ಯಾವ್ಯಾವ ಸ್ಪರ್ಧೆಗಳು ನಡೆಯಲಿವೆ?
14 ವರ್ಷದೊಳಗಿನ ಬಾಲಕಿಯರಿಗೆ ಟ್ರಯಥ್ಲಾನ್ ‘ಎ’ ‘ಬಿ’ ಹಾಗೂ ‘ಸಿ’ ವಿಭಾಗಗಳಲ್ಲಿ ನಡೆಯಲಿವೆ. ‘ಎ’ ವಿಭಾಗದಲ್ಲಿ 60 ಮೀಟರ್ ಓಟದ ಸ್ಪರ್ಧೆ ಲಾಂಗ್ ಜಂಪ್ ಹಾಗೂ ಉದ್ದ ಜಿಗಿತ ಇರಲಿದೆ. ‘ಬಿ’ ವಿಭಾಗದಡಿ 60 ಮೀಟರ್ ಓಟ ಉದ್ದ ಜಿಗಿತ ಬ್ಯಾಕ್ ಥ್ರೋ ಗುಂಡು ಎಸೆತ ಹಾಗೂ ‘ಸಿ’ ವಿಭಾಗದಡಿ 60 ಮೀಟರ್ ಓಟ 600 ಮೀಟರ್ ಉದ್ದ ಜಿಗಿತ ಕಿಡ್ಸ್ ಭರ್ಜಿ ಎಸೆತ ಸ್ಪರ್ಧೆಗಳಿವೆ. 16 ವರ್ಷದೊಳಗಿನ ಬಾಲಕಿಯರಿಗೆ 60 ಮೀಟರ್ ಓಟ 600 ಮೀಟರ್ ಉದ್ದ ಜಿಗಿತ ಎತ್ತರ ಜಿಗಿತ ಗುಂಡು ಎಸೆತ ಭರ್ಜಿ ಎಸೆತ ಹಾಗೂ ಡಿಸ್ಕಸ್ ಎಸೆತ ಸ್ಪರ್ಧೆಗಳು ನಡೆಯಲಿವೆ ಎಂದು ಅಸೋಸಿಯೇಷನ್ ಕಾರ್ಯದರ್ಶಿ ಉಮೇಶ್ ಬಾಬು ಮಾಹಿತಿ ನೀಡಿದರು.