ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚನ್ನಪಟ್ಟಣ: ಗೊಂಬೆ ಉದ್ಯಮ ಪ್ರೋತ್ಸಾಹಿಸಲು ಒತ್ತಾಯ

ಚನ್ನಪಟ್ಟಣದಲ್ಲಿ ಆಟಿಕೆ ಉತ್ಪಾದನೆ ಘಟಕ ಆರಂಭಕ್ಕೆ ಆಗ್ರಹ, ಕಸ್ತೂರಿ ಕರ್ನಾಟಕ ಜನಪರ ವೇದಿಕೆಯಿಂದ ಕಾಲ್ನಡಿಗೆ
Last Updated 13 ಸೆಪ್ಟೆಂಬರ್ 2020, 8:37 IST
ಅಕ್ಷರ ಗಾತ್ರ

ರಾಮನಗರ: ದೇಶದ ಮೊದಲ ಅಟಿಕೆಗಳ ಉತ್ಪಾದನಾ ಘಟಕವನ್ನು ಬೊಂಬೆನಗರಿ ಚನ್ನಪಟ್ಟಣದಲ್ಲಿಯೇ ಸ್ಥಾಪಿಸಬೇಕು, ಚೀನಾ ಆಟಿಕೆಗಳನ್ನು ನಿಷೇಧಿಸಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಇದೇ 24, 25ರಂದು ಕಾಲ್ನಡಿಗೆ ಜಾಥ ಹಮ್ಮಿಕೊಳ್ಳಲಾಗಿದೆ ಎಂದು ಕಸ್ತೂರಿ ಕರ್ನಾಟಕ ಜನಪರ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ರಮೇಶ್ ಗೌಡ ತಿಳಿಸಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು ’24ರಂದು ಚನ್ನಪಟ್ಟಣದ ಸ್ಪನ್ ಸಿಲ್ಕ್ ಮಿಲ್ಕ್ ಆವರಣದಲ್ಲಿ ಕಾಲ್ನಡಿಗೆಗೆ ಚಾಲನೆ ನೀಡಲಾಗುವುದು. ಅಲ್ಲಿಂದ ಕೊಲ್ಲಾಪುರದಮ್ಮ ದೇವಿ ದೇವಸ್ಥಾನದ ಬಳಿ ಬಂದು ನಂತರ ಮಹಾತ್ಮಗಾಂಧಿ ರಸ್ತೆ ಮೂಲಕ ಪೇಟೆ ಬೀದಿಯಲ್ಲಿ ಮೂಲಕ ಬೆಂಗಳೂರು-ಮೈಸೂrಉ ರಸ್ತೆ ಸೇರಿ ಕೆಂಗಲ್ ದೇವಸ್ಥಾನದ ಬಳಿ ತಂಗುವುದು. 25ರಂದು ಕೆಂಗಲ್ ನಿಂದ ಹೊರಟು ಮಧ್ಯಾಹ್ನ 3 ಗಂಟೆಗೆ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಗುವುದು’ ಎಂದರು.

ಪ್ರಧಾನಿ ಮೋದಿ ಈಚೆಗೆ ತಮ್ಮ ’ಮನ್ ಕೀ ಬಾತ್‘ ಭಾಷಣದಲ್ಲಿ ಪ್ರಸ್ತಾಪಿಸಿರುವಂತೆ ವಿಶ್ವಮಟ್ಟದಲ್ಲಿ ₹7ಲಕ್ಷ ಕೋಟಿಗೂ ಅಧಿಕ ವಹಿವಾಟು ಹೊಂದಿದ್ದು ಇದರಲ್ಲಿ ಭಾರತದ ಪಾಲು ಕಡಿಮೆ ಎಂದು ಉಲ್ಲೇಖಿಸಿದ್ದಾರೆ. ನಮ್ಮಲ್ಲಿಯೂ ಚೀನಾ ಆಟಿಕೆಗಳ ಹಾವಳಿ ಹೆಚ್ಚಿದೆ. ಇದಕ್ಕೆ ಕಡಿವಾಣ ಹಾಕುವ ಅಗತ್ಯವಿದೆ. ಈ ಕೆಲಸವನ್ನು ಕೇಂದ್ರ ಸರ್ಕಾರ ಕೂಡಲೇ ಮಾಡಬೇಕು ಎಂದು ಒತ್ತಾಯಿಸಿದರು.

ಮುಖ್ಯಮಂತ್ರಿ ಯಡಿಯೂರಪ್ಪ ಕೊಪ್ಪಳದಲ್ಲಿ 400 ಎಕರೆ ಪ್ರದೇಶದಲ್ಲಿ ವಿಶ್ವದರ್ಜೆಯ ಮೂಲ ಸೌಕರ್ಯಗಳನ್ನು ಒಳಗೊಂಡ ಆಟಿಕೆ ಕ್ಲಸ್ಟರ್ ಆರಂಭಿಸಿ, 40ಸಾವಿರ ಉದ್ಯೋಗ ಸೃಷ್ಟಿಸುವ ಗುರಿ ಹೊಂದಿರುವುದಾಗಿ ಹೇಳಿದ್ದಾರೆ. ಆದರೆ, ಅದಕ್ಕಿಂತ ಮುಖ್ಯವಾಗಿ ಹೆಚ್ಚು ಕರಕುಶಲಕರ್ಮಿಗಳನ್ನು ಹೊಂದಿರುವ ಬೊಂಬೆಗಳ ತವರೂರು ಚನ್ನಪಟ್ಟಣದಲ್ಲಿ ಇಂತಹ ಕ್ಲಸ್ಟರ್ ಸ್ಥಾಪಿಸಬೇಕು ಎಂದು ಆಗ್ರಹಿಸಿ
ದರು.

ಬೊಂಬೆ ಉದ್ಯಮಿ ಬಿ.ವೆಂಕಟೇಶ್ ಮಾತನಾಡಿ, ’2018ರಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್.ಡಿ. ಕುಮಾರಸ್ವಾಮಿ ಕಾಂಪಿಟ್ ವಿತ್ ಚೀನಾಪರಿಕಲ್ಪನೆಯಡಿ ರಾಜ್ಯದ ಒಂಬತ್ತು ಜಿಲ್ಲೆಗಳಲ್ಲಿ ಕೈಗಾ
ರಿಕಾ ಕ್ಲಸ್ಟರ್ ಸ್ಥಾಪಿಸಲು ₹500 ಕೋಟಿ ಅನುದಾನ ಒದಗಿಸಿದ್ದರು. ಉತ್ಪಾದನಾ ವಲಯವನ್ನು ಉತ್ತೇ
ಜಿಸಲು ಸ್ಥಳೀಯ ಸಂಪನ್ಮೂಲಗಳ ಬಳಕೆ, 9 ಜಿಲ್ಲೆಗಳಲ್ಲಿ ಕನಿಷ್ಠ 9 ಲಕ್ಷ ಸ್ಥಳೀಯರಿಗೆ ಉದ್ಯೋಗಾವಕಾಶ ಮತ್ತು ಅಸಮತೋಲನ ನಿವಾರಿಸುವ ಸಲುವಾಗಿ ಈ ಯೋಜನೆ ಜಾರಿಗೊಳಿಸಲಾಗಿತ್ತು. ಈ ಯೋಜನೆ ಭಾಗವಾಗಿ ಕೊಪ್ಪಳದಲ್ಲಿ ಆಟಿಕೆ ತಯಾರಿಕಾ ಕ್ಲಸ್ಟರ್ ಪ್ರಾರಂಭಿಸಲು ಮೈತ್ರಿ ಸರ್ಕಾರ ಮುಂದಾಗಿತ್ತು. ಈಗ ಕೇಂದ್ರ ಮತ್ತು ರಾಜ್ಯ ಸರ್ಕಾರ ಬಣ್ಣದ ಆಟಿಕೆಗಳ ತಯಾರಿಕೆ ಮತ್ತು ಮಾರಾಟಕ್ಕೆ ಉತ್ತೇಜನ ನೀಡಲು ಮುಂದಾಗಬೇಕು’ ಎಂದು ಒತ್ತಾಯಿಸಿದರು.

ಚನ್ನಪಟ್ಟಣದ ತಾಲ್ಲೂಕಿನ ಹೊಂಗನೂರು, ನೀಲಸಂದ್ರ, ಕೋಟೆ, ಪೇಟೆ, ಸುಣ್ಣಘಟ್ಟ, ಎಲೇಕೇರಿ, ಮಂಗಳ
ವಾರಪೇಟೆ, ಸಯ್ಯದ್ ವಾಡಿ, ಟಿಪ್ಪುನಗರ, ಜೆ.ಬ್ಯಾಡರಹಳ್ಳಿ, ಹರಿಸಂದ್ರ, ರಾಂಪುರ ಸೇರಿದಂತೆ 50ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಬೊಂಬೆ ತಯಾರಿಕರಿದ್ದಾರೆ. ಈ ಹಿಂದೆ ಹೆಲ್‌ ಕಾರ್ಡ್ ಸೌಲಭ್ಯದಿಂದ ಖಾಸಗಿ ಆಸ್ಪತ್ರೆಗಳಲ್ಲಿ ಕ್ಯಾಷ್‌ಲೆಸ್ ಸೌಲಭ್ಯ ಸಿಗುತ್ತಿದ್ದು ಹಲವು ವರ್ಷಗಳಿಂದ ಈ ಸೌಲಭ್ಯ ನಿಂತಿದೆ. ಇದನ್ನು ಪುನಃ ಜಾರಿಗೆ ತರಬೇಕು ಎಂದು ಮನವಿಮಾಡಿದರು.

ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಸಿ.ಯೋಗೇಶ್ ಗೌಡ, ರಾಜ್ಯ ಉಪಾಧ್ಯಕ್ಷ ಬೆಂಕಿ ಶ್ರೀಧರ್, ರಂಜಿತ್ ಗೌಡ, ರಾಜ್ಯ ಸಂಘಟನಾ ಕಾರ್ಯದರ್ಶಿ ಎಂ.ಎಸ್.ನರಸಿಂಹ, ರೈತಮುಖಂಡ ಸುಜೀವನ್ ಕುಮಾರ್, ಕರ್ನಾಟಕ ಕರಕುಶಲ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿ ಬಿ.ವೆಂಕಟೇಶ್, ಶ್ರೀನಿವಾಸ್, ಹೇಮಾ ಶೇಖರ್, ದೇವರಮನಿ, ಚನ್ನಪಟ್ಟಣ ಹ್ಯಾಂಡಿಕ್ರಾಫ್ಟ್ ವರ್ಕರ್ಸ್ ಅಸೋಸಿಯೇಷನ್ ಅಧ್ಯಕ್ಷ ಎನ್.ರಮೇಶ್, ಡಾ.ರಾಜ್ ಕಲಾ ಬಳಗದ ಅಧ್ಯಕ್ಷ ಎಲೆಕೇರಿ ಮಂಜುನಾಥ್, ಡಿಎಸ್ಎಸ್ ಸಂಚಾಲಕ ವೆಂಕಟೇಶ್, ರ್‍ಯಾಂಬೊ ಸುರೇಶ್, ಹೋರಾಟಗಾರ್ತಿ ಸುಕನ್ಯಾ, ಬಾಬ್ ಜಾನ್ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT