ಮಂಗಳವಾರ, ಆಗಸ್ಟ್ 16, 2022
29 °C

ಕೋವಿಡ್ ಪೀಡಿತರ‌ ಶವ ಸಂಸ್ಕಾರಕ್ಕೆ ನಿಯೋಜನೆಗೊಂಡಿದ್ದ ನೌಕರ ಕೋವಿಡ್‌ನಿಂದಲೇ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಕೋವಿಡ್‌ನಿಂದ ಮೃತಪಟ್ಟವರ ಶವ ಸಂಸ್ಕಾರಕ್ಕೆ ನಗರ ಪಾಲಿಕೆ ನಿಯೋಜಿಸಿದ್ದ ಹೊರಗುತ್ತಿಗೆ ನೌಕರ ಪಾಪಾನಾಯ್ಕ (35) ಅವರು ಕೋವಿಡ್‌ನಿಂದಲೇ ಸೋಮವಾರ ಜೀವ ಕಳೆದುಕೊಂಡಿದ್ದಾರೆ.

ನಗರದ ರೋಟರಿ ಚಿತಾಗಾರದಲ್ಲಿ ಕೋವಿಡ್ ಸೋಂಕಿತರ ಶವ ದಹಿಸಲು ಮೂವರು ಸಿಬ್ಬಂದಿ ನಿಯೋಜಿಸಲಾಗಿತ್ತು. ಶಂಕರನಿಗೆ ಸಹಾಯಕನಾಗಿ ಪಾಪಾನಾಯ್ಕ ಕೆಲಸ ಮಾಡುತ್ತಿದ್ದರು. ಪಾಲಿಕೆಯಲ್ಲಿ ಕೆಲಸ ಮಾಡುತ್ತಿದ್ದ ಅವರನ್ನು ಕೋವಿಡ್ ಆರಂಭವಾದ ನಂತರ ಶವಾಗಾರಕ್ಕೆ ನಿಯೋಜಿಸಲಾಗಿತ್ತು. 

ನಿತ್ಯವೂ ಶವಸಂಸ್ಕಾರ ಕಾರ್ಯ ನಿರ್ವಹಿಸುತ್ತಿದ್ದ ಅವರು ಸೆ.8ರಂದು ತೀವ್ರ ಉಸಿರಾಟದ ಸಮಸ್ಯೆಗೆ ಒಳಗಾಗಿದ್ದರು. ಮೆಗ್ಗಾನ್ ಕೋವಿಡ್‌ ಚಿಕಿತ್ಸಾ ಕೇಂದ್ರಕ್ಕೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ.

ಹೊಳೆಬೆನವಳ್ಳಿ ಹೊಸಮನೆ ತಾಂಡಾದ ಅವರಿಗೆ ಪತ್ನಿ, ಇಬ್ಬರು ಪುತ್ರರು ಇದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು