ–ಸಭೆಗಳಿಗೆ ಲೆಕ್ಕವಿಲ್ಲ’ ‘ಜಿಲ್ಲೆಯಲ್ಲಿ ಕಾಡಾನೆಯಿಂದ ಬಾಧಿತರಾಗಿರುವ ರೈತರು ನಡೆಸಿದ ಪ್ರತಿಭಟನೆಗಳಿಗೆ ಲೆಕ್ಕವಿಲ್ಲ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸಹ ನಮ್ಮೊಂದಿಗೆ ಸಭೆ ನಡೆಸಿ ಆನೆ ನಿಯಂತ್ರಿಸುವ ಭರವಸೆ ನೀಡುತ್ತಲೇ ಇದ್ದಾರೆ. ವರ್ಷದಿಂದ ವರ್ಷಕ್ಕೆ ಹಾವಳಿ ಹೆಚ್ಚುತ್ತಿದೆಯೇ ಹೊರತು ತಗ್ಗುತ್ತಿಲ್ಲ. ಸರ್ಕಾರ ಕಾಡಾನೆ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸದ ಹೊರತು ಪರಿಹಾರ ಸಿಗದು’.