ರಾಮನಗರ: ಸದಾ ಕೆಲಸದ ಒತ್ತಡದಲ್ಲಿ ಇರುವ ಅಧಿಕಾರಿಗಳು, ಜನಪ್ರತಿನಿಧಿಗಳು ಶುಕ್ರವಾರ ಯೋಗದ ಮೂಡ್ನಲ್ಲಿದ್ದರು. ಜಿಲ್ಲಾ ಕ್ರೀಡಾಂಗಣದ ವೇದಿಕೆಯಲ್ಲಿ ಜನಸಾಮಾನ್ಯರೊಟ್ಟಿಗೆ ತಾವೂ ಯೋಗಾಭ್ಯಾಸದಲ್ಲಿ ತೊಡಗಿಸಿಕೊಂಡರು.

ಜಿಲ್ಲಾಡಳಿತದ ಸಹಯೋಗದಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಸಮಿತಿ, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ, ಶಾಂತಿನಕೇತನ ಸಂಸ್ಥೆ, ಆರ್ಟ್ ಆಫ್ ಲಿವಿಂಗ್, ಶ್ರೀ ಕೆಂಗಲ್ ಹನುಮಂತಯ್ಯ ಸ್ಪೋಟ್ಸ್ ಕ್ಲಬ್, ಎಸ್ಡಿಎಂ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜು (ಧರ್ಮಸ್ಥಳ ಶಾಂತಿವನ) ಸಹಯೋಗದೊಂದಿಗೆ ಆಯೋಜಿಸಿದ್ದ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಬೆಳಗ್ಗೆ 5.45ರಿಂದ 7.30 ಗಂಟೆವರೆಗೆ ನೆರೆದ ನೂರಾರು ಆಸಕ್ತರು ಯೋಗಾಸನಗಳನ್ನು ಅಭ್ಯಸಿಸಿದರು.

ಮೂರು ಬಾರಿ ಓಂಕಾರ, ಶ್ವಾಸಕ್ರಿಯೆ ಶುದ್ಧಿಕರಣ, ಸೂರ್ಯ ನಮಸ್ಕಾರದೊಂದಿಗೆ ಯೋಗಾಭ್ಯಾಸಕ್ಕೆ ಚಾಲನೆ ದೊರೆಯಿತು. ನಂತರದಲ್ಲಿ ಅರ್ಧಕಟಿ ಚಕ್ರಾಸನ, ಅರ್ಧಚಕ್ರಾಸನ, ಉತ್ತಾನಾಸನ, ತ್ರಿಕೋನಾಸನ, ವಿರಭದ್ರಾಸನ-, ಕುಳಿತು ಮಾಡುವ ಆಸನಗಳಾದ ಬದ್ಧಕೋನಾಸನ, ಉಪವಿಷ್ಟಕೋನಾಸನ, ಪದ್ಮಾಸನ, ಮರೀಚಾಸನ, ಪಶ್ಚಿಮೋತ್ತಾನಾಸನ, ಉಷ್ಟ್ರಾಸನ, ಭಾರಧ್ವಾಜಾಸನಗಳು ಪ್ರದರ್ಶನಗೊಂಡವು. ಬಳಿಕ ಮಲಗಿ ಮಾಡುವ ಆಸನಗಳಾದ ಭುಜಂಗಾಸನ, ಧನುರಾಸನ, ಮಕರಾಸನ, ದ್ವಿಪಾದಶಲಾಭಾಸನ, ಅಧೋಮುಖ ಶ್ವಾನಾಸನ ಮತ್ತು ಪ್ರಾಣಾಯಮಗಳಾದ ಅನುಲೋಮ ವಿಲೋಮ ಪ್ರಾಣಾಯಾಮ, ನಾಡಿ ಶೋಧನ, ಭ್ರಾಮರಿ ಹಾಗೂ ಧ್ಯಾನ, ಯೋಗಮಂತ್ರ, ಶಾಂತಿಮಂತ್ರಗಳು ಪ್ರಸ್ತುತಗೊಂಡವು. ಕೆಂಗಲ್ ಸ್ಪೋಟ್ಸ್ ಕ್ಲಬ್ನ ಶಿವಪ್ರಕಾಶ್ ಹೇಳಿಕೊಟ್ಟರು.

ಜಿ.ಪಂ. ಸಿಇಓ ಮುಲ್ಲೈ ಮುಹಿಲನ್, ಉಪವಿಭಾಗಾಧಿಕಾರಿ ಕೃಷ್ಣಮೂರ್ತಿ, ತಹಶೀಲ್ದಾರ್ ರಾಜು, ತಾಲೂಕು ಪಂಚಾಯಿತಿ ಅಧ್ಯಕ್ಷ ಗಾಣಕಲ್ ನಟರಾಜು, ಮುಖಂಡ ಕೆ.ರಾಜು ವೇದಿಕೆಯಲ್ಲಿ ತಾವೂ ಯೋಗಾಭ್ಯಾಸ ಮಾಡಿದರು.

ಮುಲ್ಲೈ ಮುಹಿಲನ್ ಮಾತನಾಡಿ, ಮನಸ್ಸನ್ನು ಸ್ಥಿಮಿತದಲ್ಲಿ ಇಡಲು ಯೋಗದಿಂದ ಸಾಧ್ಯವಿದೆ. ಕಾರ್ಯದ ಒತ್ತಡಗಳಿಂದ ಮನಸ್ಸು ಖಿನ್ನತೆಗೆ ಒಳಗಾಗುತ್ತಿರುವ ಈ ಸಂದರ್ಭದಲ್ಲಿ ದೇಹ, ಮನಸ್ಸಿನ ಸಮತೋಲನಕ್ಕೆ ಯೋಗ ಅತ್ಯವಶ್ಯವಾಗಿದೆ ಎಂದರು.

ಗಾಣಕಲ್ ನಟರಾಜು ಮಾತನಾಡಿ, ಕೇವಲ ಆಸನಗಳನ್ನು ಮಾಡುವುದು ಯೋಗ ಅಲ್ಲ. ಮನಸ್ಸನ್ನು ನಿರಾಳ ಮಾಡುವುದು ಯೋಗ. ಶರೀರವನ್ನು ಬಾಗಿಸುವುದು ಮನಸ್ಸು, ಅರಿವಿನ ಮೂಲವೇ ಯೋಗ. ಎಲ್ಲರೂ ಯೋಗದ ಒಳಗೆ ಬಂದರೆ ವೈಯಕ್ತಿಕ, ಸಾಮಾಜಿಕ ಬದುಕು ಸ್ವಾಸ್ಥ್ಯದಿಂದ ಕೂಡಿರುತ್ತದೆ ಎಂದರು.

ಪ್ರಾಣಾಯಾಮ ಮಾಡುವುದರಿಂದ ಆಮ್ಲಜನಕ ಹೆಚ್ಚಿಗೆ ಸಿಗುತ್ತದೆ. ಇದರಿಂದ ಮಿದುಳು, ಹೃದಯಕ್ಕೆ ಒಳ್ಳೆಯದು. ಯೋಗಾಸನದಿಂದ ನಮ್ಮ ಶರೀರವನ್ನು ಹೊಸ ಶರೀರವಾಗಿ ಮಾರ್ಪಡಿಸಿಕೊಳ್ಳಬಹುದು ಎಂದು ಹೇಳಿದರು.

ಆಯುಷ್ ಅಧಿಕಾರಿ ರಾಜಲಕ್ಷ್ಮಿ ಮಾತನಾಡಿ, ಉತ್ತಮ ಮನಸ್ಸುಗಳಿಂದ, ಆರೋಗ್ಯಪೂರ್ಣ ಜನರಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಹಾಗಾಗಿ ಯೋಗ, ಧ್ಯಾನದ ಮೊರೆ ಹೋಗುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದರು.

ಶಾಲೆ–ಕಾಲೇಜು ವಿದ್ಯಾರ್ಥಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಾರ್ವಜನಿಕರು ಯೋಗಾಭ್ಯಾಸದಲ್ಲಿ ಪಾಲ್ಗೊಂಡರು.

ಒತ್ತಡದ ಜೀವನದಿಂದಾಗಿ ಇಂದು ಜನರ ಮಾನಸಿಕ ಆರೋಗ್ಯ ಹದಗೆಡುತ್ತಿದೆ. ದೇಹ–ಮನಸ್ಸನ್ನು ಚೈತನ್ಯಪೂರ್ಣವಾಗಿ ಇಡಲು ಯೋಗಾಭ್ಯಾಸ ಅತ್ಯಗತ್ಯವಾಗಿದೆ
- ಮುಲ್ಲೈ ಮುಹಿಲನ್,ಜಿ.ಪಂ. ಸಿಇಒ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.