ಮೇಳದ ವೀಕ್ಷಣೆಗೆ ಬಂದಿದ್ದ ಜನರು
ಮೇಳದಲ್ಲಿ ಪ್ರದರ್ಶನ ಮಾರಾಟಕ್ಕೆ ಇಟ್ಟ ಯಂತ್ರೋಪಕರಣಗಳ ಮಾಹಿತಿ ಪಡೆದ ಆಸಕ್ತರು
ಮೇಳದಲ್ಲಿ ಆಸಕ್ತರಿಂದ ಕೀಟ ಪ್ರಪಂಚದ ವೀಕ್ಷಣೆ
ಮೇಳದಲ್ಲಿ ಎತ್ತಿನ ಬಂಡಿಯ ಮಾದರಿ ವೀಕ್ಷಿಸಿದ ಸಾರ್ವಜನಿಕರು

ಕುಲಕಸುಬು ಎಂದು ಅಪ್ಪ ಹಾಕಿದ್ದ ಆಲದ ಮರವನ್ನೇ ಪೋಷಿಸುವುದು ಸಲ್ಲ. ಹವಾಮಾನ ಮಣ್ಣಿನ ಫಲವತ್ತತೆಗೆ ಅನುಗುಣವಾಗಿ ಹಾಗೂ ವಾಣಿಜ್ಯ ಮಹತ್ವ ಆಧರಿಸಿ ಬೆಳೆಗಳನ್ನು ಬೆಳೆಯಲು ರೈತರಿಗೆ ಪ್ರೋತ್ಸಾಹ ನೀಡಬೇಕು. ಇದಕ್ಕೆ ಸರ್ಕಾರ ಕೃಷಿ ವಿಶ್ವವಿದ್ಯಾಲಯ ಕೈಜೋಡಿಸಬೇಕು.
ಎಚ್.ಎಸ್.ಸುಂದರೇಶ ಸುಡಾ ಅಧ್ಯಕ್ಷ
ತ್ಯಾಗಿ ದಾಸೋಹಿ ಕಾಯಕ ಜೀವಿ ಹೀಗೆ ಗುಣ ವಿಶೇಷಗಳಲ್ಲಿಯೇ ರೈತ ಕಳೆದುಹೋಗುತ್ತಿದ್ದಾನೆ. ಸರ್ಕಾರ ಜನರು ವಿಶ್ವವಿದ್ಯಾಲಯದ ಅಧಿಕಾರಿಗಳು ಹೀಗೆ ಎಲ್ಲರ ಸಾಮೂಹಿಕ ಪ್ರಯತ್ನ ಕೃಷಿಕನ ಬದುಕನ್ನು ಸಮೃದ್ಧಗೊಳಿಸಿದರೆ ಮಾತ್ರ ದೇಶದ ಕಲ್ಯಾಣವಾಗುತ್ತದೆ.
ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಬೆಕ್ಕಿನಕಲ್ಮಠ ಶಿವಮೊಗ್ಗ