ಶಿವಮೊಗ್ಗ: ಇಲ್ಲಿನ ಗಂಗಾಪರಮೇಶ್ವರಿ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಭಾನುವಾರ ಬಾಪೂಜಿ ನಗರದಲ್ಲಿರುವ ಗಂಗಾಮತ ವಿದ್ಯಾರ್ಥಿ ನಿಲಯದಲ್ಲಿ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿದ ಅಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ಆರ್.ಅವಿನ್, ‘ನಮ್ಮಲ್ಲಿ ಜನಸಂಖ್ಯೆ ಇದೆ. ಆದರೆ, ಸಂಘಟನೆಯ ಕೊರತೆ ಇದೆ. ಸಹಕಾರ ಸಂಘಗಳು ಬೆಳೆಯಬೇಕಾದರೆ ಷೇರುದಾರರ ಸಂಖ್ಯೆ ಹೆಚ್ಚಾಗಬೇಕು. ಪಡೆದ ಸಾಲವನ್ನು ತಪ್ಪದೇ ಮರುಪಾವತಿ ಮಾಡಬೇಕು. ಸಂಘವು ಆದಷ್ಟು ಶೀಘ್ರವೇ ಬ್ಯಾಂಕ್ ಆಗಿ ಪರಿವರ್ತನೆ ಆಗಲಿ’ ಎಂದರು.

ಕೆಎಸ್ಆರ್ಟಿಸಿ ಡಿಪೊ ಮ್ಯಾನೇಜರ್ ಎಂ.ರಾಮಚಂದ್ರಪ್ಪ, ಯಾವುದೇ ಸಮಾಜ ಶೈಕ್ಷಣಿಕ, ಆರ್ಥಿಕವಾಗಿ ಮುನ್ನೆಲೆಗೆ ಬರಬೇಕು ಎಂದರೆ ಸಹಕಾರ, ಸದಸ್ಯರ ಪಾತ್ರ ದೊಡ್ಡದಿದೆ. ಎಲ್ಲರೂ ಸಂಘಟಿತರಾಗಬೇಕು. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಂಘ ತಲುಪಬೇಕು ಎಂದರು.

ಗಂಗಾಮತ ಸಮಾಜದ ಉಪಾಧ್ಯಕ್ಷ ಎಸ್.ಬಿ. ಅಶೋಕ್ ಕುಮಾರ್, ಗಾಂಧಿ ಬಸಪ್ಪನವರು ಒಳ್ಳೆಯ ಉದ್ದೇಶದಿಂದ ಈ ಸಂಘ ಸ್ಥಾಪನೆ ಮಾಡಿದರು. ಇಲ್ಲಿ ಸಾಲ ಪಡೆದವರು ತಪ್ಪದೇ ಮರುಪಾವತಿ ಮಾಡಬೇಕು. ವಸೂಲಾತಿಗೆ ಬಿಗಿ ಕ್ರಮ ಅನುಸರಿಸಬೇಕು ಎಂದರು.

ಆರುಂಡಿ ಶ್ರೀನಿವಾಸ್, ಎಸ್.ಸಿ.ವಿಶ್ವನಾಥ, ಜೆ.ವಿಶ್ವನಾಥ್ ಅವರನ್ನು ಸನ್ಮಾನಿಸಲಾಯಿತು.

ಸಂಘದ ಅಧ್ಯಕ್ಷ ಎ.ಹಾಲೇಶಪ್ಪ ಅಧ್ಯಕ್ಷತೆ ವಹಿಸಿದ್ದರು. ಎಂಜಿನಿಯರ್ ಎಂ.ವಿ.ಲೋಕೇಶ್, ಗಂಗಾಮತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಬಿ.ಕೆಂಚಪ್ಪ, ಮಹಿಳಾ ಸಂಘದ ಅಧ್ಯಕ್ಷೆ ರೂಪಾ ಹೇಮಂತ ಕುಮಾರ್, ನಿರ್ದೇಶಕರಾದ ಪಿ.ನಾಗೇಶ್, ಟಿ.ಎಸ್.ಮಂಜುನಾಥ್, ಮಂಜುಳಾ ಸುಲ್ತಾನ್, ರಂಗನಾಥ್ ಪಿಳ್ಳಂಗೆರೆ, ರಾಜೇಶ್, ಶ್ರೀನಿವಾಸ್ ಕೂಡಲಿ, ಎಚ್.ಎಂ.ಜಗನ್ನಾಥ, ಕಾರ್ಯದರ್ಶಿ ಹರೀಶ್, ಹನುಮೇಶ್ ಇದ್ದರು. ಲೆಕ್ಕ ಪರಿಶೋಧಕ ಆರ್. ಜನಾರ್ಧನ ಲೆಕ್ಕಪತ್ರ ಮಂಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.