ರಾಮನಗರ: ಜಿಲ್ಲೆಯ ಪೊಲೀಸರು ನಗರದಲ್ಲಿ ಇತ್ತೀಚೆಗೆ ಪ್ರದರ್ಶಿಸಿದ ‘ಕುರುಕ್ಷೇತ್ರ’ ಅಥವಾ ‘ಧರ್ಮರಾಜ್ಯ ಸ್ಥಾಪನೆ’ ನಾಟಕವು ಗಮನ ಸೆಳೆಯಿತು. ಚಾಮುಂಡೇಶ್ವರಿ ಕೃಪಾ ಪೋಷಿತ ನಾಟಕ ಮಂಡಳಿ ವತಿಯಿಂದ ಇಲ್ಲಿನ ಜೂನಿಯರ್ ಕಾಲೇಜು ಮೈದಾನದಲ್ಲಿ ಪ್ರದರ್ಶನಗೊಂಡ ನಾಟಕದಲ್ಲಿ ಪೊಲೀಸರ ಕುಟುಂಬದವರು ಸೇರಿದಂತೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ನಾಟಕ ವೀಕ್ಷಿಸಿದರು.

ಸೂತ್ರಧಾರಿಯಾಗಿ ಇನ್ಸ್ಪೆಕ್ಟರ್ ವೆಂಕಟೇಶ್ ಕೆ., ಕೃಷ್ಣ–1ನೇ ಪಾತ್ರದಲ್ಲಿ ಹೆಡ್ ಕಾನ್ಸ್ಟೆಬಲ್ಗಳಾದ ರಮೇಶ್ ಗೌಡ ಕೆ.ಪಿ, ಮದ್ದೂರಯ್ಯ, ಕೃಷ್ಣ –2ನೇ ಪಾತ್ರದಲ್ಲಿ ಪಿಎಸ್ಐ ಬೋರೇಗೌಡ ಎಸ್.ಟಿ, ಧರ್ಮರಾಯನಾಗಿ ಪಿಎಸ್ಐ ನರಸಿಂಹ, ಭೀಮಸೇನನಾಗಿ ಕಾನ್ಸ್ಟೆಬಲ್ ಮನುಕುಮಾರ್ ಎ.ಆರ್, ಅರ್ಜುನನಾಗಿ ಎಎಸ್ಐ ಗುರು, ಅಭಿಮನ್ಯು ಆಗಿ ಕಾನ್ಸ್ಟೆಬಲ್ ಮೋಹನ್, ಬಲರಾಮನಾಗಿ ಹೆಡ್ ಕಾನ್ಸ್ಟೆಬಲ್ ಪಾದರಹಳ್ಳಿ ರಮೇಶ್ ಬಣ್ಣ ಹಚ್ಚಿದ್ದರು.

ದುರ್ಯೋಧನ–1ನೇ ಪಾತ್ರಕ್ಕೆ ಪಿಎಸ್ಐ ಕೇಶವಮೂರ್ತಿ ಪಿ.ವೈ, ಎಎಸ್ಐ ನಾಗರಾಜು ಎಂ., ದುರ್ಯೋಧನ–2ನೇ ಪಾತ್ರದಲ್ಲಿ ಎಎಸ್ಐ ಡಿ.ಸಿ. ಹನುಮಂತೇಗೌಡ, ದುಶ್ಯಾಸನನಾಗಿ ಎಎಸ್ಐ ಮುತ್ತರಾಜು, ವಿಧುರನಾಗಿ ಕಾನ್ಸ್ಟೆಬಲ್ ಎಂ.ಎಸ್. ಕುಮಾರ್, ಕರ್ಣನಾಗಿ ಹೆಡ್ ಕಾನ್ಸ್ಟೆಬಲ್ ಎಂ.ಪಿ. ನಾಗೇಶ್, ಶಕುನಿಯಾಗಿ ಹೆಡ್ ಕಾನ್ಸ್ಟೆಬಲ್ ಕಬ್ಬಾಳು ಲೋಕೇಶ್, ಸಾತ್ಯಕಿ–ಮಂತ್ರಿಯಾಗಿ ಹೆಡ್ ಕಾನ್ಸ್ಟೆಬಲ್ ತಿಪ್ಪೆಸಾಮಿ, ಭೀಷ್ಮನಾಗಿ ಎಆರ್ಎಸ್ಐ ಪ್ರಕಾಶ್, ದ್ರೋಣನಾಗಿ ಹೆಡ್ ಕಾನ್ಸ್ಟೆಬಲ್ ರಾಜಶೇಖರ್, ಸೈನ್ಯಾದಿಯಾಗಿ ಹೆಡ್ ಕಾನ್ಸ್ಟೆಬಲ್ ಎಚ್.ಸಿ. ರಾಜು, 1ನೇ ರುಕ್ಮಿಣಿ ಮತ್ತು ಉತ್ತರೆಯಾಗಿ ಪ್ರಿಯಾಂಕ, 2ನೇ ರುಕ್ಮಿಣಿಯಾಗಿ ಶರ್ಮಿಳಾ, ದ್ರೌಪದಿ ಹಾಗೂ ಕುಂತಿ ಪಾತ್ರದಲ್ಲಿ ದೀಪಿಕಾ ನಟಿಸಿದರು.

ಅರ್ಚಕರಹಳ್ಳಿಯ ಶಿವಾನಂದಮೂರ್ತಿ ನಾಟಕ ನಿರ್ದೇಶನ ಮಾಡಿದರು. ಕನಕಪುರದ ಬನವಾಸಿಯ ಕರಿಯಪ್ಪ ರಂಗ ಸಜ್ಜಿಕೆ ಹಾಗೂ ಚನ್ನಪಟ್ಟಣದ ಡಾ. ರಂಗನಾಥ್, ಡಾ. ನಟರಾಜ್ ಅವರ ತಂಡ ತಬಲ ವಾದ್ಯಗೋಷ್ಠಿ ನಡೆಸಿಕೊಟ್ಟಿತು.

ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಆರ್. ಶ್ರೀನಿವಾಸ್ಗೌಡ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ರಾಮಚಂದ್ರಪ್ಪ ಮತ್ತು ರಾಜೇಂದ್ರ ಅವರು ನಾಟಕಕ್ಕೆ ಚಾಲನೆ ನೀಡಿದರು. ಡಿವೈಎಸ್ಪಿಗಳಾದ ಶ್ರೀನಿವಾಸ್, ಕೆ.ಸಿ. ಗಿರಿ, ಪ್ರವೀಣ್, ಕೆಂಚೇಗೌಡ, ರಘು ಹಾಗೂ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.