ರಾಮನಗರ: ಜಿಲ್ಲಾ ಕೇಂದ್ರವಾದ ರಾಮನಗರದಲ್ಲಿ ವಾಹನ ನಿಲುಗಡೆಗೆ (ಪಾರ್ಕಿಂಗ್) ಯಾವುದೇ ಲಂಗು ಲಗಾಮಿಲ್ಲದೆ ಅವ್ಯವಸ್ಥೆಯಿಂದ ಕೂಡಿದೆ. ನಿಲುಗಡೆ ನಿಯಮಕ್ಕೆ ಕಿಮ್ಮತ್ತಿಲ್ಲವಾಗಿದೆ. ಯಾರು, ಎಲ್ಲಿ ಬೇಕಾದರೂ, ಮನ ಬಂದಂತೆ ತಮ್ಮ ವಾಹನವನ್ನು ನಿಲ್ಲಿಸಿ ಹೋಗಬಹುದು. ಅದು ಹೆದ್ದಾರಿಯೇ ಆಗಿರಲಿ, ಜನನಿಬಿಡ ಮುಖ್ಯ ರಸ್ತೆಯೇ ಇರಲಿ, ಮಾರುಕಟ್ಟೆಯೇ ಆಗಿರಲಿ, ಸರ್ಕಾರಿ ಕಚೇರಿ... ಹೀಗೆ ಎಲ್ಲಿಯಾದರೂ ಆಗಿರಬಹುದು.

ನಗರದ ಹೃದಯ ಭಾಗವನ್ನು ಹಾದು ಹೋಗಿರುವ ಬೆಂಗಳೂರು–ಮೈಸೂರು ಹಳೆ ರಾಷ್ಟ್ರೀಯ ಹೆದ್ದಾರಿ, ಜೂನಿಯರ್ ಕಾಲೇಜು ರಸ್ತೆ, ರೈಲು ನಿಲ್ದಾಣ ರಸ್ತೆ, ಮುಖ್ಯರಸ್ತೆ, ಎಂ.ಜಿ. ರಸ್ತೆ, ಮಾಗಡಿ ರಸ್ತೆ, ಕೆಂಗಲ್ ಹನುಮಂತಯ್ಯ ವೃತ್ತ, ಮಾರುಕಟ್ಟೆ ರಸ್ತೆ, ಎಸ್ಪಿ ಕಚೇರಿ ವೃತ್ತ, ಕೋರ್ಟ್ ರಸ್ತೆ, ಕೆಎಸ್ಆರ್ಟಿಸಿ ಬಸ್ ನಿಲ್ದಾಣ ವೃತ್ತ ಸೇರಿದಂತೆ ನಗರವನ್ನು ಒಂದು ಸುತ್ತು ಹಾಕಿದರೆ ಇಲ್ಲಿನ ಪಾರ್ಕಿಂಗ್ ವ್ಯವಸ್ಥೆ ಹೇಗಿದೆ ಎಂಬುದು ಕಣ್ಣಿಗೆ ರಾಚುತ್ತದೆ.

ಅರ್ಧ ರಸ್ತೆವರೆಗೆ ನಿಲುಗಡೆ: ಬೆಂಗಳೂರು–ಮೈಸೂರು ಹಳೆ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಇಲ್ಲಿನ ರೇಷ್ಮೆಗೂಡು ಮಾರುಕಟ್ಟೆ ಎದುರು ನಿತ್ಯ ಅರ್ಧದಷ್ಟು ರಸ್ತೆಯನ್ನು ದ್ವಿಚಕ್ರ ವಾಹನಗಳು ಬೆಳಿಗ್ಗೆಯಿಂದ ಮಧ್ಯಾಹ್ನ 12ರವರೆಗೆ ಅತಿಕ್ರಮಿಸಿರುತ್ತವೆ. ಸ್ಥಳೀಯವಾಗಷ್ಟೇ ಅಲ್ಲದೆ, ವಿವಿಧ ಕಡೆಯಿಂದ ಬರುವ ರೈತರು ಹಾಗೂ ವ್ಯಾಪಾರಿಗಳು ಮಾರುಕಟ್ಟೆ ಎದುರಿಗೇ ವಾಹನಗಳನ್ನು ಮನಬಂದಂತೆ ನಿಲ್ಲಿಸಿರುತ್ತಾರೆ.

ಮಾರುಕಟ್ಟೆ ಎದುರು ವಾಹನಗಳನ್ನು ಅರ್ಧ ರಸ್ತೆವರೆಗೆ ನಿಲ್ಲಿಸುವುದರಿಂದ ಆಗುತ್ತಿರುವ ಸಮಸ್ಯೆಗಳ ಕುರಿತು, ನಗರದಲ್ಲಿ ಇತ್ತೀಚೆಗೆ ನಡೆದಿದ್ದ ಕೆಡಿಪಿ ಸಭೆಯಲ್ಲಿ ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಅವರೇ ಗಮನ ಸೆಳೆದಿದ್ದರು. ಸಮಸ್ಯೆ ಪರಿಹರಿಸುವಂತೆ ಮಾರುಕಟ್ಟೆಯ ಉಪ ನಿರ್ದೇಶಕರು ಮತ್ತು ಪೊಲೀಸರಿಗೂ ಸಲಹೆ ನೀಡಿದ್ದರು. ಆದರೂ, ಸಮಸ್ಯೆಗೆ ಮುಕ್ತಿ ಸಿಕ್ಕಿಲ್ಲ.

‘ರಸ್ತೆಯಲ್ಲಿ ಓಡಾಡುವ ವಾಹನಗಳಿಗೆ ತೊಂದರೆಯಾಗುವಂತೆ ವಾಹನಗಳನ್ನು ನಿಲ್ಲಿಸಿದ್ದರೂ ಮಾರುಕಟ್ಟೆ ಅಧಿಕಾರಿಗಳಾಗಲಿ ಅಥವಾ ಸಂಚಾರ ಪೊಲೀಸರಾಗಲಿ ಕ್ಯಾರೇ ಎನ್ನುವುದಿಲ್ಲ. ಮಾರುಕಟ್ಟೆ ಬಳಿಯೇ ಎರಡು ಕಡೆ ಯೂಟರ್ನ್ ಇವೆ. ಜೊತೆಗೆ ರೆಸ್ತೆಯುಬ್ಬು ಸಹ ಇದೆ. ಎರಡೂ ಕಡೆಯಿಂದ ವಾಹನಗಳು ವೇಗವಾಗಿ ಬರುತ್ತಿರುತ್ತವೆ. ಈ ವೇಳೆ ನಡೆಯುವ ಸಣ್ಣಪುಟ್ಟ ಅಪಘಾತಗಳಿಗೆ ಲೆಕ್ಕವಿಲ್ಲ’ ಎಂದು ವ್ಯಾಪಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ವೃತ್ತಗಳಲ್ಲೇ ಅಸ್ತವ್ಯಸ್ತ: ನಗರದಲ್ಲಿ ಅತಿ ಹೆಚ್ಚು ಜನಸಂದಣಿ ಪ್ರದೇಶಗಳಾದ ಕೆಎಸ್ಆರ್ಟಿಸಿ ಬಸ್ ನಿಲ್ದಾಣ ವೃತ್ತ (ಐಜೂರು ವೃತ್ತ), ಕೆಂಗಲ್ ಹನುಮಂತಯ್ಯ ವೃತ್ತ (ಹಳೆ ಬಸ್ ನಿಲ್ದಾಣ ವೃತ್ತ), ಕೆಂಪೇಗೌಡ ವೃತ್ತ, ರೈಲು ನಿಲ್ದಾಣ ವೃತ್ತಗಳಲ್ಲೇ ವಾಹನಗಳ ನಿಲುಗಡೆಯು ಅಸ್ತವ್ಯಸ್ತವಾಗಿರುವುದು ಎದ್ದು ಕಾಣುತ್ತದೆ. ಮನಸ್ಸಿಗೆ ಬಂದಂತೆ ಸವಾರರು ತಮ್ಮ ವಾಹನಗಳನ್ನು ನಿಲ್ಲಿಸಿರುತ್ತಾರೆ.

ಬಸ್ ನಿಲ್ದಾಣ ವೃತ್ತದ ಮೆಡಿಕಲ್ ಎದುರು ಸೇರಿದಂತೆ ನಾಲ್ಕೂ ದಿಕ್ಕುಗಳಲ್ಲೂ ಸವಾರರು ಯದ್ವಾತದ್ವಾ ವಾಹನಗಳನ್ನು ನಿಲ್ಲಿಸುತ್ತಾರೆ. ನಗರದಲ್ಲಿರುವ ಏಕೈಕ ಸಂಚಾರ ಸಿಗ್ನಲ್ ವೃತ್ತ ಇದಾಗಿದ್ದು, ಇಲ್ಲಿ ನಿತ್ಯ ಸಂಚಾರ ಪೊಲೀಸರು ಕರ್ತವ್ಯದಲ್ಲಿದ್ದರೂ ನಿಲುಗಡೆಯ ಅವ್ಯವಸ್ಥೆಯನ್ನು ಕೇಳುವವರಿಲ್ಲವಾಗಿದೆ. ಇನ್ನು ಬಸ್ ನಿಲ್ದಾಣದಿಂದ ಕೆಂಪೇಗೌಡ ವೃತ್ತದವರೆಗಿನ ರಸ್ತೆಯಲ್ಲಿನ ಪಾರ್ಕಿಂಗ್ ಸ್ಥಿತಿ ಅಧೋಗತಿ ತಲುಪಿದೆ.

ನಗರದ ಬಸ್ ನಿಲ್ದಾಣ ಸೇರಿದಂತೆ ಹಲವೆಡೆ ಮನಬಂದಂತೆ ವಾಹನ ನಿಲ್ಲಿಸುವುದರಿಂದ ಸಂಚಾರಕ್ಕೆ ತೊಂದರೆಯಾಗುತ್ತದೆ. ವಾಹನ ನಿಲುಗಡೆ ನಿಯಮವನ್ನು ವ್ಯವಸ್ಥಿತವಾಗಿ ಜಾರಿಗೆ ತರಬೇಕು

-ನಾಗಚಂದ್ರ, ವಕೀಲ ರಾಮನಗರ

ವಾಹನ ನಿಲುಗಡೆಗೆ ಸಂಬಂಧಿಸಿದ ನಿಯಮಗಳನ್ನು ಪೊಲೀಸರು ಕಟ್ಟುನಿಟ್ಟಾಗಿ ಜಾರಿಗೊಳಿಸುವುದೊಂದೇ ವಾಹನ ನಿಲುಗಡೆ ಅವ್ಯವಸ್ಥೆ ನಿವಾರಣೆಗೆ ಇರುವ ಏಕೈಕ ಪರಿಹಾರ. ಪೊಲೀಸರು ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು

-ಎಲ್. ಜೀವನ್ ಕೆಆರ್ಎಸ್ ಪಕ್ಷ ರಾಮನಗರ

ರೇಷ್ಮೆಗೂಡು ಮಾರುಕಟ್ಟೆ ಸೇರಿದಂತೆ ಕೆಲವೆಡೆ ಮನಬಂದಂತೆ ವಾಹನ ನಿಲ್ಲಿಸುವುದು ಕಂಡುಬಂದಿದೆ. ಈ ಕುರಿತು ಸಂಬಂಧಪಟ್ಟವರೊಂದಿಗೆ ಸಭೆ ನಡೆಸಿ ಪರಿಹಾರ ಕಂಡುಕೊಳ್ಳಲಾಗುವುದು

- ಯಶವಂತ್ ವಿ. ಗುರುಕರ್ ಜಿಲ್ಲಾಧಿಕಾರಿ

ನಗರದಲ್ಲಿ ವಾಹನಗಳ ನಿಲುಗಡೆಗೆ ನಿಗದಿತ ಸ್ಥಳಗಳನ್ನು ನಗರಸಭೆ ಕಡೆಯಿಂದ ನಿರ್ದಿಷ್ಟವಾಗಿ ಗುರುತಿಸಿಲ್ಲ. ವಾಹನಗಳ ದಟ್ಟಣೆಗೆ ಅನುಗುಣವಾಗಿ ಪೊಲೀಸ್ ಇಲಾಖೆಯರು ಸ್ಥಳ ನಿಗದಿಪಡಿಸುತ್ತಾರೆ -ಜಯಣ್ಣ ಪೌರಾಯುಕ್ತ ರಾಮನಗರ

ನಿಲುಗಡೆ ಸ್ಥಳಗಳನ್ನೇ ಗುರುತಿಸಿಲ್ಲ

ನಗರದ ಯಾವ ರಸ್ತೆಗಳಲ್ಲೂ ವಾಹನಗಳ ನಿಲುಗಡೆಗೆ ಸ್ಥಳಗಳನ್ನೇ ಸರಿಯಾಗಿ ಗುರುತಿಸಿಲ್ಲ. ಸದ್ಯ ಮುಖ್ಯರಸ್ತೆಯ ಜನಾರ್ದನ ಹೋಟೆಲ್ ಬಳಿಯಷ್ಟೇ ಪಾರ್ಕಿಂಗ್ಗೆ ಸಂಬಂಧಿಸಿದ ಒಂದು ಸೂಚನಾ ಫಲಕವಿದೆ. ಉಳಿದಂತೆ ಎಲ್ಲಿಯೂ ಫಲಕಗಳಿಲ್ಲ. ಇಷ್ಟಕ್ಕೂ ನಗರಸಭೆಯವರು ಪಾರ್ಕಿಂಗ್ ಸ್ಥಳಗಳನ್ನು ಸಹ ಗುರುತಿಸಿಲ್ಲ. ಹಾಗಾಗಿ ಪೊಲೀಸರು ಸಹ ಅಸಹಾಯಕರಂತೆ ಎಲ್ಲವನ್ನೂ ಸಂಭಾಳಿಸಿಕೊಂಡು ಹೋಗಬೇಕಾದ ಸ್ಥಿತಿ ಇದೆ. ಅಲ್ಲದೆ ಯಾವ ರಸ್ತೆಗಳಲ್ಲೂ ಪಾರ್ಕಿಂಗ್ ಲೈನ್ ಕಾಣುವುದೇ ಇಲ್ಲ. ಯಾರೋ ಒಬ್ಬ ರಸ್ತೆ ಮಧ್ಯೆಯೇ ವಾಹನ ನಿಲ್ಲಿಸಿದರೆ ಜನ ಬೈದುಕೊಂಡು ಆತ ಬರುವವರೆಗೆ ಕಾದು ನಂತರ ಮುಂದಕ್ಕೆ ಹೋಗಬೇಕಾದ ಸ್ಥಿತಿ ಸಾಮಾನ್ಯವಾಗಿದೆ.

ದಂಡಾಸ್ತ್ರ: ಆಟಕ್ಕುಂಟು ಲೆಕ್ಕಕ್ಕಿಲ್ಲ

ನಿಗದಿತ ಸ್ಥಳಗಳಲ್ಲಿ ಹಾಗೂ ವಾಹನಗಳ ಸಂಚಾರಕ್ಕೆ ತೊಂದರೆಯಾಗದಂತೆ ವಾಹನಗಳನ್ನು ನಿಲ್ಲಿಸಬೇಕೆಂಬ ನಿಯಮವಿದೆ. ವಾಹನಗಳ ಸವಾರರು ನಿಯಮ ಉಲ್ಲಂಘನೆ ಮಾಡಿದರೆ ಸಂಚಾರ ಪೊಲೀಸರು ಅಂತಹವರಿಗೆ ₹500 ದಂಡ ವಿಧಿಸಲು ಅವಕಾಶವಿದೆ. ಆದರೆ ನಗರದಲ್ಲಿ ಆ ರೀತಿ ದಂಡಾಸ್ತ್ರ ಪ್ರಯೋಗವಾಗುವುದು ತೀರಾ ಕಡಿಮೆ. ‘ನಗರದ ಮುಖ್ಯರಸ್ತೆ ಸೇರಿದಂತೆ ಕೆಲ ರಸ್ತೆಗಳಲ್ಲಿ ವಾಹನಗಳನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸುವುದು ಕಂಡುಬಂದರೆ ಎಚ್ಚರಿಕೆ ನೀಡುತ್ತೇವೆ. ಎಚ್ಚರಿಕೆ ಕಡೆಗಣಿಸಿ ವಾಹನ ನಿಲ್ಲಿಸಿ ಹೋದರೆ ಚಕ್ರವನ್ನು ಲಾಕ್ ಮಾಡಿ ಅವರಿಗೆ ದಂಡ ವಿಧಿಸುತ್ತೇವೆ. ನಗರವು ಅಷ್ಟಾಗಿ ಬೆಳವಣಿಗೆಯಾಗಿಲ್ಲದಿರುವುದರಿಂದ ಇಲ್ಲಿ ವಾಹನಗಳ ನಿಲುಗಡೆಯು ಅಷ್ಟೊಂದು ದೊಡ್ಡ ಸಮಸ್ಯೆಯಾಗಿ ಉದ್ಭವಿಸಿಲ್ಲ’ ಎನ್ನುತ್ತಾರೆ ಸಂಚಾರ ಪೊಲೀಸರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.