ಇಲ್ಲಿನ ಬಸವನಪುರ ಗ್ರಾಮದಲ್ಲಿರುವ ಲಿಂಕ್‌ಅಪ್ ಗಾರ್ಮೆಂಟ್ಸ್‌ನಲ್ಲಿ ಬಾಂಗ್ಲಾ ದೇಶಿಯರು ಅಕ್ರಮವಾಗಿ ನೆಲೆಸಿ ಕೆಲಸ ಮಾಡುತ್ತಿರುವ ದೂರಿನ ಮೇರೆಗೆ ಗ್ರಾಮೀಣ ಠಾಣೆ ಪೊಲೀಸರ ತಂಡವು ದಾಳಿ ನಡೆಸಿತು. ಮೊಹಮ್ಮದ್ ಸೊಹಿಲ್ ರಾಣ (34), ಜುಲ್ಫಿಕರ್ ಅಲಿ (34), ಉಜಾಲ್ ಮೊಹಮ್ಮದ್ ರಾಣಾ (30), ಮಿನ್ಹಾಜುಲ್ ಹುಸೇನ್ (25), ಮುಸ್ಸಾ ಶೇಖ್ (27), ರಹೀಂ (27), ಆರೀಫುಲ್ ಇಸ್ಲಾಂ (27) ಎಂಬುವರನ್ನು ವಶಕ್ಕೆ ಪಡೆಯಲಾಗಿದೆ. ಮತ್ತೊಬ್ಬ ಮಹಿಳೆ ತಲೆಮರಿಸಿಕೊಂಡಿದ್ದಾರೆ ಎಂದು ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಬಾಬು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.