ಕನಕಪುರ: ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಹೈಕಮಾಂಡ್ ಡಿ.ಕೆ.ಶಿವಕುಮಾರ್ ಅವರಿಗೆ ಕೊಟ್ಟ ಮಾತಿನಂತೆ ಅವರನ್ನು ಮುಖ್ಯಮಂತ್ರಿ ಮಾಡಬೇಕೆಂದು ಮರಳೇ ಗವಿಮಠದ ಮುಮ್ಮಡಿ ಶಿವರುದ್ರ ಸ್ವಾಮೀಜಿ ಒತ್ತಾಯಿಸಿದರು.

ಶನಿವಾರ ವಿವಿಧ ಮಠಾಧೀಶರ ಸಮ್ಮುಖದಲ್ಲಿ ಡಿ.ಕೆ.ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡುವಂತೆ ಒತ್ತಾಯಿಸಿ ಮಾತನಾಡಿದರು.

ರಾಜ್ಯದ ಹಿತ ಕಾಪಾಡುವಲ್ಲಿ ಧರ್ಮದ ಮಾರ್ಗದರ್ಶನ ಅವಶ್ಯ. ರಾಜಕೀಯದ ಕಾರ್ಯಕ್ಷಮತೆಗೆ ಧರ್ಮದ ದಾರಿ ಅಗತ್ಯ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ನಡುವೆ ಒಪ್ಪಂದ ನಡೆದಿದೆ ಎನ್ನಲಾಗಿದೆ.

ಎರಡೂವರೆ ವರ್ಷ ಅವಧಿ ಮುಕ್ತಾಯವಾಗುತ್ತಿದ್ದಂತೆ ಅಧಿಕಾರ ಹಸ್ತಾಂತರದ ಮಾತು ಪ್ರಬಲವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ಕೊಟ್ಟ ಮಾತಿನಂತೆ ಶಿವಕುಮಾರ್ ಅವರಿಗೆ ಅಧಿಕಾರ ನೀಡುವುದು ಧರ್ಮ ಎಂದರು.

ಧರ್ಮ ಮತ್ತು ಮಾರ್ಗದರ್ಶನದ ಅವಶ್ಯ ಬಂದಾಗ ಮಠಾಧೀಶರು ಮಾರ್ಗದರ್ಶನ ನೀಡುವುದು ಔಚಿತ್ಯ. ಡಿ.ಕೆ.ಶಿವಕುಮಾರ್ ಅವರು ಕಾಂಗ್ರೆಸ್ ಅಧಿಕಾರಕ್ಕೆ ತರಲು ತಮ್ಮ ಸಂಪೂರ್ಣ ಶಕ್ತಿಯನ್ನು ವಿನಿಯೋಗಿಸಿ ಎಲ್ಲ ಸಂಕಷ್ಟಗಳನ್ನು ಎದುರಿಸಿದ್ದಾರೆ. ಅವರಿಗೆ ಮುಖ್ಯಮಂತ್ರಿ ಸ್ಥಾನ ಸಿಗುವುದು ನ್ಯಾಯ ಸಮ್ಮತವಾಗಿದೆ ಎಂದರು.

ಕೊಟ್ಟ ಮಾತಿನಂತೆ ನಡೆದುಕೊಳ್ಳದೆ ಮಾತು ತಪ್ಪಿದಾಗ ಸಮಾಜದಲ್ಲಿ ಏನೆಲ್ಲ ಅನರ್ಥಗಳಾಗಿವೆ ಎಂಬುದು ನಮ್ಮ ಕಣ್ಮುಂದಿದೆ ಎಂದರು.

ರಾಜಕೀಯದಲ್ಲಿ ಮಠಾಧೀಶರು ಪ್ರವೇಶಿಸುವುದು ಸರಿಯೇ ಎಂಬ ಪ್ರಶ್ನೆಗೆ ಮಠದಲ್ಲಿ, ಧರ್ಮದಲ್ಲಿ ರಾಜಕೀಯ ಸೇರಬಾರದು. ಆದರೆ, ರಾಜಕೀಯದಲ್ಲಿ ಧರ್ಮ ಪ್ರವೇಶಿಸಬಹುದು. ರಾಜಕೀಯಕ್ಕೆ ಮಾರ್ಗದರ್ಶನದ ಅನಿವಾರ್ಯತೆ ಎದುರಾದಾಗ ಧರ್ಮ ದಾರಿ ತೋರುವುದು ತಪ್ಪಲ್ಲ. ಧರ್ಮವನ್ನು ಜಾಗೃತಗೊಳಿಸುವ ಕೆಲಸವನ್ನು ಪಠಾಧೀಶರು ಮಾಡುತ್ತಿದ್ದಾರೆ ಅಷ್ಟೇ ಎಂದು ಉತ್ತರಿಸಿದರು.

ಸೋಸಲೆ ತೋಪಿನ ಮಠದ ಷಡಕ್ಷರಿ ದೇಶಿಕೇಂದ್ರ ಸ್ವಾಮೀಜಿ, ಬಿದರಳ್ಳಿ ಮಠದ ಮಲ್ಲಿಕಾರ್ಜುನ ಸ್ವಾಮೀಜಿ, ದ್ಯಾವಪಟ್ಟಣ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ, ಧನಗೂರು ವೀರರಸಿಂಹಾಸನ ಮಠದ ಷಡಕ್ಷರಿ ದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ, ಕುಂದೂರು ದೊಡ್ಡಮಠದ ಇಮ್ಮಡಿ ಬಸವರಾಜೇಂದ್ರ ಸ್ವಾಮೀಜಿ, ಅಜ್ಜನ ಬಸವನಹಳ್ಳಿ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಕೊಡಗು ಸೋಮವಾರಪೇಟೆ ನಿಶ್ಚಲ ನಿರಂಜನ ದೇಶಿಕೇಂದ್ರ ಸ್ವಾಮೀಜಿ, ಹೊರಳಗಲ್ ಸಿದ್ದಲಿಂಗ ಸ್ವಾಮೀಜಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.