ಕನಕಪುರ: ‘ಜನಪದ ದೇಶದ ಸಮಸ್ತ ಜನತೆ ತನ್ನೊಳಗೆ ಇರಿಸಿಕೊಂಡಿರುವ ಅಕ್ಷಯ ನಿಕ್ಷೇಪವಿದ್ದಂತೆ. ಅದು ದೇಶದ ಜೀವಾಳವಾಗಿದೆ’ ಎಂದು ದೇಗುಲಮಠದ ಕಿರಿಯ ಶ್ರೀ ಚನ್ನಬಸವ ಸ್ವಾಮೀಜಿ ತಿಳಿಸಿದರು.

ಧಮ್ಮದೀವಿಗೆ ಚಾರಿಟಬಲ್ ಟ್ರಸ್ಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಇಲ್ಲಿನ ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ನಡೆದ ದಸರಾ ಜನಪದೋತ್ಸವದಲ್ಲಿ ಅವರು ಮಾತನಾಡಿದರು.

ನಾಡಿನ ಸಂಸ್ಕೃತಿ ಮತ್ತು ಸಾಂಸ್ಕೃತಿಕ ವೈಭವವನ್ನು ಪರಿಚಯಿಸಿಕೊಡುವಂತಹ ದಸರಾ ಉತ್ಸವವನ್ನು ಮೈಸೂರಿನ ಮಹಾರಾಜರು ಆಚರಣೆಗೆ ತಂದರು. ಅದು ಇಂದು ವಿಶ್ವಮಟ್ಟದಲ್ಲಿ ಗಮನ ಸೆಳೆದಿದೆ. ಅದೇ ರೀತಿ ಜನಪದ ಕಲೆ ಮತ್ತು ಕಲಾ ಸಂಸ್ಕೃತಿಯನ್ನು ಒಗ್ಗೂಡಿಸಿ ದಸರಾ ಜನಪದೋತ್ಸವವನ್ನು ಧಮ್ಮದೀವಿಗೆ ಚಾರಿಟಬಲ್ ಟ್ರಸ್ಟ್ ನಡೆಸುತ್ತಿರುವುದು ಶ್ಲಾಘನೀಯ ಎಂದರು.

ಯುಪಿಎಸ್‌ಸಿ ತರಬೇತುದಾರ ಡಾ.ಶಿವಕುಮಾರ್ ಮಾತನಾಡಿ, ಕನ್ನಡ ನಾಡಿನ ಸಂಸ್ಕೃತಿ ಮತ್ತು ಜನಪದ ಕಲೆಗಳನ್ನು ಪ್ರೋತ್ಸಾಹಿಸುವ ಕೆಲಸವನ್ನು ಕನ್ನಡ ನಾಡಿನ ಜನತೆ ಆಯಾ ಪ್ರಾಂತ್ಯಕ್ಕೆ ತಕ್ಕಂತೆ ಮಾಡಬೇಕು. ಆಗ ಮಾತ್ರ ನಮ್ಮ ನಾಡಿನ ಸಂಸ್ಕೃತಿ ಉಳಿಯಲು ಸಾಧ್ಯ. ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ಧಮ್ಮದೀವಿಗೆ ಚಾರಿಟಬಲ್ ಟ್ರಸ್ಟ್ ಅನ್ನು ಬೆಂಬಲಿಸಬೇಕು ಎಂದು ಹೇಳಿದರು.

ಜಾನಪದ ತಜ್ಞ ಡಾ.ಬಾನಂದೂರು ಕೆಂಪಯ್ಯ ಮಾತನಾಡಿ, ಜಾನಪದ ಸಂಪತ್ತು ವೃದ್ಧಿಯಾದರೆ ದೇಶದ ಸಾಂಸ್ಕೃತಿಕ ಸಂಪತ್ತು ವೃದ್ಧಿಯಾದಂತೆ. ಹಿಂದಿನ ಕಾಲದಲ್ಲಿ ರಾಜರು ತಮ್ಮ ಆಸ್ಥಾನದಲ್ಲಿ ವಿದ್ವಾಂಸರು, ಕವಿಗಳು, ಸಾಹಿತಿಗಳಿಗೆ ಆಶ್ರಯಕೊಟ್ಟು ಪೋಷಿಸುತ್ತಿದ್ದರು. ಅದರ ಅರ್ಥ ನಾಡು ಸಮೃದ್ಧಿಯಾಗಿರಬೇಕು ಎಂಬುದಾಗಿದೆ ಎಂದರು.

ಸಾವಿರಾರು ವರ್ಷಗಳ ಇತಿಹಾಸವಿರುವ ಕನ್ನಡ ನಾಡು ಸಾಂಸ್ಕೃತಿಕವಾಗಿ ವೈಭವದಿಂದ ಇತ್ತು ಎಂಬುದು ಇತಿಹಾಸದಿಂದ ತಿಳಿದಿದೆ. ಮುಂದೆಯೂ ನಮ್ಮ ನಾಡಿನ ಸಾಹಿತ್ಯ, ಜನಪದ ಕಲೆಯನ್ನು ಉಳಿಸಿ ಬೆಳೆಸುವ ಕೆಲಸ ಮಾಡಬೇಕಿದೆ. ಅದಕ್ಕೆ ಎಲ್ಲರೂ ಕೈ ಜೋಡಿಸಬೇಕೆಂದು ಮನವಿ ಮಾಡಿದರು.

ಧಮ್ಮ ದೀವಿಗೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಮಲ್ಲಿಕಾರ್ಜುನ್ ಮಾತನಾಡಿ, ಮನುಷ್ಯ ಹುಟ್ಟಿನಿಂದ ಸಾಯುವವರೆಗೂ ಏನೆಲ್ಲಾ ಮಾಡುತ್ತಾನೋ ಕಲಿಯುತ್ತಾನೆ ಅದು ಶಾಶ್ವತವಾಗಿ ಉಳಿಯುವಂತೆ ಮಾಡಿರುವುದೇ ಜನಪದ ಸಾಹಿತ್ಯ. ಅಂದಿನಿಂದ ಇಂದಿನವರೆಗೂ ಏನೆಲ್ಲಾ ನವ ನವೀನವಾಗಿ ಕಲಿಯಲ್ಪಡುತ್ತದೋ ಅದರ ಮೂಲಬೇರು ಜನಪದ ಸಾಹಿತ್ಯ ಮತ್ತು ಕಲೆಯಾಗಿದೆ. ಎಲ್ಲಾ ಕಲೆಗಳ ತಳಪಾಯವೇ ಜನಪದವಾಗಿದೆ ಎಂದು ತಿಳಿಸಿದರು.

ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ವಿವಿಧ ಪ್ರಕಾರದ ಕಲಾ ತಂಡಗಳಾದ ಡೊಳ್ಳುಕುಣಿತ, ವೀರಗಾಸೆ, ಪಟದ ಕುಣಿತ, ವೀರಬಾಹು, ಮಹಿಷಿ, ಕಂಸಾಳೆ, ಪೂಜಾ ಕುಣಿತದೊಂದಿಗೆ ಅಯ್ಯಪ್ಪಸ್ವಾಮಿ ವೃತ್ತದಿಂದ ಮೆರ ವಣಿಗೆ ಆರಂಭಗೊಂಡಿತು. ಪ್ರಮುಖ ಬೀದಿಗಳಲ್ಲಿ ಮರವಣಿಗೆ ನಡೆಯಿತು. ಬಿ. ನಾಗರಾಜು, ಚಿನ್ನ ಸ್ವಾಮಿ, ಚಿಕ್ಕಣ್ಣ, ಜಯಸಿಂಹ, ಕೆ.ಎಸ್. ಭಾಸ್ಕರ್, ಡಾ.ತೇಜೋವತಿ, ಡಾ.ಬಿ.ಸಿ. ಬೊಮ್ಮಯ್ಯ, ವಿ. ಸಂಪಂಗಿರಾಮು, ಎ.ಪಿ. ಕೃಷ್ಣಪ್ಪ, ಮುನಿಮಲ್ಲಣ್ಣ, ಮುನಿರಾಜು, ಕೃಷ್ಣಪ್ಪ, ಹರ್ಷ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.