ಮಾಗಡಿ: ತಾಲ್ಲೂಕು ಹಿಂದುಳಿದ ಜಾತಿಗಳ ಮಹಾ ಒಕ್ಕೂಟದ ಅಧ್ಯಕ್ಷರನ್ನಾಗಿ ಪುರಸಭೆ ಸದಸ್ಯ ಎಂ.ಎನ್ ಮಂಜುನಾಥ್ ಅವರನ್ನು ಸಭೆಯಲ್ಲಿ ಸರ್ವನುಮತದಿಂದ ಆಯ್ಕೆ ಮಾಡಲಾಯಿತು.

ಪಟ್ಟಣದ ಸಿದ್ದಾರೂಢ ಭವನದಲ್ಲಿ ಶನಿವಾರ ನಡೆದ ಹಿಂದುಳಿದ ಜಾತಿಗಳ ಮಹಾ ಒಕ್ಕೂಟದ ಸಭೆಯಲ್ಲಿ ಆಯ್ಕೆ ನಡೆಯಿತು. ನಂತರ ಪ್ರತಿಕ್ರಿಯಿಸಿದ ನೂತನ ಅಧ್ಯಕ್ಷ ಮಂಜುನಾಥ್, ಮುಂದಿನ ವಾರದಲ್ಲಿ ತಾಲ್ಲೂಕಿನಲ್ಲಿ ನೆಲೆಸಿರುವ ಎಲ್ಲ ಒಬಿಸಿ ಮುಖಂಡರ ಸಭೆ ಕರೆದು ತಾಲ್ಲೂಕು ಘಟಕ ರಚಿಸಲಾಗುವುದು ಎಂದರು.

ಜಿಲ್ಲಾ ಹಿಂದುಳಿದ ಜಾತಿಗಳ ಮಹಾ ಒಕ್ಕೂಟದ ಅಧ್ಯಕ್ಷ ರೈಡ್ ನಾಗರಾಜು ಮಾತನಾಡಿ, ಆ.5ರಂದು ಬೆಳಗ್ಗೆ 10.30ಕ್ಕೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಡಿ.ದೇವರಾಜ ಅರಸು ಜಯಂತಿ ಆಚರಿಸುವ ಬಗ್ಗೆ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆಯಲಿರುವ ಪೂರ್ವಭಾವಿ ಸಭೆಯಲ್ಲಿ ಜಿಲ್ಲೆಯ 5 ತಾಲ್ಲೂಕುಗಳ ಹಿಂದುಳಿದ 18 ಸಮುದಾಯಗಳ ಮುಖಂಡರು ತಪ್ಪದೆ ಭಾಗವಹಿಸಿಬೇಕು ಎಂದರು.

ಒಬಿಸಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಟಿ.ವಿ.ನಾರಾಯಣ ಮಾತನಾಡಿ, ಜಿಲ್ಲೆಯಲ್ಲಿ ಹಿಂದುಳಿದ ಸಮುದಾಯಗಳಿಗೆ ಸೂಕ್ತ ಪ್ರಾತಿನಿದ್ಯ ಸಿಕ್ಕಿಲ್ಲ. ಸರ್ಕಾರಿ ಸವಲತ್ತು ಕೂಡ ಒಬಿಸಿ ಸಮುದಾಯಗಳಿಗೆ ತಲುಪುತ್ತಿಲ್ಲ. ಸವಲತ್ತು ಪಡೆಯಲು ಸಂಘಟಿತರಾಗಬೇಕಾಗಿದೆ ಎಂದರು.

ತಾಲ್ಲೂಕು.ಡಿ.ದೇವರಾಜ ಅರಸು ಹಿಂದುಳಿದ ಜಾತಿಗಳ ವಿಚಾರ ವೇದಿಕೆ ಅಧ್ಯಕ್ಷ ಪಿ.ವಿ.ಸೀತಾರಾಮ್ ಮಾತನಾಡಿ, ಒಬಿಸಿ ಸಮುದಾಯಗಳ ಸಂಘಟನೆ ಅನಿವಾರ್ಯ ಎಂದರು.

ತಾಲ್ಲೂಕು.ಡಿ.ದೇವರಾಜ ಅರಸು ಹಿಂದುಳಿದ ಜಾತಿಗಳ ವಿಚಾರ ವೇದಿಕೆ ಪ್ರಧಾನ ಕಾರ್ಯದರ್ಶಿ ಮಾರಣ್ಣ ಮಾತನಾಡಿ, ತಾಲ್ಲೂಕಿನಲ್ಲಿ ಡಿ.ದೇವರಾಜ ಅರಸು ಆಶಯ ಅನುಷ್ಠಾನಗೊಳಿಸುವಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ನಿರ್ಲಕ್ಷ್ಯವಹಿಸಿದ್ದಾರೆ. ಶಿಕ್ಷಣ, ಸಂಘಟನೆ, ಹೋರಾಟವನ್ನು ಒಬಿಸಿಗಳು ರೂಢಿಸಿಕೊಳ್ಳಬೇಕಾಗಿದೆ ಎಂದರು.

ಹಿಂದುಳಿದ ಸಮುದಾಯಗಳ ಮುಖಂಡರು, ಪುರಸಭೆ ಸದಸ್ಯ ಜಯರಾಮಯ್ಯ, ಮಾಜಿ ಸದಸ್ಯರಾದ ಶಿವಕುಮಾರ್,ಮಹೇಶ್, ಜಯಲಕ್ಷ್ಮೀ ರೇವಣ್ಣ, ಮುಖಂಡರಾದ ಮುನಿಕೃಷ್ಣ, ಲಕ್ಷ್ಮಿಪತಿರಾಜು, ಎಂ.ಬಿ.ಬಸವರಾಜು ಮಾತನಾಡಿದರು.

ಒಬಿಸಿ ಸಮುದಾಯಗಳ ಮುಖಂಡರಾದ ರಂಗಪ್ರಕಾಶ್, ಎಚ್.ಶಿವಕುಮಾರ್, ಕೆಂಪಣ್ಣ, ಭೈರಣ್ಣ, ಪೂಜಾರಿ ಚಿತ್ತಯ್ಯ, ಕದಂಬ ಗಂಗರಾಜು, ಟಿ.ಎಂ.ಶ್ರೀನಿವಾಸ್, ಜಗದೀಶ್, ದಯಾನಂದ್, ಭರತ್, ವೆಂಕಟೇಶಯ್ಯ, ರಮೇಶ್, ಕನಕ, ಮಂಜುನಾಥಾಚಾರ್ ಹಾಗೂ ಸಮುದಾಯ ಮುಖಂಡರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.