ಶಿವಮೊಗ್ಗ: ಇತ್ತೀಚೆಗೆ ಸುರಿದ ಮುಂಗಾರುಪೂರ್ವ ಭಾರೀ ಮಳೆಯಿಂದ ಕೊಯ್ಲು ಮಾಡಲಾಗದೇ ಜಿಲ್ಲೆಯ ಭತ್ತ ಬೆಳೆಗಾರರು ಸಂಕಷ್ಟಕ್ಕೆ ತುತ್ತಾಗಿದ್ದರು. ಈಗ ಮಾರುಕಟ್ಟೆಯಲ್ಲಿ ದಿಢೀರನೆ ಭತ್ತದ ಬೆಲೆ ಕುಸಿದಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಬೆಂಬಲ ಬೆಲೆಯಡಿ ಖರೀದಿ ಕೇಂದ್ರ ತೆರೆದು ಸರ್ಕಾರ ನೆರವಿಗೆ ಬರುವುದೇ ಎಂಬ ಆಸೆಗಣ್ಣಿನಿಂದ ಬೆಳೆಗಾರರು ಕಾಯುತ್ತಿದ್ದಾರೆ.

ಜಿಲ್ಲೆಯಲ್ಲಿ ಈ ಬಾರಿಯ ಬೇಸಿಗೆಯಲ್ಲಿ ಕಾಲುವೆ, ಕೆರೆ ನೀರಾವರಿ ಹಾಗೂ ಕೊಳವೆ ಬಾವಿ ಆಶ್ರಯಿಸಿ ಶಿವಮೊಗ್ಗ, ಭದ್ರಾವತಿ, ಶಿಕಾರಿಪುರ ಹಾಗೂ ಸೊರಬ ತಾಲ್ಲೂಕುಗಳಲ್ಲಿ 9,100 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿತ್ತು ಎಂದು ಕೃಷಿ ಇಲಾಖೆ ಮಾಹಿತಿ ನೀಡಿದೆ.

ಮೇ ಎರಡನೇ ವಾರದಿಂದ ಭತ್ತದ ಕೊಯ್ಲು ಆರಂಭವಾಗಿದೆ. ರೈತರು ಒಕ್ಕಲು ಮುಗಿಸಿ ಈಗ ಮಾರುಕಟ್ಟೆಗೆ ಭತ್ತ ತರುತ್ತಿದ್ದಾರೆ. ಆದರೆ ಭತ್ತದ ದರ ಏಕಾಏಕಿ ಕುಸಿದಿದೆ. ಹಂಗಾಮಿಗೆ ಮುನ್ನ ಕ್ವಿಂಟಲ್ಗೆ ₹ 2,500ರಿಂದ ₹ 2,600 ಇದ್ದ ಬೆಲೆ ಈಗ ₹ 1,600ರಿಂದ ₹ 1,700ಕ್ಕೆ ಕುಸಿದಿದೆ. ಇದರಿಂದ ಲಾಭ ಒತ್ತಟ್ಟಿಗಿರಲಿ ಬೆಳೆಗಾಗಿ ಮಾಡಿದ ಖರ್ಚೂ ಕೈಗೆಟುಕದ ಸ್ಥಿತಿಯಲ್ಲಿ ರೈತರಿದ್ದಾರೆ.

ಬೆಂಬಲಬೆಲೆ ಇಲ್ಲ :

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಬೆಂಬಲಬೆಲೆ ಯೋಜನೆಯಡಿ (ಎಂಎಸ್ಪಿ) ಪ್ರತೀ ಕ್ವಿಂಟಲ್ ಭತ್ತಕ್ಕೆ ₹ 2,320 ನಿಗದಿಪಡಿಸಲಾಗಿದೆ. ಶಿವಮೊಗ್ಗದಲ್ಲಿ ತೆರೆದಿದ್ದ ಖರೀದಿ ಕೇಂದ್ರ ಕಳೆದ ಮಾರ್ಚ್ 31ಕ್ಕೆ ಸ್ಥಗಿತಗೊಂಡಿದೆ. ಅಚ್ಚರಿಯ ಸಂಗತಿಯೇನೆಂದರೆ, ಖರೀದಿ ಕೇಂದ್ರ ತೆರೆದಾಗ ರೈತರು ಯಾರೂ ನೋಂದಾಯಿಸಿರಲಿಲ್ಲ. ಹೀಗಾಗಿ ಖರೀದಿ ಸಾಧ್ಯವಾಗದೇ ಮುಚ್ಚಿದ್ದೆವು ಎಂದು ಅಧಿಕಾರಿಗಳು ಹೇಳುತ್ತಾರೆ.

ಖರೀದಿ ಕೇಂದ್ರ ತೆಗೆದಾಗ ಜಿಲ್ಲೆಯ ರೈತರು ಆಗಷ್ಟೇ ಭತ್ತ ನಾಟಿ ಮಾಡಿದ್ದರು. ಆಗ ಹಂಗಾಮು ಇರದ ಕಾರಣ ಮುಕ್ತ ಮಾರುಕಟ್ಟೆಯಲ್ಲೂ ಭತ್ತಕ್ಕೆ ಕ್ವಿಂಟಲ್ಗೆ ₹ 2,900ರಿಂದ ₹ 3,100ರವರೆಗೆ ಬೆಲೆ ಇತ್ತು. ಸಹಜವಾಗಿಯೇ ಗೋದಾಮು, ಮನೆಗಳಲ್ಲಿ ಸಂಗ್ರಹಿಸಿಟ್ಟಿದ್ದ ಭತ್ತವನ್ನು ರೈತರು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದ್ದರು. ಖರೀದಿ ಕೇಂದ್ರದತ್ತ ಯಾರೂ ತಲೆ ಹಾಕಿರಲಿಲ್ಲ. ಈಗ ಮಾರುಟ್ಟೆಯಲ್ಲೂ ಬೆಲೆಯೂ ಇಲ್ಲ. ಎಂಎಸ್ಪಿಯಡಿ ಖರೀದಿಯ ಬೆಂಬಲವೂ ಇಲ್ಲ.

ವ್ಯತ್ಯಾಸ ತುಂಬಿಕೊಡಲಿ:

‘ಹಂಗಾಮು ಇಲ್ಲದಾಗ ಬೆಂಬಲಬೆಲೆ ಅಡಿ ಖರೀದಿ ಕೇಂದ್ರ ತೆರೆಯುತ್ತಾರೆ. ಭತ್ತದ ಕೊಯ್ಲು ಶುರು ಆದಾಗ ಖರೀದಿ ನಿಲ್ಲಿಸುತ್ತಾರೆ. ಈಗ ಮಾರುಕಟ್ಟೆಯಲ್ಲಿ ಕನಿಷ್ಠ ಬೆಂಬಲಬೆಲೆಗಿಂತಲೂ ಕ್ವಿಂಟಲ್ಗೆ ₹ 600ರಿಂದ ₹ 700 ಕಡಿಮೆ ದರ ಇದೆ. ಸರ್ಕಾರಕ್ಕೆ ತಕ್ಷಣ ಖರೀದಿ ಮಾಡಲು ಆಗದೇ ಹೋದರೆ ಬೆಳೆಗಾರನಿಗೆ ಮಾರುಕಟ್ಟೆ ಬೆಲೆಯಲ್ಲಿನ ವ್ಯತ್ಯಾಸ ತುಂಬಿಕೊಡಲಿ’ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಎಚ್.ಆರ್. ಬಸವರಾಜಪ್ಪ ಒತ್ತಾಯಿಸುತ್ತಾರೆ.

ಜಿಲ್ಲಾಡಳಿತದೊಂದಿಗೆ ಚರ್ಚೆ:

ಭತ್ತದ ಬೆಲೆ ಕುಸಿದು ರೈತರಿಗೆ ತೊಂದರೆ ಆಗಿದ್ದು, ಬೆಂಬಲಬೆಲೆ ಯೋಜನೆಯಡಿ ಖರೀದಿ ಕೇಂದ್ರ ತೆರೆಯುವ ಅಗತ್ಯವನ್ನು ಸೋಮವಾರ ಜಿಲ್ಲಾಧಿಕಾರಿ ಅವರನ್ನು ಭೇಟಿಯಾಗಿ ಚರ್ಚಿಸಲಾಙಗುವುದು. ನಂತರ ಆ ಬಗ್ಗೆ ಕ್ರಮ ವಹಿಸಲಾಗುವುದು’ ಎಂದು ಶಿವಮೊಗ್ಗದ ಅಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಉಪನಿರ್ದೇಶಕ ಆವಿನ್ ಹೇಳುತ್ತಾರೆ.

ಈಗ ಮಳೆಗಾಲ. ಮಾರುಕಟ್ಟೆಯಲ್ಲಿ ಬೆಲೆ ಸಿಗುತ್ತಿಲ್ಲ ಎಂದು ಭತ್ತ ಸಂಗ್ರಹಿಸಿಡಲೂ ಆಗದು. ಸರ್ಕಾರ ತುರ್ತಾಗಿ ಬೆಂಬಲಬೆಲೆ ಅಡಿ ಭತ್ತ ಖರೀದಿ ಕೇಂದ್ರ ಆರಂಭಿಸಿ ಬೆಳೆಗಾರರ ನೆರವಿಗೆ ಬರಲಿ
ಕೆ.ಪಿ.ಕೃಷ್ಣಪ್ಪ ಭತ್ತ ಬೆಳೆಗಾರ ಪುರದಾಳು

ಎಂಎಸ್ಪಿ ನಮ್ಮ ರೈತರಿಗೆ ನ್ಯಾಯವಾದ ಬೆಲೆ ಅಲ್ಲ. ಅದೂ ನಷ್ಟದ ಬೆಲೆ. ಅದರಲ್ಲೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಖರೀದಿ ಮಾಡದಿರುವುದು ನಾಚಿಕೆಗೇಡು. ಕೂಡಲೇ ಖರೀದಿ ಕೇಂದ್ರ ಆರಂಭಿಸಿ
ಎಚ್.ಆರ್. ಬಸವರಾಜಪ್ಪ ರಾಜ್ಯ ರೈತ ಸಂಘದ ಅಧ್ಯಕ್ಷ

ಜಿಲ್ಲೆಯಲ್ಲಿ ಭತ್ತ ಖರೀದಿ ಕೇಂದ್ರ ಆರಂಭಿಸಲು ಸಂಬಂಧಿಸಿದ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸುವ ಬಗ್ಗೆ ಪರಿಶೀಲಿಸಲಾಗುವುದು
ಗುರುದತ್ತ ಹೆಗಡೆ ಶಿವಮೊಗ್ಗ ಜಿಲ್ಲಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.